ದಕ್ಷಿಣ ವಲಯ ಡೈರಿ ಶೃಂಗಸಭೆ | ವಾರ್ಷಿಕ ಹಾಲಿನ ಉತ್ಪನ್ನಗಳ ಮೇಲಿನ ಹಣದುಬ್ಬರ ಕೇವಲ 2.4ರಷ್ಟಿದೆ |

January 11, 2025
7:31 AM

ಆಹಾರೋತ್ಪಾದನೆಯ ಕ್ಷೇತ್ರದಲ್ಲಿ ಹಾಲಿ ಉತ್ಪಾದನೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಭಾರತದಲ್ಲಿ ಆಹಾರ ಪದಾರ್ಥಗಳಿಗಾಗಿ ಪ್ರತಿ ವರ್ಷ ಜನರು ತಮ್ಮ ಸಂಪಾದನೆಯ ಶೇಕಡಾ 40ರಿಂದ 46ರಷ್ಟು ವೆಚ್ಚ ಮಾಡುತ್ತಾರೆ. ಆಹಾರ ಪದಾರ್ಥಗಳ ಹಣದುಬ್ಬರ ಅತಿಯಾಗಿದೆ. ಆದರೆ ಹಾಲು ಮತ್ತು ಹಾಲಿನ ಮೇಲಿನ ವೆಚ್ಚ ತುಂಬಾ ಕಡಿಮೆಯಾಗಿದೆ. ವಾರ್ಷಿಕ ಹಾಲಿನ ಉತ್ಪನ್ನಗಳ ಮೇಲಿನ ಹಣದುಬ್ಬರ ಕೇವಲ 2.4ರಷ್ಟಿದೆ ಎಂದು ಭಾರತೀಯ ಡೈರಿ ಅಸೋಸಿಯೇಷನ್ ಅಧ್ಯಕ್ಷ ಡಾ.ಆರ್.ಎಸ್.ಸೋಧಿ ಹೇಳಿದರು.

ಅವರು ಇಂಡಿಯನ್ ಡೈರಿ ಅಸೋಸಿಯೇಷನ್  ದಕ್ಷಿಣ ವಲಯದ ವತಿಯಿಂದ ದಕ್ಷಿಣ ಡೈರಿ ಶೃಂಗಸಭೆಯಲ್ಲಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಡೈರಿಗಳು ಸಾಧಿಸಿರುವ ಸದೃಢ ಬೆಳವಣಿಗೆಯಿಂದ ಹಣದುಬ್ಬರ ಕಡಿಮೆಯಾಗಲು ಸಾಧ್ಯವಾಗಿದೆ. ಡೈರಿ ಕ್ಷೇತ್ರಕ್ಕೆ ಆಧುನೀಕರಣ ಮತ್ತು ತಾಂತ್ರಿಕ ಪ್ರವೇಶ ಹಾಲಿನ ಗುಣಮಟ್ಟ, ಬೆಲೆ , ಉತ್ಪಾದನೆ ಹೆಚ್ಚಳಕ್ಕೆ ಶಕ್ತಿ ನೀಡಿತು ಎಂದು ಅಭಿಪ್ರಾಯಪಟ್ಟರು.

ಭಾರತೀಯ ಡೈರಿ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಡಾ.ರಾಮ್ ಪಿ. ಅನೇಜಾ, ಹಿಂದೆ ಪೂರ್ವ ದೇಶಗಳಲ್ಲಿ ಹಾಲಿನ ಸೇವನೆ ಜನಪ್ರಿಯವಾಗಿರಲಿಲ್ಲ . ಹಾಲು ಸೇವನೆ ಮಾಡುವವರು ದೈಹಿಕವಾಗಿ ಎತ್ತರವಾಗಿರುತ್ತಾರೆ. ಈ ಕಾರಣದಿಂದಲೇ ಹಾಲು ಸೇವಿಸುತ್ತಿದ್ದ ಅಮೆರಿಕದವರು ಜಪಾನಿಯರ ವಿರುದ್ಧ ಎರಡನೇ ಎರಡನೇ ಮಹಾಯುದ್ಧದಲ್ಲಿ ಗೆದ್ದರು ಎಂಬ ತಮಾಶೆಯ ಮಾತು ದಶಕಗಳ ಹಿಂದೆ ಜನಪ್ರಿಯವಾಗಿತ್ತು. ಹಾಲಿನ ಉತ್ಪಾದನೆಯನ್ನು ದಶಕಗಳಿಂದ ನಿರ್ಲಕ್ಷಿಸಿದ್ದ  ಚೀನಿಯರೂ ಬಳಿಕ ಹಾಲು ಸೇವಿಸುವುದನ್ನು ಕಲಿತರು. ಇಂದು ಚೀನಾ ಜಗತ್ತಿನಲ್ಲೇ ಅತಿ ಹೆಚ್ಚು 60 ಮಿಲಿಯನ್ ಟನ್ ಹಾಲು ಉತ್ಪಾದಿಸುತ್ತಿದೆ. ಡೈರಿ ಇಂದು ಹೈನುಗಾರಿಕೆಯಿಂದ ಉದ್ಯಮದ ವರೆಗೆ ಬೆಳೆದು ನಿಂತಿದ್ದು, ಈ ಕ್ಷೇತ್ರ ಉಜ್ವಲ ಭವಿಷ್ಯ ಹೊಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಎಬಿಎಲ್ಇ ಅಧ್ಯಕ್ಷ ಜಿ.ಎಸ್.ಕೃಷ್ಣನ್, ದೊಡ್ಲಾ ಸಂಸ್ಥೆಯ ಬಿ.ವಿ.ಕೆ.ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

 

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?
January 9, 2026
10:08 PM
by: ದ ರೂರಲ್ ಮಿರರ್.ಕಾಂ
ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ
January 9, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror