ಜಲ ಜಾಗೃತಿ, ಜನ ಜಾಗೃತಿಗಾಗಿ ಶೃಂಗೇರಿಯಿಂದ ಕಿಷ್ಕಿಂದೆವರೆಗೆ 400 ಕಿಲೋ ಮೀಟರ್ ವರೆಗೆ ಹಮ್ಮಿಕೊಂಡಿರುವ ನಿರ್ಮಲ ತುಂಗಾಭದ್ರ ಅಭಿಯಾನ ಪಾದಯಾತ್ರೆ ಶಿವಮೊಗ್ಗ ಜಿಲ್ಲೆ ತಲುಪಿದ್ದು, ಕಾರ್ಯಕ್ರಮಕ್ಕೆ ಕೂಡ್ಲಿ ಶೃಂಗೇರಿ ಮಠದ ಅಭಿನವ ಶಂಕರ ಭಾರತೀಯ ಸ್ವಾಮೀಜಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಭಿನವ ಶಂಕರ ಭಾರತೀಯ ಸ್ವಾಮೀಜಿ, ಮನುಷ್ಯನಾಗಿ ಬದುಕಬೇಕಾದರೆ ಹಲವಾರು ಋಣಗಳಿಗೆ ಋಣಿಯಾಗಿರಬೇಕಾಗುತ್ತದೆ. ಸಮಾಜದಿಂದ ಏನನ್ನು ಪಡೆದಿದ್ದೇವೆ ಅದಕ್ಕಿಂತಲೂ ಹೆಚ್ಚಿಗೆ ಸಮಾಜಕ್ಕೆ ಹಿಂದುರುಗಿಸಬೇಕು ಎಂದರು.
ಪರಿಸರವಾದಿ ಕುಮಾರಸ್ವಾಮಿ ಸೇರಿದಂತೆ ಮತ್ತಿತರ ಸಂಘಟನೆಗಳ ಮುಖ್ಯಸ್ಥರು ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ತುಂಗಾ ತಡದಲ್ಲಿ ಜನಜಾಗೃತಿಗಾಗಿ ತುಂಗಾ ನದಿಗೆ ವಿಶೇಷ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪರಿಸರವಾದಿ ಕುಮಾರಸ್ವಾಮಿ, ಇತ್ತೀಚಿಗೆ ತ್ಯಾಜ್ಯದ ಸಮಸ್ಯೆ ಹೆಚ್ಚಾಗಿದ್ದು, ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದರು. ಪಾದಯಾತ್ರಿ ಬಾಲಕೃಷ್ಣ ನಾಯ್ಡು, ಎಲ್ಲಾ ನದಿಗಳು ಪೂಜ್ಯನೀಯವಾಗಿವೆ ಜನರು ಈ ನದಿಗಳ ಮಹತ್ವವನ್ನು ಅರಿತುಕೊಂಡು ನದಿಗಳ ಸಂರಕ್ಷಣೆಯಲ್ಲಿ ಮುಂದಾಗಬೇಕು.ನದಿಗಳು ಮತ್ತು ಅರಣ್ಯಗಳೊಂದಿಗೆ ಜನರು ಭಾವನಾತ್ಮಕವಾಗಿ ವರ್ತಿಸುತ್ತಾರೆ ನದಿ ಉಗಮ ಸ್ಥಾನದಿಂದಲೇ ಶುದ್ದೀಕರಣದ ಕಡೆಗೆ ಗಮನ ಹರಿಸುವಂಥ ಕಾರ್ಯಕ್ರಮ ಇದಾಗಿದೆ ಎಂದರು.
ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…
ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ರಾಜಧಾನಿ ಬೆಂಗಳೂರಿನಲ್ಲಿ ಮಳೆ…
ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಿದ ತಾಪಮಾನ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ…
ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.ಎಪ್ರಿಲ್ 4ರಿಂದ ವ್ಯಾಪ್ತಿ ಹಾಗೂ ಪ್ರಮಾಣ…
ಮಹಿಳೆಯ ಸುರಕ್ಷಾ ವಲಯವೆಂದರೆ ಅದು ಅಡುಗೆ ಕೋಣೆ. ಈ ಅಡುಗೆ ಕೋಣೆಯೇ ಎಲ್ಲವೂ.…
ಮನೆಯ ಒಡತಿ ಎನ್ನುವ "ಅಮ್ಮ" ದಿನವೂ ಏನು ಮಾಡುತ್ತಾರೆ..? ಅವಳ ಪಾತ್ರ ಏನು…