ರಬ್ಬರ್ ಬೆಲೆಯನ್ನು ಕೆಜಿಗೆ 300 ರೂ.ಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿಲ್ಲ ಎಂದು ಕೇಂದ್ರ ಸಚಿವಾಲಯ ಲೋಕಸಭೆಗೆ ಬುಧವಾರ ತಿಳಿಸಿದೆ.
ಇಡುಕ್ಕಿ ಸಂಸದ ಕುರಿಯಾಕೋಸ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಮಾಹಿತಿ ನೀಡಿದರು. ಪ್ರಸ್ತುತ, ರಬ್ಬರ್ ಧಾರಣೆ ಏರಿಕೆಯ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿಲ್ಲ ಎಂದು ಸಚಿವರು ಹೇಳಿದರು.
ಕೇರಳದ ರಬ್ಬರ್ ರೈತರನ್ನು ಬೆಂಬಲಿಸಲು ಕೇರಳವು ಹಣಕಾಸಿನ ನೆರವು ಕೋರಿದೆಯೇ ಎಂದು ಸಂಸದರು ಕೇಳಿದ್ದರು. ಇದಕ್ಕೆ ಉತ್ತರವಾಗಿ ಪಟೇಲ್, ವಾಣಿಜ್ಯ ಇಲಾಖೆಯ ಅಡಿಯಲ್ಲಿ ರಬ್ಬರ್ ಮಂಡಳಿಯು ತನ್ನ ವಿವಿಧ ಯೋಜನೆಗಳ ಅಡಿಯಲ್ಲಿ ಹೊಸ ಗಿಡನೆಡುವಿಕೆ ಮತ್ತು ಮರು ನೆಡುವಿಕೆಗೆ ಸಬ್ಸಿಡಿಯನ್ನು ಒದಗಿಸುತ್ತದೆ. ರಬ್ಬರ್ ಬೋರ್ಡ್ ರಬ್ಬರ್ ಮರಗಳನ್ನು ಟ್ಯಾಪಿಂಗ್ ಮಾಡಲು ಮತ್ತು ಶೀಟ್ ರಬ್ಬರ್‌ಗೆ ಸಂಸ್ಕರಿಸಲು ತರಬೇತಿಯನ್ನು ಸಹ ನೀಡುತ್ತದೆ. ರಬ್ಬರ್ ಮಂಡಳಿಯು ಉತ್ಪಾದಕತೆಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ಉದಾಹರಣೆಗೆ ಟ್ಯಾಪಿಂಗ್ ದಿನಗಳ ಸಂಖ್ಯೆಯನ್ನು ಹೆಚ್ಚಿಸಲು ಮಳೆ ರಕ್ಷಣೆಗೆ ಪ್ಲಾಸ್ಟಿಕ್ ಒದಗಿಸುವುದು, ರೋಗಗಳನ್ನು ತಡೆಗಟ್ಟುವುದು ಇತ್ಯಾದಿಗಳನ್ನು ಮಾಡಲಾಗಿದೆ ಎಂದರು.
ರಬ್ಬರ್ ಆಮದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಸಂಸದರು ಕೇಳಿರುವ ಪ್ರಶ್ನೆಗೆ ಮಾಹಿತಿ ನೀಡಿದ ಸಚಿವರು, ಸರ್ಕಾರವು 30.04.2015 ರಿಂದ ರಬ್ಬರ್ ಆಮದಿನ ಮೇಲಿನ ಸುಂಕವನ್ನು ಬದಲು ಮಾಡಿದೆ. ರಬ್ಬರ್ ಆಮದು ಮಾಡಿಕೊಳ್ಳಲು ಬಂದರು ಪ್ರವೇಶವನ್ನು ಚೆನ್ನೈ ಮತ್ತು ಜವಾಹರಲಾಲ್ ನೆಹರು ಬಂದರುಗಳಿಗೆ ನಿರ್ಬಂಧಿಸಲಾಗಿದೆ . ಇದಲ್ಲದೆ, 2023-24ರ ಕೇಂದ್ರ ಬಜೆಟ್‌ನಲ್ಲಿ, ಸಂಯುಕ್ತ ರಬ್ಬರ್ ಮೇಲಿನ ಕಸ್ಟಮ್ ಸುಂಕದ ದರವನ್ನು 10% ರಿಂದ 25% ಕ್ಕೆ ಹೆಚ್ಚಿಸಲಾಗಿದೆ. ಬೇರೆ ಯಾವುದೇ ಪ್ರಸ್ತಾವನೆಗಳು ಪರಿಗಣನೆಯಲ್ಲಿಲ್ಲ, ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ರಬ್ಬರ್ ದರವನ್ನು ಕೆಜಿಗೆ 300 ರೂ.ಗೆ ಹೆಚ್ಚಿಸಿದರೆ ಕೇರಳದಿಂದ ಬಿಜೆಪಿಗೆ ಲೋಕಸಭಾ ಸದಸ್ಯ ಸಿಗುತ್ತದೆ ಎಂದು ಈಚೆಗೆ ಕೇರಳದ ಬಿಷಪ್ ಒಬ್ಬರು ಹೇಳಿದ್ದರು. ಈ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಇದೀಗ ಈ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ಇದೀಗ 300 ರೂಪಾಯಿಗೆ ದರ ಏರಿಕೆಗೆ ಯಾವುದೇ ಪ್ರಸ್ತಾಪ ಇಲ್ಲ ಎನ್ನುವ ಮೂಲಕ ಈ ಚರ್ಚೆಗೆ ತೆರೆ ಬಿದ್ದಿದೆ.
ಮುನ್ಸೂಚನೆಯಂತೆ ಮೇ 1 ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಸಾಧ್ಯತೆಗಳಿವೆ.
ಖಾಸಗಿಯವರಿಂದ ಒತ್ತುವರಿಯಾಗಿರುವ ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…
ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ…