Advertisement
ಸುದ್ದಿಗಳು

#AnnaBhagya | ಅನ್ನಭಾಗ್ಯ ವಿತರಣೆಗೆ ಒದಗದ ಭಾಗ್ಯ | ಕೇಂದ್ರ, ಇತರ ರಾಜ್ಯಗಳಿಂದ ಸಿಗದ ಭರವಸೆ |

Share
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯಕ್ಕೆ ಸದ್ಯಕ್ಕೆ ಬಡವರಗೆ 10 ಕೆಜಿ ಉಚಿತ ಅಕ್ಕಿ ಒದಗಿಸುವ ಯೋಜನೆ ಸದ್ಯಕ್ಕೆ ಸಿಗುವ ಲಕ್ಷಣಗಳು ಇಲ್ಲ. ಅತ್ತ ಕೇಂದ್ರವೂ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು  ಖಡಾಖಂಡಿತವಾಗಿ ಹೇಳಿದೆ. ಇತ್ತ ರಾಜ್ಯ ಸರ್ಕಾರ ಕೆಲ ರಾಜ್ಯಗಳ ಮೊರೆ ಹೋದರು ಅದು ಇನ್ನೂ ಪಕ್ಕಾ ಆಗಿಲ್ಲ.

ಒಂದು ಕಡೆಯಲ್ಲಿ ಅನ್ನಭಾಗ್ಯದ #AnnaBhagya ಅಕ್ಕಿಗೆ  ಕೇಂದ್ರದ ಬಾಗಿಲು ಬಹುತೇಕ ಬಂದ್ ಆಗಿದ್ದರೆ ಇನ್ನೊಂದು ಕಡೆ ರಾಜ್ಯಗಳಿಂದಲೂ ನಿರೀಕ್ಷಿಸಿದ ಭರವಸೆ ಸಿಕ್ಕಿಲ್ಲ. ಛತ್ತೀಸ್‍ಗಢ ಅಕ್ಕಿ ಕೊಡುವ ಭರವಸೆ ನೀಡಿದರೂ ಎಷ್ಟು ಪ್ರಮಾಣ ಎಂದು ಖಚಿತ ಪಡಿಸಿಲ್ಲ. ಅಲ್ಲದೇ ಛತ್ತೀಸ್‌ಗಢದಿಂದ ಅಕ್ಕಿ ಕೊಳ್ಳುವುದು ದುಬಾರಿಯಾಗಿದೆ. ಒಂದು ವೇಳೇ ಖರೀದಿಸಿದರೂ ಸಾಗಾಣಿಕಾ ವೆಚ್ಚವೂ ಹೆಚ್ಚಾಗುತ್ತದೆ. ಪಂಜಾಬ್ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವ ಭರವಸೆ ನೀಡಿದೆ. ಆಂಧ್ರಪ್ರದೇಶ  ಅಕ್ಕಿ ನೀಡುವ ಭರವಸೆ ನೀಡಿದರೂ ಕೆಜಿಗೆ 42 ರೂ. ದರ ನಿಗದಿ ಎಂದಿದೆ. ತೆಲಂಗಾಣ ಮತ್ತು ತಮಿಳುನಾಡಿನ ಅಕ್ಕಿ ನಿರೀಕ್ಷೆಯಲ್ಲಿ ಇದ್ದ ರಾಜ್ಯ ಸರ್ಕಾರಕ್ಕೆ ಖಚಿತ ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ.

ಒಟ್ಟಾರೆ ಅನ್ನ ಭಾಗ್ಯದ ಅಕ್ಕಿಗಾಗಿ ರಾಜ್ಯಗಳ ಮೊರೆ ಹೋದ ರಾಜ್ಯ ಸರ್ಕಾರಕ್ಕೆ ಬೇಡಿಕೆಯಷ್ಟು ಅಕ್ಕಿಯ ಭರವಸೆ ಇನ್ನೂ ಸಿಕ್ಕಿಲ್ಲ. ಶುಕ್ರವಾರ ಕೇಂದ್ರ ಆಹಾರ ಸಚಿವ ಪಿಯೂಶ್‌ ಗೋಯಲ್‌  ಅವರನ್ನು ರಾಜ್ಯದ ಆಹಾರ ಸಚಿವ ಮುನಿಯಪ್ಪ  ಭೇಟಿ ಮಾಡಿದ್ದರು. ಭೇಟಿ ಬಳಿಕ ಪ್ರತಿಕ್ರಿಯಿಸಿದ ಮುನಿಯಪ್ಪ, ಪಿಯೂಷ್ ಗೋಯಲ್ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದು ರಾಜಕೀಯ ದುರುದ್ದೇಶದ ನಿಲುವು. ಸ್ಟಾಕ್ ಇದ್ದರೂ ಕೊಡುವುದಿಲ್ಲ ಎನ್ನುವುದು ಎಷ್ಟು ಸರಿ? ನಾವು ಅಕ್ಕಿಯನ್ನು ಕೊಡುತ್ತೇವೆ. ಕೇಂದ್ರದ ಏಜೆನ್ಸಿಗಳ ಮೂಲಕ ಅಕ್ಕಿ ಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ವಾರದಲ್ಲಿ ತೀರ್ಮಾನ ಆಗಲಿದೆ ಎಂದು ತಿಳಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

1 day ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

2 days ago

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…

2 days ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

2 days ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

2 days ago