2022 | ಹೊಸವರ್ಷದ ಶುಭಾಶಯಗಳು | ಸಂತಸದತ್ತ ಮುಖಮಾಡೋಣ |

January 1, 2022
9:12 AM

ಡಿಸೆಂಬರ್ ಬರುತ್ತಿದ್ದಂತೆ ಬೀದಿ ಬೀದಿಗಳು ಕಳೆಗಟ್ಟುವುದು, ವಿದ್ಯುತ್ ದೀಪಗಳಿಂದ ಅಲಂಕರಿಸ್ಪಡುವುದು, ಸುಂದರವಾದ ಕ್ರಿಸ್ ಮಸ್ ಟ್ರೀ ಗಳು, ತಯಾರಿ ಹಂತದಲ್ಲಿರುವ ನಮೂನೆವಾರು ಕೇಕ್ ಗಳು . ಪ್ರತಿ ವರ್ಷ ಡಿಸೆಂಬರ್ ಇಪ್ಪತೈದರ ಕ್ರಿಸ್ಮಸ್ ಹಬ್ಬ ಮುಗಿಯುವುದು ಜನವರಿ ಒಂದರ ಆರಂಭದೊಂದಿಗೆ.

ವರ್ಷದ ಕೊನೆಯ ತಿಂಗಳು ಆರಂಭವಾತ್ತಿರುವಂತೆ ವಿದೇಶದಲ್ಲಿ ನೆಲೆಸಿರುವ ಬಂಧು ಬಳಗ, ಮಿತ್ರರು ಕಳುಹಿಸುವ ಅಲ್ಲಿನ ಛಾಯಾಚಿತ್ರಗಳನ್ನು ನೋಡುವುದೇ ಸಂಭ್ರಮ. ಒಂದೊಂದು ಕಡೆ ಒಂದೊಂದು ಬಗೆಯ ಆಚರಣೆ. ಕ್ಯಾಲೆಂಡರ್ ವರ್ಷಾಚರಣೆಗೆ ಇತ್ತೀಚೆಗೆ ನಮ್ಮಲ್ಲೂ ಬಹಳ ಸಂಭ್ರಮ ಪಡುತ್ತೇವೆ. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು , ಉಡುಗೊರೆ ಕೊಡುವುದು, ಚಾಕಲೇಟ್, ಸಿಹಿ ಹಂಚುವುದು ಎಲ್ಲಾ ಇದ್ದದ್ದೇ ಅಲ್ಲವೇ . ಇವಕ್ಕೆ ಒಂದು ಕಾರಣ ಬೇಕಷ್ಟೇ!2020 ಹಾಗೂ 2021 ಬಹಳ ನೆನಪಿನಲ್ಲಿ ಉಳಿಯುವ ವರ್ಷಗಳು. ಖುಷಿಯ ವಿಚಾರಕ್ಕಿಂತ ದುರಂತ ವರ್ಷಗಳೇ ಅನ್ನಬಹುದು.

ಅಲ್ಲಾ ಬದಲಾವಣೆ ಜಗದ ನಿಯಮ ಸರಿ, ಆದರೆ ಈ ಪರಿಯ ಬದಲಾವಣೆ?!?!.. ನೈಸರ್ಗಿಕ ಅವಘಡಗಳು ನಿತ್ಯವೆಂಬಂತೆ ನಡೆಯುತ್ತಿವೆ. ಮಳೆಯ ಸ್ವರೂಪ ಬದಲಾಗುತ್ತಿದೆ. ಪರಿಸರದಲ್ಲಿನ ಕಾಯಿಲೆಗಳ ತೀವ್ರತೆ , ಬಾಧಿಸುವ ವ್ಯಾಪ್ತಿ ದಿನದಿಂದ ದಿನಕ್ಕೆ ಬೇರೆ ಬೇರೆಯೇ. ಒಬ್ಬನಿಂದ ಇನ್ನೊಬ್ಬನಿಗೆ ಹರಡುವ , ಆಮೇಲಿನ ಪ್ರಭಾವ ಎಲ್ಲವೂ ವಿಭಿನ್ನ. ಎಲ್ಲವೂ ಆಯೋಮಯವೆನಿಸುತ್ತಿದೆ. ಈ ಕಷ್ಟ, ಸಂಕಷ್ಟ, ಬೇಸರಿಕೆ,ನೋವು ,ನಷ್ಟಗಳ ಭಾವನೆಗಳೆಲ್ಲವನ್ನು ಒಂದು ಗಂಟು ಮಾಡಿ ಬದಿಯಲ್ಲಿರಿಸೋಣ. ಮನಸನ್ನು ಹೊಸ ವರುಷದ ಸ್ವಾಗತಕ್ಕೆ ಸಿದ್ಧಗೊಳಿಸೋಣ.

2022 ದೇಶಕ್ಕೆ ಹಿತವನ್ನೇ ನೀಡಲಿ. ಅಭಿವೃದ್ಧಿಯ ಪಥದಲ್ಲಿ ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆಯಲಿ. ಮನಸಿನ ಸ್ವಾರ್ಥ, ಲೋಭ, ಹೊಟ್ಟೆಗಿಚ್ಚು ಬದಿಗಿಟ್ಟು ದೇಶಹಿತವೇ ಮುಖ್ಯವಾಗಲಿ . ಉಲ್ಲಾಸಕರವಾಗಿ ಮನಮನದಲ್ಲಿ ಸಂತಸವೇ ತುಂಬಿರಲಿ.‌ ಹೊಸ ವರುಷದ ಶುಭಾಶಯಗಳು.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ
ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ
April 1, 2026
6:07 AM
by: ಮಿರರ್‌ ಡೆಸ್ಕ್
ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್
April 1, 2026
5:56 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror