ಇನ್ನು ಇರಲ್ಲ ಓಬಿರಾಯನ ಕಾಲದ ಬ್ರಿಟಿಷ್ ಕಾಲದ ಕ್ರಿಮಿನಲ್‌ ಕಾನೂನು :‌ ಇಂದಿನಿಂದ 3 ದೇಶಿ ಕಾನೂನು ಜಾರಿ : ಎಸ್‌ಎಂಎಸ್‌, ವಾಟ್ಸಪ್‌ ಮೂಲಕವೂ ಸಮನ್ಸ್‌

July 1, 2024
10:14 AM

ನ್ಯಾಯ(Justice) ಅನ್ನೋದು ಬಡವ ಬಗ್ಗರನ್ನದೆ ಸಮಾನವಾಗಿ ಎಲ್ಲರಿಗೂ ಸಿಗಬೇಕು. ಹಾಗೂ ನ್ಯಾಯ ಆದಷ್ಟು ಬೇಗ ಸಿಕ್ಕರೆ ಅದಕ್ಕೊಂದು ಬೆಲೆ. ಆದರೆ ಈಗಿರುವ ಕಾನೂನುಗಳು ಬ್ರಿಟಿಷರ(British Law) ಕಾಲದ್ದಾಗಿದ್ದು, ಈಗಿನ ಸಂದರ್ಭ ಸಮಯಕ್ಕೆ ತಂಕ್ಕಂತೆ ಅದರ ಬೆಲೆಯನ್ನು ಕಳೆದುಕೊಂಡಿದೆ. ಹಾಗೂ ಅವು ಅವಧಿ ಮೀರಿದ ಕಾನೂನುಗಳಾಗಿವೆ. ಈ ಹಿನ್ನೆಲೆಯಲ್ಲಿ  ತ್ವರಿತ ನ್ಯಾಯದಾನಕ್ಕೆ ಹೊಸ ಕಾನೂನು(Law)  ದೇಶದಲ್ಲಿ ಇಂದಿನಿಂದ ಬದಲಾಗಲಿದ್ದು, ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ (Indian Penal Code), ಸಿಆರ್‌ಪಿಸಿ (Code of Criminal Procedure), ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ (Indian Evidence Act) ಗುಡ್‌ಬೈ ಹೇಳಲಾಗುತ್ತದೆ.

Advertisement
Advertisement
ಐಪಿಸಿ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita), ಸಿಆರ್‌ಪಿಸಿ ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (Bharatiya Nagarik Suraksha Sanhita), ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮ (Bharatiya Sakshya Adhiniyam) ಜಾರಿಗೆ ಬರುತ್ತಿದೆ. ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದೆ. 177 ಕಲಂಗಳನ್ನು ಬದಲಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ.

ಹಿಂದೆ ಎಷ್ಟಿತ್ತು? ಈಗ ಎಷ್ಟು ಸೆಕ್ಷನ್‌ಗಳು ಇದೆ?
ಭಾರತೀಯ ದಂಡ ಸಂಹಿತೆ (IPC) 511 ಸೆಕ್ಷನ್‌ ಇದ್ದರೆ ಭಾರತೀಯ ನ್ಯಾಯ ಸಂಹಿತಾ(BNS)-358 ಸೆಕ್ಷನ್‌ಗಳು ಇದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) 484 ಸೆಕ್ಷನ್‌ಗಳು ಇದ್ದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) – 531 ಸೆಕ್ಷನ್‌ಗಳು ಇದೆ. ಭಾರತೀಯ ಸಾಕ್ಷ್ಯ ಕಾಯ್ದೆ (IEA) 167 ಸೆಕ್ಷನ್‌ಗಳು ಇದ್ದರೆ ಭಾರತೀಯ ಸಾಕ್ಷ್ಯ ಅಧಿನಿಯಮ (BSA) 170 ಸೆಕ್ಷನ್‌ಗಳು ಇದೆ.

ಹೊಸ ಕಾನೂನಿನಲ್ಲಿ ಏನು ಬದಲಾವಣೆ?

* ಪೊಲೀಸ್ ಕಸ್ಟಡಿ ಗರಿಷ್ಠ ಅವಧಿ 14ದಿನದಿಂದ 60 ದಿನಗಳವರೆಗೂ ಹೆಚ್ಚಳ
* 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳಲ್ಲಿ ದೂರು ನೀಡಿದ 24 ಗಂಟೆಯೊಳಗೆ ಎಫ್‌ಐಆರ್
* 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳ ತನಿಖೆಯನ್ನು 14 ದಿನದಲ್ಲಿ ಒಂದು ಹಂತಕ್ಕೆ ತರಬೇಕು
* ಏಳು ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗುವ ಪ್ರಕರಣಗಳಲ್ಲಿ ಫೊರೆನ್ಸಿಕ್ ತನಿಖೆ ಕಡ್ಡಾಯ

* ಆರ್ಥಿಕ ಅಪರಾಧ ಕೇಸ್‌ಗಳಲ್ಲಿ ಪೊಲೀಸರಿಗೆ ಸ್ಥಿರಾಸ್ತಿ-ಚರಾಸ್ತಿ ಜಪ್ತಿ ಮಾಡುವ ಅಧಿಕಾರ
* ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 2 ತಿಂಗಳಲ್ಲಿ ತನಿಖೆ ಮುಗಿಸಬೇಕು
* ರೇಪ್ ಕೇಸ್‌ಗಳಲ್ಲಿ ಸಂತ್ರಸ್ತೆ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಅಧಿಕಾರಿಯ ಮುಂದೆ ಹೇಳಬೇಕು.

Advertisement

* ಪೋಕ್ಸೋ ಕೇಸ್‌ಗಳಲ್ಲಿ ಸಂತ್ರಸ್ತರ ಹೇಳಿಕೆಯನ್ನು ಮಹಿಳಾ ಅಧಿಕಾರಿ ಕೂಡ ದಾಖಲಿಸಿಕೊಳ್ಳಬಹುದು
* ಕ್ರಿಮಿನಲ್ ಕೇಸ್ ವಿಚಾರಣೆ. ಕೋರ್ಟ್ ಗರಿಷ್ಠ 2-3 ವಾಯಿದೆಗಳನ್ನು ಮಾತ್ರ ನೀಡಬೇಕು.
* ತನಿಖೆ, ಕೋರ್ಟ್ ಸಮನ್ಸ್‌ಗಳನ್ನು ಮಸೇಜ್‌, ವಾಟ್ಸಪ್ ಸೇರಿ ಡಿಜಿಟಲ್ ರೂಪದಲ್ಲಿಯೇ ಕಳಿಸಬಹುದು
* ಕೇಸ್ ನಮೂದು-ಕೋರ್ಟ್ ವಿಚಾರಣೆವರೆಗೂ ಸಂತ್ರಸ್ತರಿಗೆ ವಾಟ್ಸಪ್ ಮೂಲಕ ಪ್ರತಿಹಂತದ ಮಾಹಿತಿ

* ರಾಷ್ಟ್ರಮಟ್ಟದ ಡಿಜಿ ಲಾಕರ್‌ನಲ್ಲಿ ಸಾಕ್ಷಿಗಳ ಹೇಳಿಕೆ, ಆಡಿಯೋ, ವೀಡಿಯೋ ಸಾಕ್ಷ್ಯ ಭದ್ರ
* ರೇಡ್ ಪ್ರಕ್ರಿಯೆಯ ಕಡ್ಡಾಯ ಚಿತ್ರೀಕರಣ. 48 ಗಂಟೆಯಲ್ಲಿ ನ್ಯಾಯಾಲಯಕ್ಕೆ ವರದಿ
* ಸಂತ್ರಸ್ತರು ಠಾಣೆಗೆ ಹೋಗದೆಯೂ ಆನ್‌ಲೈನ್ ಮೂಲಕ ದೂರು ನೀಡಬಹುದು. ಮಹಿಳೆಯರು, ವಿಕಲಚೇತನರು, ರೋಗಿಗಳು, ಮಕ್ಕಳು, ಹಿರಿಯರು ಠಾಣೆಗೆ ಹೋಗುವ ಅಗತ್ಯವಿಲ್ಲ. ಈ ಐದು ವರ್ಗದ ಮಂದಿ ತಾವಿರುವ ಕಡೆಯೇ ಪೊಲೀಸರನ್ನು ಕರೆಸಬಹುದು.

* ಯಾವುದೇ ಘಟನೆಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಯಾವ ಠಾಣೆಗಾದ್ರೂ ತಿಳಿಸಬಹುದು.
* ಝೀರೋ ಎಫ್‌ಐಆರ್; ಠಾಣಾ ವ್ಯಾಪ್ತಿ ಲೆಕ್ಕಿಸದೇ ಯಾವ ಠಾಣೆಗಾದ್ರೂ ದೂರು ಸಲ್ಲಿಸಬಹುದು.
* ಆರೋಪಿಗಳ ಬಂಧನದ ಬಗ್ಗೆ ಅವರ ಸ್ನೇಹಿತರು, ಕುಟುಂಬ ಸದಸ್ಯರಿಗೆ ಪೊಲೀಸರು ತಿಳಿಸಬೇಕು.
* ಆರೋಪಿಗಳಿಗೆ, ಸಂತ್ರಸ್ತರಿಗೆ ಎಫ್‌ಐಆರ್ ಕಾಪಿ ಉಚಿತವಾಗಿ ನೀಡಬೇಕು.
* ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗುವವರಿಗೆ 10 ವರ್ಷಗಳವರೆಗೆ ಶಿಕ್ಷೆ.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ
ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |
May 16, 2025
7:16 AM
by: The Rural Mirror ಸುದ್ದಿಜಾಲ
ಮೇ 18 ರ ನಂತರ ರಾಹು ಕಾಟದಿಂದ ಈ 5 ರಾಶಿಯವರಿಗೆ ಕಷ್ಟಗಳು
May 16, 2025
7:12 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?
May 15, 2025
10:06 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror

Join Our Group