ಅಡಿಕೆ ಸಿಪ್ಪೆಯ ರಸದಿಂದ ಸೋಪು | ಸೋಪಿನಲ್ಲಿದೆ ಔಷಧೀಯ ಮೌಲ್ಯ | ಪೇಟೆಂಟ್‌ ಪಡೆದ ಪುತ್ತೂರಿನ ಸಂಸ್ಥೆ |

September 17, 2024
10:33 PM
ಅಡಿಕೆ ಸಿಪ್ಪೆಯ ರಸದಿಂದ ತಯಾರಿಸಿ ಸೋಪಿಗೆ ಈಗ ಪೇಟೆಂಟ್‌ ಲಭಿಸಿದೆ. ಪುತ್ತೂರಿನ ಸತ್ವಂ ಬ್ರಾಂಡ್‌ನ ಈ ಸೋಪು ಈಗ ಗಮನ ಸೆಳೆದಿದೆ.

ಅಡಿಕೆಯ ರಸದಿಂದ ತಯಾರಿಸಿದ ಸ್ನಾನದ ಸೋಪು ಇದೀಗ ಗಮನ ಸೆಳೆದಿದೆ. ಔಷಧೀಯ ಗುಣಗಳುಳ್ಳ ಈ ಸೋಪಿಗೆ ಈಗ ಪೇಟೆಂಟ್‌ ದೊರೆತಿದೆ. ಪುತ್ತೂರಿನ  ಕೆದಿಲದಲ್ಲಿರುವ ಹಾರ್ದಿಕ್ ಹರ್ಬಲ್ ಪೇಟೆಂಟ್‌ ಪಡೆದುಕೊಂಡಿರುವ ಸಂಸ್ಥೆ.…..ಮುಂದೆ ಓದಿ….

Advertisement
Advertisement
ಪೇಟೆಂಟ್‌ ಪಡೆದ ಸೋಪು

ಅಡಿಕೆ ಬೆಳೆಗಾರರಿಗೆ ಇನ್ನೊಂದು ಹೆಮ್ಮೆಯ ಸಂಗತಿ ವಿಷಯ ಈಗ ಲಭಿಸಿದೆ.ಕೃಷಿಕರೊಬ್ಬರೇ ಈ ಪ್ರಯತ್ನ ಮಾಡಿರುವುದು ಇನ್ನೊಂದು ಗರಿ.  ಅಡಿಕೆಯಿಂದ ವಿವಿಧ ಬಗೆಯ ಔಷಧಿ ತಯಾರಿಕೆ ಸಾಧ್ಯ ಎಂಬುದು ಈಗಾಗಲೇ ಅಧ್ಯಯನಗಳು ಹೇಳಿವೆ. ಕೆಲವು ಔಷಧಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಇದೆ. ಇನ್ನಷ್ಟು ಅಧ್ಯಯನಗಳು ನಡೆಯುತ್ತಿದೆ. ಈ ನಡುವೆ ಹಣ್ಣಡಿಕೆಯ ಸಿಪ್ಪೆಯಿಂದ ರಸ ತೆಗೆದು ಅದನ್ನು ಸಂಸ್ಕರಿಸಿ ಸೋಪು ತಯಾರಿಕೆ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಕೆದಿಲದಲ್ಲಿರುವ ಹಾರ್ದಿಕ್ ಹರ್ಬಲ್ ಸತ್ವಂ ಬ್ರಾಂಡ್‌ನ ಮೂಲಕ ಸತ್ವಂ ಕೊಕೋರೇಕಾ ಹರ್ಬಲ್ ಬಾತಿಂಗ್ ಸೋಪ್ ಈ ಮೌಲ್ಯ ಪಡೆದಿದೆ.  2021ರ ನವೆಂಬರ್‌ನಲ್ಲಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕ್ರಿಯೆ ಎಲ್ಲಾ ಹಂತಗಳನ್ನು ದಾಟಿ ಇದೀಗ ಪೇಟೆಂಟ್‌ ಪಡೆದುಕೊಂಡಿದೆ. ವಿಶೇಷ ಉತ್ಪನ್ನದ ಹಕ್ಕುಸ್ವಾಮ್ಯವನ್ನು ಮುಂದಿನ 20ವರ್ಷಗಳಿಗೆ ಹಾರ್ದಿಕ್ ಹರ್ಬಲ್ ಕಾಯ್ದಿರಿಸಿಕೊಂಡಿದೆ.ಇದರಿಂದ ಅಡಿಕೆಯ ಮೌಲ್ಯ ವರ್ಧನೆ ಹಾಗೂ ಅಡಿಕೆಯಲ್ಲಿರುವ ಔಷಧೀಯ ಗುಣಗಳಿಗೆ ಆದ್ಯತೆ ನೀಡಿದಂತಾಗಿದೆ. ಇದು ಅಡಿಕೆ ಬೆಳೆಗಾರರಿಗೂ ಬಲ ಬಂದಾಗಿದೆ.

Advertisement

ಸಂಸ್ಥೆಯ ಮುಖ್ಯಸ್ಥರಾಗಿರುವ ಮುರಳೀಧರ ಹಾಗೂ ಮೀರಾ ಮುರಳೀಧರ ಅವರು ಈ ಅಧ್ಯಯನದ ಹಿಂದೆ ಕೆಲಸ ಮಾಡಿದ್ದಾರೆ. ಅಡಿಕೆಯ ಹಣ್ಣಿನ ಸಿಪ್ಪೆಯ ರಸ, ತೆಂಗಿನ ಎಣ್ಣೆ , ಸಾಗುವಾನಿ ಎಲೆ, ಅರಿಶಿನ ಎಣ್ಣೆ ಕೊತ್ತಂಬರಿ ಮತ್ತು ಲಾವಂಚದಂತಹ  ಗಿಡಮೂಲಿಕೆಗಳಿಂದ ಸಾರಗಳಿಂದ ಈ ಸೋಪು ತಯಾರು ಮಾಡಲಾಗುತ್ತಿದೆ. ಈ ಸೋಪು ಬಳಕೆಯಿಂದ ಚರ್ಮದ ಆರೋಗ್ಯ ಸುಧಾರಣೆಯಾಗುತ್ತದೆ, ಚರ್ಮರೋಗ ಸೇರಿದಂತೆ  ಮಾಯಿಶ್ಚರೈಸರ್ ಆಗಿ, ಬಿಳಿ ಮಚ್ಚೆ (ಸಿಬ್ಬ) ನಿವಾರಣೆಗೆ ಸಹಾಯ ಮಾಡುತ್ತದೆ. ತುರಿಕೆ , ಗಾಯಗಳನ್ನು ಗುಣಪಡಿಸುತ್ತದೆ ಎನ್ನುವುದು ಅಧ್ಯಯನಗಳಿಂದ ತಿಳಿದಿದೆ.

Advertisement
ಮುರಳೀಧರ್‌,
ಹಣ್ಣಡಿಕೆ ಸಿಪ್ಪೆಯ ರಸದಿಂದ ಈ ಸಾಬೂನು ತಯಾರಿಕೆ ಮಾಡುತ್ತಿದ್ದೇವೆ. ಈಗ ಪೇಟೆಂಟ್‌ ಪಡೆದುಕೊಳ್ಳಲಾಗಿದೆ. ಸದ್ಯ ನಮ್ಮಲ್ಲಿಯೇ ಲಭ್ಯ ಇರುವ ಅಡಿಕೆಯ ಸಿಪ್ಪೆಯಿಂದ ರಸ ತೆಗೆಯಲಾಗುತ್ತದೆ
. – ಮುರಳೀಧರ್‌, ಸತ್ವಂ ಸಂಸ್ಥೆಯ ಮುಖ್ಯಸ್ಥ

ಮುರಳೀಧರ್‌ ಅವರು ಆಸಕ್ತಿಯಿಂದ ಈ ಕ್ಷೇತ್ರ ಬಂದವರು. ಅವರ ಪತ್ನಿ ಮೀರಾ ಅವರು ಕೂಡಾ ಗೃಹಿಣಿ. ಅಧ್ಯಯನ ಅವರಿಬ್ಬರ ಆಸಕ್ತಿಯ ವಿಷಯವಾಗಿತ್ತು. ಮನೆಯಲ್ಲಿ ಕುಡಿಯುವ ನೀರಿಗೆ ಲಾವಂಚ ಬಳಕೆ ಮಾಡುತ್ತಿದ್ದರು. ಈ ನೀರು ಕುಡಿದರೆ ಗ್ಯಾಸ್ಟ್ರಿಕ್‌ ಸಮಸ್ಯೆ ನಿವಾರಣೆಯಾಗುವುದನ್ನು ಮನಗಂಡು ಈ ಬಗ್ಗೆಯೇ ಹೆಚ್ಚಿನ ಅಧ್ಯಯನ ನಡೆಸಿ ಸತ್ವಂ ಎನ್ನುವ ಬ್ರಾಂಡ್‌ ಮೂಲಕ ನೀರು ತಯಾರಿಕೆ ಮಾಡಿದರು. ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಾಗುವ ನೀರು ಹಲವು ಕಡೆ ಬೇಡಿಕೆ ಪಡೆಯಿತು. ಈ ನೀರು ಅನೇಕರ ಗಮನ ಸೆಳೆಯಿತು. ಮಾಜಿ ಸಚಿವ ಮುರಳಿ ಮನೋಹರ ಜೋಶಿ ಅವರು ಕೊರೋನಾ ಸಮಯದವರೆಗೂ ಪುತ್ತೂರಿನಿಂದ ಈ ನೀರನ್ನು ತರಿಸಿ ಬಳಕೆ ಮಾಡುತ್ತಿದ್ದರು ಎನ್ನುತ್ತಾರೆ ಮುರಳೀಧರ್.‌ ಇವರ ಜೊತೆಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೂ ಕೂಡಾ ಸತ್ವಂ ನೀರಿನ ಬಗ್ಗೆ ಮಾತನಾಡಿದ್ದರು.

Advertisement

ನೀರಿನ ಜೊತೆಗೆ ವಿವಿಧ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರು ಮಾಡುವ ಹಾಗೂ ಅಡಿಕೆ ಬೆಳೆಗಾರರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಅಡಿಕೆ ಸಿಪ್ಪೆಯ ರಸದಿಂದ ತಯಾರು ಮಾಡಬಹುದಾದ ಸಾಬೂನು ಬಗ್ಗೆ ಅಡಿಕೆ ಕೃಷಿಕ , ಸಂಶೋಧಕ ಬದನಾಜೆ ಶಂಕರ ಭಟ್‌ ಹಾಗೂ ಆಯುರ್ವೇದ ವೈದ್ಯರಿಂದ ಮಾಹಿತಿ ಪಡೆದು ಸಾಬೂನು ತಯಾರಿಕೆಗೆ ಇಳಿದಿದ್ದರು. ಅದರ ಎಲ್ಲಾ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಮಾರುಕಟ್ಟೆಗೆ ಬಿಟ್ಟಿದ್ದರು. ಇದೀಗ ಪೇಟೆಂಟ್‌ ಕೂಡಾ ಪಡೆದುಕೊಂಡಿದ್ದಾರೆ.

Advertisement
ಈ ಸೋಪಿಗೆ ಪೇಟೆಂಟ್‌ ಲಭ್ಯವಾಗಿರುವುದು ಸಂಸತದ ವಿಷಯ. ಅಡಿಕೆ ಬೆಳೆಗಾರರು ಇಂತಹ ಉತ್ಪನ್ನಗಳನ್ನು ಬೆಂಬಲಿಸಬೇಕಿದೆ. ಅಡಿಕೆ ಮೌಲ್ಯವರ್ಧನೆ ಇಂದು ಅನಿವಾರ್ಯವಾಗಿದೆ
. – ಶಂ ನಾ ಖಂಡಿಗೆ, ಕ್ಯಾಂಪ್ಕೋ ಉಪಾಧ್ಯಕ್ಷರು

ಅಡಿಕೆ ಸಿಪ್ಪೆಯ ರಸದಿಂದಲೇ ಸೋಪು ತಯಾರಿಕೆಗೂ ಕಾರಣ ಇದೆ, ಹಿಂದೆ ಹಣ್ಣಾದ ಅಡಿಕೆ ಸಿಪ್ಪೆಯನ್ನು ಮೈಯಲ್ಲಿ ಗಾಯವಾದಾಗ, ಮಚ್ಚೆಗಳು ಇದ್ದಾಗ ಉಜ್ಜುತ್ತಿದ್ದರು. ಇದರಿಂದಾ ಕೆಲವು ದಿನಗಳಲ್ಲಿ ವಾಸಿಯಾಗುತ್ತಿತ್ತು. ಹೀಗಾಗಿ ಇದೇ ಮಾಹಿತಿಯ ಆಧಾರದಲ್ಲಿ ಬದನಾಜೆ ಶಂಕರ ಭಟ್‌ ಹಾಗೂ ಆಯುರ್ವೇದ ವೈದ್ಯರಿಂದ ಮಾಹಿತಿ ಪಡೆದಿದ್ದರು ಮುರಳೀಧರ ಅವರು.

