ಹಳೆ ಕಾರುಗಳ ಮಾರಾಟಕ್ಕೆ ಹೊಸ ನಿಯಮ ಜಾರಿ |

Advertisement

ಹಳೆ ಕಾರ್ ಗಳ ಮಾರಾಟಕ್ಕೆ ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಡಿಸೆಲ್ಲರ್ ಗಳ ನೋಂದಣಿ ಕಡ್ಡಾಯವಾಗಿದ್ದು, ಮಧ್ಯವರ್ತಿಗಳು ಲೈಸೆನ್ಸ್ ಪಡೆದುಕೊಳ್ಳಬೇಕಿದೆ. ಈ ಮೂಲಕ ಗ್ರಾಹಕರ ರಕ್ಷಿಸುವ ಮತ್ತು ವಾಹನಗಳ ಮರು ಮಾರಾಟ ನಿಯಂತ್ರಿಸಲು ಸರ್ಕಾರ ಹೊಸ ನಿಯಮ ಜಾರಿಗೆ ಸರ್ಕಾರ ನಿರ್ಧರಿಸಿದೆ.

Advertisement

ಮಧ್ಯವರ್ತಿಗಳು ವಾಹನಗಳ ಮರು ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ತಾವು ವ್ಯವಹಾರ ನಡೆಸುವ ಸಂಸ್ಥೆಯ ಹೆಸರನ್ನು ಸಾರಿಗೆ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಧ್ಯವರ್ತಿಗಳು ರಾಜ್ಯ ಸಾರಿಗೆ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ನಂತರ ಮರು ಮಾರಾಟಗಾರರಿಗೆ ಲೈಸೆನ್ಸ್ ನೀಡಲಾಗುವುದು.

Advertisement
Advertisement
Advertisement

ರೀಸೆಲ್ಲರ್ ಡೀಲರ್ ಶಿಪ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಲೈಸೆನ್ಸ್ ರದ್ದುಗೊಳಿಸಿ ದಂಡ ವಿಧಿಸಲಾಗುವುದು. ವಾಹನ ಮಾರಾಟಕ್ಕೆ ನೋಂದಾಯಿಸಿದ ನಂತರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಡೀಲರ್ ಮಾತ್ರ ಜವಾಬ್ದಾರಿಯಾಗಿರುತ್ತಾರೆ. ಬಳಸಿದ ವಾಹನಗಳ ಖರೀದಿದಾರರು ಮತ್ತು ಮಾರಾಟಗಾರರ ರಕ್ಷಣೆಯ ಉದ್ದೇಶ ಹಾಗೂ ಪಾರದರ್ಶಕತೆ ಕಾಪಾಡುವ ಹಿನ್ನೆಲೆ ಹೊಸ ಮಾರ್ಗ ಸೂಚಿ ಜಾರಿಗೆ ತರಲಾಗುತ್ತದೆ.

ಹಳೆ ಕಾರು ಖರೀದಿಸಿದ ಮಾಲೀಕರು ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ವಾಹನಗಳ ಹಿಂದಿನ ಮಾಲೀಕನಿಗೆ ದಂಡ ನೀಡುತ್ತಿರುವ ದೂರುಗಳು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಹಳೆ ಕಾರುಗಳ ಮಾರಾಟಕ್ಕೆ ಹೊಸ ನಿಯಮ ಜಾರಿ |"

Leave a comment

Your email address will not be published.


*