ಹೊಸವರ್ಷದ ನಿರೀಕ್ಷೆಗಳು ನಿಜವಾಗಲಿ

January 1, 2021
11:23 AM
ರಿಸ್ಥಿತಿ ಬದಲಾಗಿದೆ, ಎಂದಿನಂತಿಲ್ಲ. ಹೊಸವರ್ಷದ ಸ್ವಾಗತಕ್ಕೆ ವಿಶೇಷ ತಯಾರಿಯೊಂದಿಗೆ ಸಿದ್ಧವಾಗುತ್ತಿದ್ದ ಮನಸುಗಳು ಸುಮ್ಮನಾಗಿವೆ. ನಿನ್ನೆ ಮೊನ್ನೆಯವರೆಗೆ ತಣ್ಣಗಾಗಿದ್ದ ಕೊರೊನಾ ಮತ್ತೆ ಹೊಸ ರೂಪದಲ್ಲಿ ಪತ್ತೆಯಾಗುವುದರೊಂದಿಗೆ ಸ್ವಲ್ಪವೇ ಗರಿಕೆದರಿದ್ದ ಉತ್ಸಾಹ ಅಲ್ಲಿಗೆ ಕಮರಿದೆ.

Advertisement

2020 ರ ಆರಂಭದಲ್ಲೇ ಶುರುವಾದ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಯಿತು. ವುಹಾನ್ ನಲ್ಲಿ ಆರಂಭವಾದ ಕೋವಿಡ್ ಕೆಲವೇ ದಿನಗಳಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಿಸಿತು. ಕಂಡು ಕೇಳರಿಯದ ಪರಿಣಾಮಗಳನ್ನು ಎದುರಿಸಬೇಕಾಯಿತು. ಅನಿರೀಕ್ಷಿತ ಪರಿಸ್ಥಿತಿ.

ಮನುಜನ ದುರಾಸೆ ಹೆಚ್ಚಾಯಿತೋ, ಪ್ರಕೃತಿ ಬದಲಾವಣೆ ಬಯಸಿತೋ ಅರಿಯದು.‌ ಬದುಕಿನ ಏಕತಾನತೆಯಿಂದ ಬೇಸತ್ತವರು ಒಂದು ಬದಲಾವಣೆ ಬಯಸಿದರು‌‌. ಕೊರೊನಾ ಬಂದು ಎಲ್ಲವನ್ನೂ ಬದಲಿಸಿ ಬಿಟ್ಟಿತು. 2020 ಯಾರು ಕೂಡ ಮರೆಯಲಾರದ ವರ್ಷವೆಂದೇ ದಾಖಲಾಯಿತು.

ಬದಲಾದ ಜೀವನ ಶೈಲಿಗೆ ಒಗ್ಗಿಕೊಂಡ ಜನತೆ 2021 ನ್ನು ಹೊಸ ನಿರೀಕ್ಷೆಯೊಂದಿಗೆ ಸ್ವಾಗತಿಸಲು ಸಜ್ಜಾಗಿಯಾಗಿದೆ. ಇಂದಿನ ಜನರ ಆಯ್ಕೆಗಳು, ಆದ್ಯತೆಗಳು ಬದಲಾಗಿವೆ. ದುಬಾರಿ ಜೀವನ ಶೈಲಿಗಿಂತ, ಸರಳ ಆರೋಗ್ಯಕರ ಪರಿಸರವೇ ಮುಖ್ಯ ಆಯ್ಕೆಗಳಾಗಿವೆ. ಆಹಾರದ ವಿಷಯದಲ್ಲೂ ಮನೆ ಆಹಾರದತ್ತಲೇ ಒಲವು ಮೂಡಿದೆ. ಕಹಿ , ಒಗರು ಆದರೂ ಅಮ್ಮ ಮಾಡಿ ಕೊಡುವ ಕಷಾಯವೇ ಅಮೃತವಾಗಿದೆ.

ಹೊಸ ವರುಷದ ಹೊಸ್ತಿಲಲ್ಲಿ ನಿಂತಿದ್ದೇವೆ, ನವ ಕನಸುಗಳೊಂದಿಗೆ. ಒಳ್ಳೆಯ ಮನಸಿನಿಂದ, ಸುಂದರ ಕಲ್ಪನೆಗಳೊಂದಿಗೆ 2021ನೇಯ ವರ್ಷವನ್ನು ಸ್ವಾಗತಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Advertisement

ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?
July 8, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ
July 8, 2025
7:11 AM
by: The Rural Mirror ಸುದ್ದಿಜಾಲ
ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್
July 7, 2025
9:25 PM
by: ದ ರೂರಲ್ ಮಿರರ್.ಕಾಂ
ಮೆಕ್ಕೆಜೋಳ ಸಮಾವೇಶ | ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ
July 7, 2025
9:17 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group