ಪೋಷಕರಾಗುವುದು ಜೀವನದಲ್ಲಿ ಸಂತೋಷ. ದಂಪತಿಗಳು ಮತ್ತು ಕುಟುಂಬವು ಎಲ್ಲಾ ರೀತಿಯ ಸಂಭ್ರಮ ಮಾಡುವ ಕ್ಷಣ ಅದು. ಇಲ್ಲೊಬ್ಬರು ಅಂತಹ ಸಂಭ್ರಮದಲ್ಲಿ ಭಾಗಿಯಾಗಲು ಹೆಲಿಕಾಪ್ಟರ್ ಮೂಲಕ ಬಂದಿದ್ದಾರೆ..!. 1 ಲಕ್ಷ ರೂಪಾಯಿ ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಮಗುವನ್ನು ಮನೆಗೆ ಕರೆತರುವ ಮೂಲಕ ತಮ್ಮ ಸಂತೋಷದ ಕ್ಷಣವನ್ನು ಗುರುತಿಸಿದ್ದಾರೆ.
ಪುಣೆಯ ಶೆಲ್ಗಾಂವ್‌ನ ಕುಟುಂಬವೊಂದು ನವಜಾತ ಹೆಣ್ಣು ಮಗುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತರಲು ಭವ್ಯವಾದ ಸ್ವಾಗತವನ್ನು ನೀಡಿತು. ನವಜಾತ ಶಿಶುವು ಕುಟುಂಬದಲ್ಲಿ ಮೊದಲ ಹೆಣ್ಣು ಮಗುವಾಗಿರುವುದರಿಂದ ಕುಟುಂಬವು ಈ ಭವ್ಯವಾದ ಗೃಹಪ್ರವೇಶವನ್ನು ಏರ್ಪಡಿಸಿದೆ.
#WATCH Shelgaon, Pune | Grand Homecoming ! A family brought their newborn girlchild in a chopper
We didn't have a girlchild in our entire family. So, to make our daughter's homecoming special, we arranged a chopper ride worth Rs 1 lakh:Vishal Zarekar,father
(Source: Family) pic.twitter.com/tA4BoGuRbv
— ANI (@ANI) April 5, 2022
“ನಮ್ಮ ಇಡೀ ಕುಟುಂಬದಲ್ಲಿ ನಮಗೆ ಹೆಣ್ಣು ಮಗು ಇರಲಿಲ್ಲ. ಆದ್ದರಿಂದ, ನಮ್ಮ ಮಗಳ ಮನೆಗೆ ಬರುವುದನ್ನು ವಿಶೇಷವಾಗಿಸಲು, ನಾವು 1 ಲಕ್ಷ ರೂಪಾಯಿ ಮೌಲ್ಯದ ಚಾಪರ್ ರೈಡ್ ಅನ್ನು ಏರ್ಪಡಿಸಿದ್ದೇವೆ” ಎಂದು ನವಜಾತ ಶಿಶುವಿನ ತಂದೆ ವಿಶಾಲ್ ಜರೇಕರ್ ತಿಳಿಸಿದ್ದಾರೆ.