ತುಂಗಾಭದ್ರಾ ನದಿಗಳ ರಕ್ಷಣೆಗೆ ಹಮ್ಮಿಕೊಂಡಿರುವ ಅಭಿಯಾನ ಶ್ಲಾಘನೀಯ ಎಂದು ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಕಾನೂನಿನ ಬಲ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ಆಯೋಜಿಸಿದ್ದ ‘ತುಂಗಾ ಆರತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನದಿ ಮಲೀನಗೊಳ್ಳುವುದನ್ನು ತಡೆಯಬೇಕಾದರೆ, ಅದಕ್ಕೆ ಕೃಷಿಯ ಮೂಲಕ ಸೇರುತ್ತಿರುವ ರಾಸಾಯನಿಕವನ್ನೂ ನಿಯಂತ್ರಿಸಬೇಕು. ಪಾತ್ರದಲ್ಲಿಮರಗಳ ರಕ್ಷಣೆ ಆಗಬೇಕು. ಭೂಮಿಗೆ ನೀರು ಇಂಗಿಸುವ ಮರಗಳನ್ನು ನೆಟ್ಟು ಕಾಪಾಡಬೇಕು ಎಂದು ಸಲಹೆ ನೀಡಿದರು. ನೀರಿನ ಸೆಲೆಗಳನ್ನು ರಕ್ಷಿಸಬೇಕಾದರೆ ಪೂರಕ ಕಾನೂನುಗಳನ್ನು ಮಾಡಬೇಕು. ಅದು ಸರಕಾರದಿಂದ ಮಾತ್ರ ಸಾಧ್ಯ. ಜನರ ಮನಸ್ಥಿತಿಯೂ ಬದಲಾಗಬೇಕಿದೆ. ಸರಕಾರವನ್ನೇ ಮೋಸ ಮಾಡುವ ಮನಸ್ಥಿತಿ ಜನರಲ್ಲಿದ್ದು, ಅದೂ ಬದಲಾಗಬೇಕು ಎಂದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel