ಯಡಿಯೂರಪ್ಪ ನನ್ನ ಟಿಕೆಟ್ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಅಸಹಾಯಕರಾದರು. ಈಗ ನನ್ನ ಮೇಲೆ ಯಡಿಯೂರಪ್ಪ ಮಾಡಿರುವ ಟೀಕೆಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಯಡಿಯೂರಪ್ಪ ಎಂಬ ಹಿರಿಯ ಮತ್ತು ಲಿಂಗಾಯತ ನಾಯಕರಿಂದ ನನ್ನ ಬೈಯಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲಾಗುತ್ತಿದೆ. ಇದೇ ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ ಬಸವರಾಜ ಬೊಮ್ಮಾಯಿ ಹೋಗಲಿಲ್ಲ ಅಂತ ಹಿಗ್ಗಾಮುಗ್ಗಾ ಬೈದಿದ್ದರು. ಆದರೆ ಬಸವರಾಜ ಬೊಮ್ಮಾಯಿಯವರು ಬಿಜೆಪಿಯಲ್ಲಿ ಗೆಲುವು ಸಾಧಿಸಿದ್ದರು. ನಾನು ಕೂಡಾ ಅತಿ ಹೆಚ್ಚು ಲೀಡ್‌ನಿಂದ ಗೆಲುವು ಸಾಧಿಸುತ್ತೇನೆ. ಯಡಿಯೂರಪ್ಪ ಎಷ್ಟೇ ಬೈದರು ಅದು ಅವರ ಆಶೀರ್ವವಚನ ಎಂದು ಭಾವಿಸುತ್ತೆನೆ ಎಂದು ಹೇಳಿದರು.
ಒಬ್ಬ ಲಿಂಗಾಯತ ನಾಯಕನಿಂದ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬೈಯಿಸಲಾಗುತ್ತಿದೆ. ಯಡಿಯೂರಪ್ಪನವರು ಅಸಹಾಯಕರಾಗಿದ್ದಾರೆ. ಯಡಿಯೂರಪ್ಪನವರು ರಕ್ತದಲ್ಲಿ ಬರೆದು ಕೊಡಲಿ ಅಥವಾ ಯಾವುದರಿಂದಾದಲೂ ಬರೆದು ಕೊಡಲಿ. ನೇರವಾಗಿ ಯುದ್ಧಕ್ಕೆ ಬರೋರು ನೀವೇ ಬನ್ನಿ, ಯಡಿಯೂರಪ್ಪರನ್ನು ಯಾಕೆ ನಡುವೆ ತರುತ್ತಿರಿ? 50-60 ಜನ ಲಿಂಗಾಯತರ ಜೊತೆಗೆ ಸೇರಿ ಸಭೆ ಮಾಡಿದರೆ ಇಡೀ ಲಿಂಗಾಯತ ಸಮುದಾಯದ ಸಭೆ ಆಗಲ್ಲ ಎಂದರು.
ಸೆಂಟ್ರಲ್ ಕ್ಷೇತ್ರ ಬರೀ ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತವಲ್ಲಾ. ಇದು ರಾಷ್ಟ್ರೀಯ ಸೆಂಟ್ರಲ್ ಆಗಿದೆ. ಅಮಿತ್ ಶಾ ಹುಬ್ಬಳ್ಳಿ ಮತ್ತು ಯಾದಗಿರಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಬೇಕು ಅಂತ ಭಾಷಣ ಮಾಡುತ್ತಿದ್ದಾರೆ. ಸ್ಮೃತಿ ಇರಾನಿ, ಯಡಿಯೂರಪ್ಪ ಮತ್ತು ಜೆಪಿ ನಡ್ಡಾ ಸಹ ನನ್ನ ಸೋಲಿಸಲು ಕರೆ ನೀಡಿದ್ದಾರೆ. ನನ್ನ ಮೇಲೆ ಎಲ್ಲರೂ ಮುಗಿ ಬಿದ್ದಿದ್ದಾರೆ. ಈ ಬಡಪಾಯಿ ಮೇಲೆ ಯಾಕೆ ಎಲ್ಲರೂ ಬಿದ್ದಿದ್ದಾರೆ ಗೊತ್ತಿಲ್ಲ. ಇವರೆಲ್ಲರೂ ಸೇರಿ ಸೆಂಟ್ರಲ್ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದು ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490