ಭಾರತ–ಬಾಂಗ್ಲಾದೇಶ ಗಡಿಯಲ್ಲಿ ನಿಪಾ ಆತಂಕ | ಹರಡುವಿಕೆ ಅಪಾಯ ‘ಕಡಿಮೆ’ ಎಂದ WHO

February 15, 2026
5:43 AM
ಭಾರತ ಮತ್ತು ಬಾಂಗ್ಲಾದೇಶದಲ್ಲಿ ಮೂರು ನಿಪಾ ಪ್ರಕರಣಗಳು ದೃಢಪಟ್ಟಿದ್ದರೂ, ಜಾಗತಿಕ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಹರಡುವಿಕೆಯ ಅಪಾಯ ಕಡಿಮೆ ಎಂದು WHO ತಿಳಿಸಿದೆ. ನಿಪಾಗೆ ಲಸಿಕೆ ಇಲ್ಲ; ಮರಣ ಪ್ರಮಾಣ 40-75%.

ಭಾರತ ಮತ್ತು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ದೃಢಪಟ್ಟ ಮೂರು ನಿಪಾ ಪ್ರಕರಣಗಳ ನಂತರವೂ ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದಲ್ಲಿ ಹರಡುವಿಕೆಯ ಅಪಾಯ ಕಡಿಮೆ ಎಂದು ನಿರ್ಣಯಿಸಲಾಗಿದೆ ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಹೇಳಿದ್ದಾರೆ.

ಜಿನೀವಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಎರಡು ಮತ್ತು ಬಾಂಗ್ಲಾದೇಶದಲ್ಲಿ ಒಂದು ಪ್ರಕರಣ ದೃಢಪಟ್ಟಿದ್ದು, ಏಕಾಏಕಿ ಹರಡುವಿಕೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಆದರೆ ಮೌಲ್ಯಮಾಪನದ ಬಳಿಕ ಅಪಾಯ ಕಡಿಮೆ ಎಂದು ಕಂಡುಬಂದಿದೆ,” ಎಂದರು. ಭಾರತದಲ್ಲಿ ಕಳೆದ ತಿಂಗಳು ಪಶ್ಚಿಮ ಬಂಗಾಳದಲ್ಲಿ ಎರಡು ಪ್ರಕರಣಗಳು ದೃಢಪಟ್ಟವು. ಕಳೆದ ವಾರ ಬಾಂಗ್ಲಾದೇಶದಲ್ಲಿ ಒಬ್ಬ ರೋಗಿ ಮೃತಪಟ್ಟಿದ್ದಾರೆ.  ಎರಡೂ ಪ್ರಕರಣಗಳು ಭಾರತ–ಬಾಂಗ್ಲಾದೇಶ ಗಡಿಯ ಸಮೀಪದಲ್ಲೇ ಸಂಭವಿಸಿದ್ದರೂ, ಪರಸ್ಪರ ಸಂಬಂಧಿಸಿಲ್ಲ ಎಂದು WHO ಸ್ಪಷ್ಟಪಡಿಸಿದೆ. ಈ ಪ್ರದೇಶಗಳಲ್ಲಿ ನಿಪಾ ವೈರಸ್‌ನ ನೈಸರ್ಗಿಕ ವಲಯ ಪರಿಗಣಿಸಲ್ಪಡುವ ಹಣ್ಣಿನ ಬಾವಲಿ ಜಾತಿ (Fruit bats) ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ.

ನಿಪಾ ವೈರಸ್ ಏನು: ಎಷ್ಟು ಅಪಾಯಕಾರಿ? : ನಿಪಾ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದ್ದು, ಯಾವುದೇ ಲಸಿಕೆ ಇಲ್ಲ. ಮರಣ ಪ್ರಮಾಣ: 40% ರಿಂದ 75% ಆಗಿರುತ್ತದೆ.  ರೋಗಲಕ್ಷಣಗಳಲ್ಲಿ ತೀವ್ರ ಜ್ವರ, ವಾಂತಿ, ಉಸಿರಾಟದ ತೊಂದರೆ ಇರುತ್ತದೆ.  ತೀವ್ರ ಪ್ರಕರಣಗಳಲ್ಲಿ: ಮೆದುಳಿನ ಉರಿಯೂತ, ಕೋಮಾ ಕೂಡಾ ಆಗುತ್ತದೆ. 1998 ರಲ್ಲಿ ಮಲೇಷ್ಯಾದ ಹಂದಿ ಸಾಕಾಣಿಕೆಯಲ್ಲಿ ಮೊದಲಿಗೆ ನಿಪಾ ಪತ್ತೆಯಾಗಿದೆ. ಭಾರತದಲ್ಲಿ ಮೊದಲ ಪ್ರಕರಣ – ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗುದೆ. 2018 ರಲ್ಲಿ ಕೇರಳದಲ್ಲಿ ಕನಿಷ್ಠ 17 ಸಾವುಗಳು ಸಂಭವಿಸಿದೆ. 2023  ರಲ್ಲಿ ಕೂಡಾ ಕೇರಳದಲ್ಲಿ ಮತ್ತೆ 2 ಸಾವುಗಳು ಸಂಭವಿಸಿದೆ.

WHO ಪ್ರಕಾರ, ಸದ್ಯದ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದರೂ, ಗಡಿಯ ಪ್ರದೇಶಗಳಲ್ಲಿ ಆರೋಗ್ಯ ನಿಗಾ, ಬಾವಲಿ ಸಂಪರ್ಕ ಕಡಿತ, ರೋಗಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆ ಅತ್ಯಂತ ಅಗತ್ಯ ಎಂದು ಹೇಳಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ
July 14, 2026
7:01 AM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror