ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |

April 3, 2025
7:42 AM

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2024-25ನೇ ಹಣಕಾಸು ವರ್ಷದಲ್ಲಿ 5150 ಕಿ.ಮೀ. ಹೆದ್ದಾರಿ ನಿರ್ಮಾಣ ಗುರಿಯನ್ನು ಹೊಂದಿತ್ತು. ಆದರೆ ಅದಕ್ಕೂ ಮೀರಿದ ಸಾಧನೆಯನ್ನು ಮಾಡಿದೆ. ಈ ವರ್ಷ 5600 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿದ ಹೇಳಿಕೆಯೊಂದರಲ್ಲಿ, ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಯೋಜನಾ ವೆಚ್ಚವು 2 ಲಕ್ಷ 40 ಸಾವಿರ ಕೋಟಿ ರೂಪಾಯಿ ಗುರಿ ಇರಿಸಿಕೊಂಡಿತ್ತು, ಆದರೆ 2 ಲಕ್ಷ 50 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ  ಗರಿಷ್ಠಮಟ್ಟವನ್ನು ತಲುಪಿದೆ ಎಂದು ತಿಳಿಸಿದೆ.

Advertisement
Advertisement

ಹಿಂದಿನ ಹಣಕಾಸು ವರ್ಷ 2023-2024 ಕ್ಕೆ ಹೋಲಿಸಿದರೆ  ವೆಚ್ಚವು ಸುಮಾರು 21 ಶೇಕಡಾ ಮತ್ತು 2022-23 ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಸುಮಾರು 45 ಶೇಕಡಾ ಹೆಚ್ಚಾಗಿದೆ. 2024-25 ರ ಹಣಕಾಸು ವರ್ಷದಲ್ಲಿ, NHAI ಹಣಗಳಿಕೆಗಾಗಿ ಮೂರು ವಿಧಾನಗಳನ್ನು ಬಳಸಿಕೊಂಡಿತು, ಅವುಗಳಲ್ಲಿ ಟೋಲ್ ಆಪರೇಟ್ ಟ್ರಾನ್ಸ್‌ಫರ್ (TOT), ಮೂಲಸೌಕರ್ಯ ಹೂಡಿಕೆ ಟ್ರಸ್ಟ್ (InvIT) ಮತ್ತು ಟೋಲ್ ಸೆಕ್ಯುರಿಟೈಸೇಶನ್ ಸೇರಿವೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಕಾಲಿಕ ಮಳೆ | ಮಾವು ಇಳುವರಿ ಕುಸಿತ | ಬೆಲೆ ಕುಸಿತ | ರೈತರಿಗೆ ನಿರಾಸೆ |
May 22, 2025
7:33 AM
by: The Rural Mirror ಸುದ್ದಿಜಾಲ
ಶಾಲೆ ಆರಂಭ | ಯೋಜಿತ ಮತ್ತು ಪರಿಣಾಮಕಾರಿ ಆರಂಭದ ಅಗತ್ಯ
May 22, 2025
7:17 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಂಜೆ ದೀಪ ಹಚ್ಚುವಾಗ ಪಾಲಿಸಬೇಕಾದ ಕೆಲವು ನಿಯಮಗಳು
May 22, 2025
6:45 AM
by: ದ ರೂರಲ್ ಮಿರರ್.ಕಾಂ
ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ
May 21, 2025
10:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group