ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರದಿಂದ ಹೊಸ ಪ್ಲಾನ್‌ | ಮ್ಯಾನ್ಮಾರ್‌ನಿಂದ ಉದ್ದು, ತೊಗರಿ ಆಮದು ಮಾಡಿಕೊಳ್ಳಲು ನಿರ್ಧಾರ |

December 7, 2023
1:20 PM
ಈ ವರ್ಷದ ಆಹಾರ ಧಾನ್ಯಗಳ ಬೆಲೆ ಏರಿಕೆ ನಿಯಂತ್ರಣದ ಕಡೆಗೆ ಸರ್ಕಾರ ಹೆಚ್ಚು ಗಮನಹರಿಸಿದೆ.

ದೇಶದಲ್ಲಿ(country) ದಿನನಿತ್ಯ ಬಳಕೆಯ ವಸ್ತುಗಳ ಬೆಲೆ(prices) ಗಗನಕ್ಕೇರುತ್ತಿದೆ. ಅದರಲ್ಲೂ ಆಹಾರ ಪದಾರ್ಥಗಳ ಬೆಲೆಯಂತು ಹೇಳತೀರದು. ತರಕಾರಿ, ಬೇಳೆ ಕಾಳುಗಳ(vegetables and pulses) ಬೆಲೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಕೇಂದ್ರ ಸರ್ಕಾರ(central government) ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆಯಾದರೂ, ಹಣದುಬ್ಬರದ(inflation) ಹಿನ್ನೆಲೆ ಬೆಲೆ ಏರುತ್ತಲೇ ಇದೆ. ಹಿಂದೆ ಈರುಳ್ಳಿ ಬೆಲೆ ಏರದಂತೆ ರಫ್ತುನ್ನು ನಿಲ್ಲಿಸಿತ್ತು. ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಳೆಕಾಳುಗಳ ಬೆಲೆಯನ್ನು (Risinig Price) ನಿಯಂತ್ರಿಸುವ ಸಲುವಾಗಿ ಮ್ಯಾನ್ಮಾರ್‌ನಿಂದ ಜನವರಿಯಲ್ಲಿ 400,000 ಟನ್‌ಗಳಷ್ಟು ತೊಗರಿ ಬೇಳೆ ಹಾಗೂ ಫೆಬ್ರವರಿಯಲ್ಲಿ 1 ಮಿಲಿಯನ್ ಟನ್ ಉದ್ದಿನ ಬೇಳೆ ಆಮದು ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.

Advertisement
Advertisement

ಸ್ಟಾಕ್ ಮಿತಿ ನಿರ್ಬಂಧ ವಿಸ್ತರಿಸಿದ ಸರಕಾರದ ಗ್ರಾಹಕರಿಗೆ ತೊಗರಿಬೇಳೆ ಹಾಗೂ ಉದ್ದಿನಬೇಳೆ ಕೈಗೆಟಕುವ ದರದಲ್ಲಿ ದೊರೆಯಬೇಕೆಂಬ ನಿಟ್ಟಿನಲ್ಲಿ ಸರಕಾರ ಇವುಗಳ ಮೇಲೆ ಸ್ಟಾಕ್ ಮಿತಿಯನ್ನು ವಿಧಿಸಿತ್ತು. ಆದರೆ ಈ ನಿರ್ಬಂಧ ಮಿತಿ ಅಕ್ಟೋಬರ್ 30 ಕ್ಕೆ ಕೊನೆಯಾಗಿದ್ದು ಸರಕಾರ ಅದನ್ನು ಡಿಸೆಂಬರ್ ಕೊನೆಯವರೆಗೆ ವಿಸ್ತರಿಸಿದೆ. ಸರಕಾರದ ಅಂಕಿಅಂಶಗಳ ಪ್ರಕಾರ ಉದ್ದಿನ ಬೆಲೆ ಈ ಬಾರಿ ಕ್ವಿಂಟಲ್‌ಗೆ ರೂ 11,198.09 ವಾಗಿದ್ದು ಕಳೆದ ವರ್ಷ ಕ್ವಿಂಟಲ್‌ಗೆ ರೂ 9,627.48 ಎಂದೆನಿಸಿತ್ತು. ಧಾನ್ಯಗಳಲ್ಲಿನ ರಿಟೇಲ್ ಹಣದುಬ್ಬರವು ಅಕ್ಟೋಬರ್‌ನಲ್ಲಿ 18.79% ಕ್ಕೆ ಹೆಚ್ಚಿತು ಅದರಲ್ಲೂ ತೊಗರಿಬೇಳೆ (40.94%), ಗ್ರಾಮ್ (11.16%), ಹಾಗೂ ಹೆಸರುಬೇಳೆ (12.75%) ಬೆಲೆ ಹೆಚ್ಚಳವನ್ನು ಕಂಡಿದೆ.

