ಕೇರಳದಲ್ಲಿ ಮತ್ತೆ ನಿಫಾ ವೈರಸ್‌ಗೆ ಓರ್ವ ಬಲಿ | ಕರ್ನಾಟಕದಲ್ಲಿ ಎಚ್ಚರ | ಗಡಿ ಭಾಗದಲ್ಲಿ ಪ್ರಯಾಣಿಕರ ಮೇಲೆ ನಿಗಾ | ನಿಫಾ ಲಕ್ಷಣ ಏನು..? ಮುಂಜಾಗ್ರತೆ ಏನು..?

July 22, 2024
11:56 AM

ಕರ್ನಾಟಕದಲ್ಲಿ ಡೆಂಗ್ಯು ಭೀತಿಯ ನಡುವೆ ಕೇರಳದಲ್ಲಿ ನಿಫಾ ವೈರಸ್‌ ಆತಂಕ ಎದುರಾಗಿದೆ.  ಕೇರಳದ ಮಲಪ್ಪುರಂನಲ್ಲಿ ನಿಫಾ ವೈರಸ್  ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.  ಈ ಬೆನ್ನಲ್ಲೇ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ (ಐಸಿಎಂಆರ್​) ತಂಡ ಕೋಯಿಕ್ಕೋಡ್​​ಗೆ ಆಗಮಿಸಿದೆ. ಬಾಲಕನ ಸಂಪರ್ಕದಲ್ಲಿದ್ದ 13 ಜನರ ಸೀರಮ್ ಪರೀಕ್ಷೆಯ ಫಲಿತಾಂಶಗಳಿಗಾಗಿ  ಕಾಯಲಾಗುತ್ತಿದೆ. 

Advertisement
Advertisement

ಭಾರತೀಯ ವೈದ್ಯಕೀಯ ಸಂಶೋಧನಾ (ಐಸಿಎಂಆರ್​) ತಂಡದಲ್ಲಿ ನಾಲ್ವರು ವೈದ್ಯರು ಮತ್ತು ಇಬ್ಬರು ತಂತ್ರಜ್ಞರು ಇದ್ದು, ಇವರು ಸೋಂಕಿತ ತಡೆ ವಿಧಾನ, ಪರೀಕ್ಷೆ ಸೌಲಭ್ಯ ಮತ್ತು ಚಿಕಿತ್ಸೆ ಪ್ರಕ್ರಿಯೆ ಕುರಿತು ರಾಜ್ಯ ಆರೋಗ್ಯ ಇಲಾಖೆ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಸ್ತತ, ಕೋಯಿಕ್ಕೋಡ್​ನ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿರುವ 68 ವರ್ಷದ ವ್ಯಕ್ತಿಯಲ್ಲಿ ನಿಫಾ ಸೋಂಕಿನ ಸಂಶಯ ಎದುರಾಗಿದೆ. ಅವರ ಪ್ರಾಥಮಿಕ ಪರೀಕ್ಷೆಗಳಲ್ಲಿ ನೆಗೆಟಿವ್​ ಬಂದಿದ್ದು, ಐಸಿಯುನಲ್ಲಿರುವ ಅವರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. 350 ಜನರ ಸ್ಯಾಂಪಲ್‌ ತೆಗೆಯಲಾಗಿದೆ. ಈ  ಪೈಕಿ ನಾಲ್ವರು ತಿರುವನಂತಪುರಂ ಹಾಗೂ ಇಬ್ಬರು ಪಾಲಕ್ಕಾಡ್‌ನವರು.

Advertisement

ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಹೆಚ್ಚಾಗಿದೆ. ಈಗಾಗಲೇ ರಾಜ್ಯದಲ್ಲಿ ಹೈ ಅಲರ್ಟ್​​ ಘೋಷಿಸಲಾಗಿದೆ. ಕೇರಳದಲ್ಲಿ ನಿಫಾ ವೈರಸ್​ ಹೆಚ್ಚಾಗುತ್ತಿದ್ದಂತೆ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಈಗಾಗಲೇ ಡೆಂಗ್ಯು ಭೀತಿ ತಲೆದೂರಿದೆ. ಈ ಮಧ್ಯೆ ನಿಫಾ ವೈರಸ್​ ಆತಂಕವೂ ಹೆಚ್ಚಾಗಿದೆ. ಇನ್ನು ಕರ್ನಾಟಕದಲ್ಲಿ ನಿಫಾ ವೈರಸ್​ಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಕೇರಳಾದಿಂದ ಕರ್ನಾಟಕಕ್ಕೆ ದಿನನಿತ್ಯ ಸಂಚಾರ ಮಾಡುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ.

ಲಕ್ಷಣಗಳು ಏನು..? ಮುಂಜಾಗ್ರತೆ ಏನು..? : ಈ ಸೋಂಕು ಬಾವಲಿ ಕಚ್ಚಿದ ಹಣ್ಣು ಸೇವನೆಯು ಈ ಸೋಂಕು ಹರಡುವಿಕೆಗೆ ಕಾರಣವಾಗಿದೆ. ಈ ಸೋಂಕು ಮಾನವರಲ್ಲಿ ಮೆದುಳಿನ ಉರಿಯೂತದೊಂದಿಗೆ ಮಾರಣಾಂತಿಕ ಜ್ವರಕ್ಕೆ ಕಾರಣವಾಗುತ್ತದೆ. ನಿಫಾ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ, ಅತಿಸಾರ, ಆಯಾಸ, ವಾಂತಿ, ಸ್ನಾಯು ನೋವು ಮತ್ತು ಆಲಸ್ಯ. ಇನ್ನು ಕೆಲವರಲ್ಲಿ ಈ ಸೋಂಕಿನ ಲಕ್ಷಣಗಳು ಗೋಚರರಹಿತವಾಗಿರುತ್ತದೆ. ಸೋಂಕಿನಿಂದ ಸುರಕ್ಷೆ ಪಡೆಯಲು ಕೈಯ ಶುಚಿತ್ವ ಕಾಪಾಡುವುದು ಮುಖ್ಯ.

Advertisement
  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|
September 7, 2024
10:59 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ಮೈಸೂರಿನಲ್ಲಿ ಗಮನ ಸೆಳೆದ ವಿಶೇಷ ಗಣಪ | ವಿವಿಧ ಪ್ರತಿಮೆಗಳು |
September 7, 2024
10:38 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ದೇವರ ಪ್ರಸಾದಕ್ಕೆ FSSAI ಪರವಾನಗಿ ಕಡ್ಡಾಯ | ಖಂಡನೆ-ಸಾರ್ವಜನಿಕರಿಂದ ಅಸಮಾಧಾನ |
September 7, 2024
10:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2024 | ರಾಜ್ಯದ ಅಲ್ಲಲ್ಲಿ ಸಾಮಾನ್ಯ ಮಳೆ | ಸೆ.13 ರಿಂದ ಕರಾವಳಿ ಜಿಲ್ಲೆಯಲ್ಲೂ ಮಳೆ ಕಡಿಮೆ ಸಾಧ್ಯತೆ |
September 7, 2024
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror