ನಿರ್ಮಲ ತುಂಗಾಭದ್ರ ಅಭಿಯಾನ ಪಾದಯಾತ್ರೆ | ಶೃಂಗೇರಿಯಿಂದ ಶ್ರೀಶೈಲದವರೆಗೆ |

November 13, 2024
2:49 PM

ಜಲ ಜಾಗೃತಿ, ಜನ ಜಾಗೃತಿಗಾಗಿ ಶೃಂಗೇರಿಯಿಂದ ಕಿಷ್ಕಿಂದೆವರೆಗೆ 400 ಕಿಲೋ ಮೀಟರ್ ವರೆಗೆ ಹಮ್ಮಿಕೊಂಡಿರುವ ನಿರ್ಮಲ ತುಂಗಾಭದ್ರ ಅಭಿಯಾನ ಪಾದಯಾತ್ರೆ ಶಿವಮೊಗ್ಗ ಜಿಲ್ಲೆ ತಲುಪಿದ್ದು, ಕಾರ್ಯಕ್ರಮಕ್ಕೆ ಕೂಡ್ಲಿ ಶೃಂಗೇರಿ ಮಠದ ಅಭಿನವ ಶಂಕರ ಭಾರತೀಯ ಸ್ವಾಮೀಜಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಭಿನವ ಶಂಕರ ಭಾರತೀಯ ಸ್ವಾಮೀಜಿ, ಮನುಷ್ಯನಾಗಿ ಬದುಕಬೇಕಾದರೆ ಹಲವಾರು ಋಣಗಳಿಗೆ ಋಣಿಯಾಗಿರಬೇಕಾಗುತ್ತದೆ. ಸಮಾಜದಿಂದ ಏನನ್ನು ಪಡೆದಿದ್ದೇವೆ ಅದಕ್ಕಿಂತಲೂ ಹೆಚ್ಚಿಗೆ ಸಮಾಜಕ್ಕೆ ಹಿಂದುರುಗಿಸಬೇಕು ಎಂದರು.

ಪರಿಸರವಾದಿ ಕುಮಾರಸ್ವಾಮಿ ಸೇರಿದಂತೆ ಮತ್ತಿತರ ಸಂಘಟನೆಗಳ ಮುಖ್ಯಸ್ಥರು ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ತುಂಗಾ ತಡದಲ್ಲಿ ಜನಜಾಗೃತಿಗಾಗಿ ತುಂಗಾ ನದಿಗೆ ವಿಶೇಷ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪರಿಸರವಾದಿ ಕುಮಾರಸ್ವಾಮಿ, ಇತ್ತೀಚಿಗೆ ತ್ಯಾಜ್ಯದ ಸಮಸ್ಯೆ ಹೆಚ್ಚಾಗಿದ್ದು, ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದರು. ಪಾದಯಾತ್ರಿ ಬಾಲಕೃಷ್ಣ ನಾಯ್ಡು, ಎಲ್ಲಾ ನದಿಗಳು ಪೂಜ್ಯನೀಯವಾಗಿವೆ ಜನರು ಈ ನದಿಗಳ ಮಹತ್ವವನ್ನು ಅರಿತುಕೊಂಡು ನದಿಗಳ ಸಂರಕ್ಷಣೆಯಲ್ಲಿ ಮುಂದಾಗಬೇಕು.ನದಿಗಳು ಮತ್ತು ಅರಣ್ಯಗಳೊಂದಿಗೆ ಜನರು ಭಾವನಾತ್ಮಕವಾಗಿ ವರ್ತಿಸುತ್ತಾರೆ ನದಿ ಉಗಮ ಸ್ಥಾನದಿಂದಲೇ ಶುದ್ದೀಕರಣದ ಕಡೆಗೆ ಗಮನ ಹರಿಸುವಂಥ ಕಾರ್ಯಕ್ರಮ ಇದಾಗಿದೆ ಎಂದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ
April 6, 2026
6:59 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!
April 5, 2026
1:27 PM
by: ಸಾಯಿಶೇಖರ್ ಕರಿಕಳ
ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ
April 5, 2026
9:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!
April 4, 2026
8:44 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror