ಕುದುರೆಮುಖಿ ರಾಷ್ಟ್ರೀಯ ಉದ್ಯಾನವನದ ಶಿಖರಗಳ ಚಾರಣ ಮಾರ್ಗದ ಬಳಿ, ಸಮುದ್ರ ಮಟ್ಟದಿಂದ ಸುಮಾರು 1,630 ಮೀ ಎತ್ತರದಲ್ಲಿರುವ ಶೋಲಾ ಹುಲ್ಲಗಾವಲು ಪ್ರದೇಶದಲ್ಲಿ ಇದುವರೆಗೆ ಕಂಡುಬಂದಿರದ ಬಾಲ್ಸಮ್ ಸಸ್ಯಗಳಲ್ಲೇ ಅತ್ಯಂತ ಸಣ್ಣ ಹೂವುಳ್ಳ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದ್ದು. ಈ ಹೊಸ ಪ್ರಭೇದಕ್ಕೆ ವೈಜ್ಞಾನಿಕವಾಗಿ ಇಂಪೇಷಿಯನ್ಸ್ ಸೆಲ್ವಸಿಂ ಎಂದು ಹೆಸರಿಸಲಾಗಿದೆ. ಈ ಸಸ್ಯವು ಚಾರಣ ಮಾರ್ಗದಲ್ಲಿ ಪತ್ತೆಯಾಗಿರುವುದರಿಂದ ಪ್ರವಾಸಿಗರ ಸಂಚಾರ ಹೆಚ್ಚಾದಲ್ಲಿ ಸಸ್ಯಕ್ಕೆ ಅಪಾಯ ಉಂಟಾಗುವ ಸಂಭವವಿದೆ. ಹಾಗಾಗಿ ಇದರ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆಯಾದ ಐಯುಸಿಎನ್ ರೆಡ್ ಲಿಫ್ಟ್‍ನಲ್ಲಿ ಇದಕ್ಕೆ ಡೇಟಾ ಡಿಫಿಶಿಯೆಂಟ್ ಎಂಬ ತಾತ್ಕಾಲಿಕ ಸ್ಥಾನಮಾನ ನೀಡಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