Advertisement

ಸಪ್ಟೆಂಬರ್ ತಿಂಗಳಿನಲ್ಲಿ ತೊಗರಿಬೇಳೆಯ ಹಣದುಬ್ಬರದ ದರವು 37.3% ಕ್ಕಿಂತ ಹೆಚ್ಚಾಗಿದೆ ಎಂಬುದಾಗಿ ವರದಿಯಾಗಿದೆ. ಹಾಗಾಗಿ ತೊಗರಿ ಮೇಲಿರುವ ಆಮದು ದರವನ್ನು ರದ್ದುಗೊಳಿಸುವ ಮೂಲಕ ಆಫ್ರಿಕಾ ಮತ್ತು ಮ್ಯಾನ್ಮಾರ್‌ನಿಂದ ಆಮದುಗಳನ್ನು ಹೆಚ್ಚಿಸುವ ಸರಕಾರದ ಪ್ರಯತ್ನದ ಹೊರತಾಗಿಯೂ ಹಣದುಬ್ಬರ ದರ ಏರಿಕೆಯಾಗಿದೆ. ದೇಶದಲ್ಲಿ ತೊಗರಿ ಬೇಳೆ ವ್ಯವಸಾಯವು ಖಾರಿಫ್ ಋತುವಿನಲ್ಲಿ ತಗ್ಗಿದ್ದು, ಉತ್ಪಾದನೆಯ ಕುಸಿತಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ. ಇದರಿಂದ ಆಹಾರ ಹಣದುಬ್ಬರದ ಮೇಲೆ ಪರಿಣಾಮ ಉಂಟಾಗಿದೆ.

2023-24ರ ಖಾರಿಫ್ ಬೆಳೆಗಳಿಗೆ ಕೃಷಿ ಸಚಿವಾಲಯದ ಅಂದಾಜಿನಂತೆ ತೊಗರಿ ಉತ್ಪಾದನೆಯು 3.42 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ ಕಳೆದ ವರ್ಷದ ಅದೇ ಉತ್ಪಾದನೆಯನ್ನೇ ಇದು ಹೋಲುತ್ತಿದ್ದು ಏರಿಕೆ ಕಂಡುಬಂದಿಲ್ಲ ಎಂಬುದು ತಿಳಿದುಬಂದಿದೆ. ಕಳೆದ ವರ್ಷ 3.10 ಮಿಲಿಯನ್ ಹೆಕ್ಟೇರ್ ವ್ಯವಸಾಯ ಭೂಮಿಯಲ್ಲಿ ತೊಗರಿ ಬೆಳೆ ಬೆಳೆದಿದ್ದರೆ ಈ ಬಾರಿ ತೊಗರಿ ಕೃಷಿಯು 3.07 ಮಿಲಿಯನ್ ಹೆಕ್ಟೇರ್‌ಗೆ ಸೀಮಿತಗೊಂಡಿರುವುದು ಕಂಡುಬಂದಿದೆ. ಭಾರತದ ಹೆಚ್ಚಿನ ಭಾಗಗಳಲ್ಲಿ 45 ಲಕ್ಷ (4.5 ಮಿಲಿಯನ್) ಮೆಟ್ರಿಕ್ ಟನ್‌ಗಳಷ್ಟು ತೊಗರಿಬೇಳೆಯ ವಾರ್ಷಿಕ ಅಗತ್ಯವಿದೆ ಎಂದು ಭಾರತ ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳ ಸಂಘದ ಅಧ್ಯಕ್ಷ ಬಿಮಲ್ ಕೊಠಾರಿ ತಿಳಿಸಿದ್ದಾರೆ.

Advertisement
The prices of daily use items in the country are skyrocketing. The price of vegetables and pulses is increasing day by day. Although the central government is taking some measures, prices continue to rise on the backdrop of inflation. Official information has come out that the government has decided to import 400,000 tonnes of Togari sorghum in January and 1 million tonnes of long sorghum in February from Myanmar in order to suppress the increasing price of pulses in the domestic market.
( Source:  ET)
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror