ರಾಜ್ಯದ ಎಲ್ಲಾ ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಸುದ್ದಿ ನೀಡಿದೆ. ಅಲ್ಲದೇ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬ ರೇಷನ್ ಕಾರ್ಡ್ ಹೊಂದಿರುವವರು ಪಡದುಕೊಳ್ಳಬಹುದು.
ಬಿಪಿಎಲ್, ಎಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಪಡಿತರದಾರರಿಗೆ ಈಗ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ತಂದಿದೆ. ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಸೇರಿದಂತೆ ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಇದೀಗ ರಾಜ್ಯದ ಎಲ್ಲಾ ಜನತೆಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ.
ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ವಿತರಣೆ ಮಾಡುತ್ತಿರುವ ರೇಷನ್ ನಲ್ಲಿ ಅಥವಾ ಆಹಾರ ಧಾನ್ಯಗಳಲ್ಲಿ ಇದೀಗ ಎಲ್ಲಾ ಸಾರ್ವಜನಿಕರಿಗೆ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ಹಲವರು ತೂಕ ಮಾಡುವ ವೇಳೆಯಲ್ಲಿ ಹೆಚ್ಚು ಕಡಿಮೆ ಮಾಡುತ್ತಿದ್ದು, ಎಲ್ಲಾ ಸಾರ್ವಜನಿಕರು ಮೋಸದ ವಂಚನೆಯಲ್ಲಿ ಸಿಲುಕುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ NFSA ಅಡಿಯಲ್ಲಿ ಪ್ರತಿ ಎಲ್ಲಾ ದೇಶದ ಹಾಗೂ ನಮ್ಮ ರಾಜ್ಯದ ನ್ಯಾಯಬೆಲೆ ಅಂಗಡಿಯಲ್ಲಿ ಇದೀಗ ಕೇಂದ್ರ ಸರ್ಕಾರದಿಂದ ಎಲೆಕ್ಟ್ರಾನಿಕ್ ಮಾಪಕವಾದ EPOS ಸಾಧನವನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.
ಈ ನಿಯಮ ಜಾರಿಗೆ ಬಂದ ನಂತರ ಎಲ್ಲಾ ಪಡಿತರ ವಿತರಕರು ರೇಷನ್ ಆಹಾರ ಧಾನ್ಯ ನ್ಯಾಯಬೆಲೆಯಲ್ಲಿ ವಿತರಣೆ ಮಾಡುತ್ತಿರುವವರು ಈ ಎಲೆಕ್ಟ್ರಾನಿಕ್ ಮಾಪಕವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಖುದ್ದಾಗಿ ಅಳವಡಿಸಿಕೊಡಲಾಗುತ್ತದೆ. ಇದರಿಂದಾಗಿ ಸಾರ್ವಜನಿಕರಿಗೂ ಕೂಡ ಎಷ್ಟು ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಾರೆ, ಹಾಗು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕ್ಕು ಕೂಡ ಸಾವರ್ಜನಿಕರಿಗೆ ಎಷ್ಟು ಆಹಾರ ಧಾನ್ಯವನ್ನು ವಿತರಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತದೆ. ಇದರಿಂದಾಗಿ ಯಾವುದೇ ತರಹದ ತೂಕದಲ್ಲಿ ಅಡಚಣೆಗಳು ಆಗುವುದಿಲ್ಲ. ಹಾಗೂ ಸಾರ್ವಜನಿಕರಿಗೆ ಸಮರ್ಪಕವಾಗಿ ಆಹಾರ ಧಾನ್ಯ ಗಳು ಸಿಗಲಿವೆ.
ತನ್ನಲ್ಲಿರುವುದನ್ನು ಸಮ್ಮನಸ್ಸಿನಿಂದ ನೀಡುವುದು ದಾನ. ಪಡಕೊಂಡವನ ತೃಪ್ತಿಯು ದಾನಿಗೆ ಹಾರೈಕೆ. ಇಲ್ಲಿ ಪ್ರಚಾರದ…
ಚಂದನ್ ಕೆ ಪಿ, 8 ನೇ ತರಗತಿ, ರೋಟರಿ ಪ್ರೌಢಶಾಲೆ, ಪಡ್ಡಂಬೈಲು |…
ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 32ನೇ ಚಾತುರ್ಮಾಸ್ಯ ವ್ರತ ಆಷಾಢ…
ಭಾರತವು ವಾರ್ಷಿಕವಾಗಿ ಅಂದಾಜು 1.4 ಮಿಲಿಯನ್ ಟನ್ ಹಲಸಿನ ಹಣ್ಣನ್ನು ಉತ್ಪಾದಿಸುತ್ತದೆ, ಆದರೆ…
Ayanshi K.H, 1st. Std, New Horizon School Bahrain ಅಯಂಶಿ ಕೆಚ್,…
ಒಂದು ಕಡೆ ಅಡಿಕೆ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟ, ಇನ್ನೊಂದು ಕಡೆ ದೇಶದ…