Advertisement

ಇಷ್ಟೇ ಅಲ್ಲ, ಇನ್ನಷ್ಟು ಹೊಸ ಪ್ರಯೋಗಗಳು ನಡೆಯುತ್ತಿದೆ. ಹೊಸ ಬಗೆಯ , ಗ್ರಾಮೀಣ ಭಾಗದಲ್ಲಿ ಈ ಹಿಂದೆ ಉಪಯೋಗಿಸುತ್ತಿದ್ದ ಔಷಧಿಗಳ ಮರುಬಳಕೆಯ ಕಡೆಗೂ ಗಮನಹರಿಸುತ್ತಿದ್ದೇವೆ ಎಂದು ಹೇಳುತ್ತಾರೆ ಮುರಳೀಧರ್.

Advertisement

ಈಗಾಗಲೇ ಅಡಿಕೆಯಿಂದ ಚಾಕೋಲೇಟ್‌, ಸೋಪು, ವೈನ್‌ ಸೇರಿದಂತೆ ವಿವಿಧ ಬಗೆ ಪರ್ಯಾಯ ವಸ್ತುಗಳನ್ನು ಮಾಡಲಾಗಿದೆ. ಇದೀಗ ಅಡಿಕೆಯ ರಸದಿಂದ ತಯಾರು  ಮಾಡಿರುವ ಈ ಸೋಪು ಅಡಿಕೆ ಬೆಳೆಗಾರರಿಗೆ ಬಲ ತಂದಿದೆ. ಅಡಿಕೆ ಹಾನಿಕಾರಕ ಅಲ್ಲ ಎನ್ನುವುದನ್ನೂ ಸಾಬೀತು ಮಾಡುತ್ತಿದೆ. ಅಡಿಕೆ ಸೋಪಿನ  ಬಗ್ಗೆ ಮಾಹಿತಿಗೆ : 8792127459

Advertisement
ಅಡಿಕೆ ಮೌಲ್ಯವರ್ಧನೆಯ ಕಡೆಗೆ ಗಮನ ಅಗತ್ಯ ಇದೆ. ಈ ನಡುವೆ ಅಡಿಕೆಯಲ್ಲಿನ ಆಯುರ್ವೇದ ಔಷಧಿಯ ಗುಣಗಳನ್ನು ಹುಡುಕಿ ಸೋಪು ತಯಾರಿಕೆ ಮಾಡಿರುವುದು ಶ್ಲಾಘನೀಯ. ಇಂತಹ ಕಾರ್ಯಗಳು ಮುಂದುವರಿಯಲಿ.
 – ರಾಘವೇಂದ್ರ‌ ಭಟ್ ಕೆದಿಲ, ಕ್ಯಾಂಪ್ಕೋ ನಿರ್ದೇಶಕರು

Advertisement

The use of bath soaps made from Arecanut juice is now attracting attention. These soaps, which have medicinal properties, are now patented. The Hardik Herbal Patented Institute in Kedila, Puttur is at the forefront of this innovation.

Research has demonstrated the potential for various medications to be derived from the Arecanut. Several drugs have already been approved for sale, with additional studies currently in progress. Satvam Kokoreka Herbal Bathing Soap, under the brand Hardik Herbal Satvam, derives its value from Kedila near Puttur in Dakshina Kannada district. The soap is made by extracting juice from the Arecanut fruit peel and processing it to create a unique herbal bathing experience.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ವೆದರ್‌ ಮಿರರ್‌ | 19.09.2024 | ರಾಜ್ಯದ ಹಲವೆಡೆ ಸಾಮಾನ್ಯ ಮಳೆ ಸಾಧ್ಯತೆ |
September 19, 2024
12:37 PM
by: ಸಾಯಿಶೇಖರ್ ಕರಿಕಳ
ಭೂತಾನ್‌ನಿಂದ ಮತ್ತೆ ಹಸಿ ಅಡಿಕೆ ಆಮದಿಗೆ ಅನುಮತಿ | ಈ ಬಾರಿ ಅಸ್ಸಾಂ ಮೂಲಕವೂ ಅವಕಾಶ…! | ಕಳ್ಳಸಾಗಾಣಿಕೆಗೆ ಪರೋಕ್ಷ ಬೆಂಬಲ..?
September 19, 2024
10:13 AM
by: ದ ರೂರಲ್ ಮಿರರ್.ಕಾಂ
ನ.14 ರಿಂದ 17 ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳ
September 18, 2024
11:06 PM
by: ದ ರೂರಲ್ ಮಿರರ್.ಕಾಂ
ಮೂಲಸೌಕರ್ಯ ಯೋಜನೆಗಳಿಗೆ 15 ಲಕ್ಷ ಕೋಟಿ ರೂ. ಹೂಡಿಕೆ
September 18, 2024
10:38 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror