ಗ್ರಾಮೀಣ ಭಾಗದ ಇಂಟರ್ನೆಟ್‌ ಹಾಗೂ ಹತಾಶ ಮನಸ್ಥಿತಿ….! |

Advertisement

ಡಿಜಿಟಲ್‌ ಇಂಡಿಯಾ ಗ್ರಾಮೀಣ ಭಾಗಕ್ಕೂ ಈಗ ತಲಪುತ್ತಿದೆ. ಇದರ ಪರಿಣಾಮವಾಗಿ ಹಳ್ಳಿ ಹಳ್ಳಿಗೂ ಕೇಬಲ್‌ ಮೂಲಕ ಇಂಟರ್ನೆಟ್‌ ಸೇವೆ ಲಭ್ಯವಾಗುತ್ತಿದೆ. ಕೆಲವು ಕಡೆ ಬಿ ಎಸ್‌ ಎನ್‌ ಎಲ್‌ ಸೇವೆಯಾದರೆ ಇನ್ನೂ ಹಲವು ಕಡೆ ಖಾಸಗಿ ನೆಟ್ವರ್ಕ್.‌ ಹಳ್ಳಿಗಳಲ್ಲಿ ಇಂಟರ್ನೆಟ್‌ ಸೇವೆ ನೀಡುವುದು  ಸವಾಲಿನ ಕೆಲಸ. ಈ ಸವಾಲನ್ನು ಸ್ವೀಕರಿಸಿ ಅನೇಕ ಸಂಸ್ಥೆಗಳು ಸೇವೆ ನೀಡುತ್ತಿವೆ. ಆದರೆ ಈಚೆಗೆ ಹಳ್ಳಿಗಳಲ್ಲಿ ಇಂತಹ ಸೇವೆಗೆ ತಡೆಯುಂಟು ಮಾಡುವ ಮನಸ್ಥಿತಿಯೂ ಹೆಚ್ಚುತ್ತಿದೆ. ಅದರಲ್ಲಿ ಸುಳ್ಯ ತಾಲೂಕಿನ ಮರ್ಕಂಜದಲ್ಲಿ ಆಗಾಗ ಇಂತಹ ಮನಸ್ಥಿತಿಯ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುಳ್ಯ ತಾಲೂಕಿನ ಮರ್ಕಂಜದ ಕಡೆಗೆ ಬರುವ  BBNL  ಇಂಟರ್ ನೆಟ್ ಕೇಬಲ್ ಅನ್ನು ಯಾರೋ ತುಂಡು ಮಾಡಿದ್ದರು. ಗ್ರಾಮೀಣ ಭಾಗದಲ್ಲಿಯೂ ಉತ್ತಮ ಸೇವೆ ಲಭ್ಯವಾಗುವಂತೆ ಒಂದು ಕಡೆ ಖಾಸಗಿ ಕಂಪನಿಗಳು ಪ್ರಯತ್ನ ಮಾಡಿದರೆ ಇನ್ನೊಂದು ಕಡೆ ಈ ಸೇವೆಯನ್ನು ಧಕ್ಕೆ ಉಂಟು ಮಾಡುವ ಪ್ರಯತ್ನವೂ ಜೊತೆಯಾಗಿಯೇ ನಡೆಯುತ್ತಿದೆ. BSNL ಹಾಗೂ BBNL ವತಿಯಿಂದ ಈಗ ಗ್ರಾಮೀಣ ಭಾಗಕ್ಕೂ ಕೇಬಲ್‌ ಮೂಲಕ, ಏರ್‌ ಫೈಬರ್‌ ಮೂಲಕ ಇಂಟರ್ನೆಟ್‌ ಸೇವೆ ನೀಡಲಾಗುತ್ತಿದೆ. ಹೆಚ್ಚಿನ ಕಡೆಗಳಲ್ಲಿ  BSNL ಪ್ರಾಂಚೈಸಿ ಮೂಲಕ ಖಾಸಗಿ ಸಂಸ್ಥೆಗಳು ಜನರಿಗೆ ಸೇವೆ ನೀಡುತ್ತಿದೆ. ಈಚೆಗೆ BBNL ಕೂಡಾ ಸುಳ್ಯದ ಹಲವು ಕಡೆಗಳಲ್ಲಿ ಗುಣಮಟ್ಟದ ಸೇವೆಯನ್ನೂ ನೀಡುತ್ತಿದೆ. ಹಳ್ಳಿಗಳಲ್ಲಿ  ಸೇವೆ ನೀಡುವುದೇ ಕಷ್ಟದ ಕೆಲಸ. ಅಂತಹದ್ದರಲ್ಲಿ ಸಾಧ್ಯವಾದಷ್ಟು ಗುಣಮಟ್ಟದ ಸೇವೆಯನ್ನು ಖಾಸಗಿ ಸಂಸ್ಥೆಗಳು ನೀಡುತ್ತಿವೆ. ಆದರೆ ಸೇವೆಯನ್ನು ತಡೆಯುಂಟು ಮಾಡುವ ಮನಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೀಗ ಗ್ರಾಮಸ್ಥರು ತಂಡವೊಂದನ್ನು ರಚನೆ ಮಾಡಿ ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವು ಕಡೆ ಸಿಸಿ ಕ್ಯಾಮಾರ ಅಳವಡಿಕೆ ಹಾಗೂ ಇನ್ನೂ ಕೆಲವು ಕಡೆ ತಂಡ ಮಾಡಿ ಗಮನಿಸುವ ಕೆಲಸಕ್ಕೆ ಇಳಿಸಿದ್ದಾರೆ. ಇಡೀ ದೇಶದಲ್ಲಿ ಡಿಜಿಟಲ್‌ ಇಂಡಿಯಾ ಸದ್ದು ಮಾಡುತ್ತಿರುವಾಗ ಹೀನ ಮನಸ್ಥಿತಿಗಳನ್ನು ಪತ್ತೆ ಮಾಡಬೇಕಿದೆ ಎಂಬುದು ಗ್ರಾಹಕರ ಪ್ರಯತ್ನವಾಗಿದೆ.

Advertisement
Advertisement
Advertisement

 

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಗ್ರಾಮೀಣ ಭಾಗದ ಇಂಟರ್ನೆಟ್‌ ಹಾಗೂ ಹತಾಶ ಮನಸ್ಥಿತಿ….! |"

Leave a comment

Your email address will not be published.


*