ರಾಜ್ಯದಲ್ಲಿ ಮುಂದಿನ ಮೂರು ತಿಂಗಳವರೆಗೆ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಬುಧವಾರ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಐದು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ- ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ ಮತ್ತು ಸೆಸ್ಕ್ ಮೈಸೂರು) ಈ ನಿರ್ಧಾರ ತೆಗೆದುಕೊಂಡಿದೆ. ಲೋಡ್ ಶೆಡ್ಡಿಂಗ್ ಆಗದಂತೆ ಸಂಸ್ಥೆಗಳು ನೋಡಿಕೊಳ್ಳಲಿವೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಿರುವ ಕಾರಣ ವಿದ್ಯುತ್’ಗೆ ಬೇಡಿಕೆ ಹೆಚ್ಚಿದೆ. ಇದಲ್ಲದೆ, ವಿದ್ಯುತ್ ಪೂರೈಕೆ ಮಾಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಮುಂದಿನ ಮೂರು ತಿಂಗಳುಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯುತ್’ಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಕೈಗೊಳ್ಳುವಂತೆ ಇಂಧನ ಇಲಾಖೆ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿತ್ತು.
ಹೀಗಾಗಿ ಎಸ್ಕಾಮ್‌ಗಳು ಮುಂದಿನ ಮೂರು ತಿಂಗಳ ವಿದ್ಯುತ್ ಅವಶ್ಯಕತೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡಿತ್ತು. ಈ ಅಧ್ಯಯನದ ಪ್ರಕಾರ, ಇಂಧನ ಇಲಾಖೆಯು ಯಾವುದೇ ಅಡೆತಡೆಗಳಿಲ್ಲದೆ ಲಭ್ಯತೆ, ಉತ್ಪಾದನೆ ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಎಲ್ಲಾ ಎಸ್ಕಾಮ್‌ಗಳು ವಿದ್ಯುತ್ ಖರೀದಿಸಲು ಸಾಕಷ್ಟು ಹಣಕಾಸಿನ ಸಾಮರ್ಥ್ಯದೊಂದಿಗೆ ಬೇಡಿಕೆಯನ್ನು ಪೂರೈಸಲು ತಮ್ಮನ್ನು ತಾವು ಸಜ್ಜುಗೊಳಿಸಬೇಕಿದೆ. ಮತ್ತು ರಾಜ್ಯ ಮಟ್ಟದಲ್ಲಿ ಅಗತ್ಯವಿರುವ ಯಾವುದೇ ಅನಿಶ್ಚಿತತೆಗೆ ಸಿದ್ಧರಾಗಿರಬೇಕಿದೆ ಎಂದು ತಿಳಿದುಬಂದಿದೆ ಎಂದು ಬಿಳಗಿ ಮಾಹಿತಿ ನೀಡಿದ್ದಾರೆ.
ಮಾರ್ಚ್‌ನಲ್ಲಿ ಗರಿಷ್ಠ ಬೇಡಿಕೆಯು ದಿನಕ್ಕೆ 7,600 ಮೆಗಾವ್ಯಾಟ್‌ಗಳಷ್ಟಿರುತ್ತದೆ. ತಿಂಗಳಲ್ಲಿ ವಿದ್ಯುತ್ ಬಳಕೆ 132 ಮಿಲಿಯನ್ ಯೂನಿಟ್‌ಗಳನ್ನು ಮುಟ್ಟುವ ಸಾಧ್ಯತೆಯಿದೆ ಎಂದು ಬೆಸ್ಕಾಂ ಅಂದಾಜಿಸಿದೆ.
ಈ ತಿಂಗಳ 12 ದಿನಗಳ ಕಾಲ ದಿನಕ್ಕೆ ಸರಾಸರಿ 7,400 ಮೆಗಾವ್ಯಾಟ್ ಗಳನ್ನು ಬಳಕೆ ಮಾಡಲಾಗಿದ್ದು, ಎಪ್ರಿಲ್‌ನಲ್ಲಿ ಸರಾಸರಿ 7,650 ಮೆಗಾವ್ಯಾಟ್‌ಗಳಷ್ಟು ಬಳಕೆಯನ್ನು ಅಂದಾಜು ಮಾಡಲಾಗಿದೆ. ಇದರೊಂದಿಗೆ ವಿದ್ಯುತ್‌ನ ಬಳಕೆಯು ತಿಂಗಳಲ್ಲಿ 135 ದಶಲಕ್ಷ ಯೂನಿಟ್‌ಗಳನ್ನು ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ.
ನಂದಿನಿ ಹಾಲಿನ ದರ 2 ರೂಪಾಯಿ ಇಳಿಕೆಗೆ ನಿರ್ಧಾರ.
ನೇಪಾಳವು ಅಡಿಕೆ ಬೆಳೆ ಹಾಗೂ ಅಡಿಕೆ ರಫ್ತಿನ ಕಡೆಗೆ ರೈತರಿಗೆ ಪ್ರೋತ್ಸಾಹ ನೀಡಲು…
ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಸಮಗ್ರ ಯೋಜನಾ ವರದಿ…
ಕಸ್ಟಮ್ಸ್ ಗೋದಾಮಿನಿಂದ ಸುಮಾರು 40 ಟನ್ ಕಾಳುಮೆಣಸು ಹಾಗೂ ಸುಮಾರು 5 ಕೋಟಿ…
ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮ ಹಾಗೂ ʼಕಲಾ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದು, ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯು ಹಿಂಗಾರು ರೀತಿ ಬೀಸುತ್ತಿರುವುದರಿಂದ…