ವಿಐಪಿ, ವಿವಿಐಪಿ ವಾಹನಗಳಲ್ಲಿ ಸೈರನ್‌ ಸದ್ದು ಬದಲಾವಣೆಗೆ ಚಿಂತನೆ | ಶಂಖ, ಕೊಳಲು, ಜಾಗಟೆ ಸದ್ದಿಗೆ ಯೋಚನೆ |

August 14, 2023
1:56 PM
ಶಬ್ದ ಮಾಲಿನ್ಯವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಾಗಾಗಿ ವಿಐಪಿ ವಾಹನಗಳ ಮೇಲಿನ ಸೈರನ್ಗಳನ್ನು ನಿಲ್ಲಿಸಲು ಪ್ಲಾನ್ ಮಾಡಲಾಗುತ್ತಿದೆ. ಸೈರನ್‌ ಬದಲಿಗೆ, ಶಂಖ, ಜಾಗಟೆ, ಕೊಳಲಿನಂತ ಮಧುರ ಸದ್ದು ಕೇಳಿ ಬರಲಿದೆ.

ನಮ್ಮ ದೇಶದಲ್ಲಿ ವಿಐಪಿಗಳು, ವಿವಿಐಪಿಗಳಿಗೆ ಸತ್ಕಾರ ಇದೆ. ಅವರ ವಾಹನ ರಸ್ತೆಗೆ ಇಳಿದ್ರೆ ಸಾಕು ಜೋರಾಗಿ ಸೈರನ್ ಬಾರಿಸುತ್ತಾ, ಬಾರಿ ಗದ್ದಲ ಎಬ್ಬಿಸಿಕೊಂಡು ವಾಹನಗಳಲ್ಲಿ ಬರುತ್ತಾರೆ.  ಇನ್ಮುಂದೆ ಈ ಸದ್ದು-ಗದ್ದಲಕ್ಕೆ ಬ್ರೇಕ್ ಬೀಳಲಿದೆ.ಈ ರೀತಿಯ ಭಾರೀ ಸೌಂಡ್ ಮಾಡುವ ಸೈರನ್ ಗಳಿಗೆ ಬ್ರೇಕ್ ಬೀಳಲಿದೆ. ಬದಲಾಗಿ ಇನ್ನುಕೊಳಲು, ತಬಲಾ ಮತ್ತು ಶಂಖದಂತಹ  ಮಧುರ ಸದ್ದು ಕೇಳಿ ಬರಲಿದೆ.

Advertisement
Advertisement

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇಂಥದ್ದೊಂದು ಸುಳಿವು ನೀಡಿದ್ದಾರೆ. ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಐಪಿ ವಾಹನಗಳಲ್ಲಿ ಸೈರನ್ ಸೌಂಡ್ ಗೆ ಬ್ರೇಕ್ ಹಾಕುವ ಬಗ್ಗೆ ಚಿಂತನೆ ನಡೆಸಿದ್ದಾಗಿ ಅವರು ಹೇಳಿದ್ದಾರೆ.ಸೈರನ್ ಶಬ್ದಗಳನ್ನು ಬದಲಾಯಿಸುವ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಸೈರನ್ ಬದಲಿಗೆ ಭಾರತೀಯ ಸಂಗೀತ ವಾದ್ಯಗಳಾದ ಕೊಳಲು, ತಬಲಾ ಮತ್ತು ಶಂಖಗಳ ಧ್ವನಿಗಳು ಕೇಳಿ ಬರಲಿದೆ. ಪುಣೆಯ ಚಾಂದಿನಿ ಚೌಕ್ ಮೇಲ್ಸೇತುವೆ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ಶಬ್ದ ಮಾಲಿನ್ಯವನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂದಿದ್ದಾರೆ. ಐಪಿಗಳ ವಾಹನದ ಮೇಲೆ ಕೆಂಪು ದೀಪವನ್ನು ಕೊನೆಗೊಳಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಇದೀಗ ನಾನು ವಿಐಪಿ ವಾಹನಗಳ ಮೇಲಿನ ಸೈರನ್ಗಳನ್ನು ನಿಲ್ಲಿಸಲು ಪ್ಲಾನ್ ಮಾಡುತ್ತಿದ್ದೇನೆ ಎಂದಿದ್ದಾರೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror