#Karnataka Bandh | ಕರ್ನಾಟಕ ಬಂದ್‌ಗೆ ಮಂಗಳೂರಲ್ಲಿ ಬೆಂಬಲ ಇಲ್ಲ| ಎತ್ತಿನಹೊಳೆ ಹೋರಾಟಕ್ಕೆ ಬೆಂಬಲಿಸಿಲ್ಲ | ದಿಲ್‌ರಾಜ್ ಆಳ್ವ

September 28, 2023
1:58 PM
ತುಳುನಾಡಿನ ನಾಡು ನುಡಿ ಪರ ಹೋರಾಟಗಳಿಗೆ ಕನ್ನಡ ಪರ ಸಂಘಟನೆಗಳು ಬೆಂಬಲ ಕೊಟ್ಟಿಲ್ಲ, ಹೀಗಾಗಿ ಕಾವೇರಿ ಹೋರಾಟಕ್ಕೆ ಮಂಗಳೂರಲ್ಲಿ ಖಾಸಗಿ ಬಸ್‌ಗಳ ಬೆಂಬಲ ಇಲ್ಲ ಎಂದು ಹೇಳಿದ್ದಾರೆ. ದ.ಕ ಜಿಲ್ಲೆಯಲ್ಲಿ ಬಂದ್‌ಗೆ ಕೇವಲ ನೈತಿಕ ಬೆಂಬಲ ಮಾತ್ರ ಎಂದಿರುವ ದಿಲ್‌ರಾಜ್ ಆಳ್ವ, ಬಂದ್, ಪ್ರತಿಭಟನೆ ಮಾಡಿ ಬಂದ್‌ಗೆ ಬೆಂಬಲವನ್ನು ನೀಡೋದಿಲ್ಲ.

ಕನ್ನಡ ನಾಡು, ನುಡಿ, ನೆಲ, ಜಲ, ಅಂತ ಬಂದಾಗ ರಾಜ್ಯದ ಎಲ್ಲಾರೂ ಒಂದೇ. ಆದರೆ ನೀರಿನ ವಿಚಾರ ಬಂದಾಗ ಇದು ಯಾವ ಭಾಗಕ್ಕೆ ಸಂಬಂಧಿಸಿದೆಯೋ ಆ ಭಾಗದವರು ಮಾತ್ರ ಅದಕ್ಕಾಗಿ ಹೋರಾಡುವ ಸ್ಥಿತಿ ಈಗ ರಾಜ್ಯದಲ್ಲಿ ನಿರ್ಮಾಣವಾಗಿದೆ. ಕಾವೇರಿ ಹೋರಾಟಕ್ಕೆ ಕರಾವಳಿ ಬಸ್‌ ಮಾಲಿಕರ ಸಂಘ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ. ಕಾರಣ ನಮ್ಮ ನೇತ್ರಾವತಿ ಹೋರಾಟದಲ್ಲಿ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿಲ್ಲ.

Advertisement

ಕಾವೇರಿ ನದಿ ನೀರಿನ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ರೈತಪರ ಸಂಘಟನೆಗಳು(Farmers Organisation), ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಹೋರಾಟ ತೀವ್ರಗೊಂಡಿದೆ. ಈ ಮಧ್ಯೆ ನಾಳೆ ಕರ್ನಾಟಕ ಬಂದ್‌ಗೆ ಕೂಡ ಕರೆ ನೀಡಲಾಗಿದೆ. ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಆ ಮೂಲಕ ಕಾವೇರಿ ಪರ ಹೋರಾಟ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಜನರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ.

ಸಾಮಾನ್ಯವಾಗಿ ಈ ಹಿಂದಿನ ಅನೇಕ ದಶಕಗಳ ಬೆಳವಣಿಗೆಗಳನ್ನು ಗಮನಿಸಿದಾಗ ಕರ್ನಾಟಕದ ನೆಲ ಜಲ ಪರ ಹೋರಾಟಗಳಿಗೆ ಕರಾವಳಿ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಕಾವೇರಿ ಪರ ಹೋರಾಟ, ಕನ್ನಡ ಪರ ಹೋರಾಟ, ಮೇಕೆದಾಟು, ಸೇರಿದಂತೆ ನೆಲ ಜಲ ಭಾಷೆಗೆ ಸಂಬಂಧಿಸಿದ ಕರ್ನಾಟಕದ ಹೋರಾಟಗಳಿಗೆ ಕರಾವಳಿ ಭಾಗ ಅರ್ಥಾತ್ ತುಳುನಾಡಿನಲ್ಲಿ ಬೆಂಬಲ ವ್ಯಕ್ತವಾಗೋದಿಲ್ಲ. ಅದರ ಜೊತೆಗೆ ತುಳುನಾಡು ಪರ ಹೋರಾಟಗಳಿಗೂ ಕೂಡ ಕರಾವಳಿ ಹೊರತುಪಡಿಸಿ ಇತರ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಉದಾಃ ತುಳು ಭಾಷೆ, ಎತ್ತಿನಹೊಳೆ ಹೋರಾಟ, ಕಂಬಳ ಸೇರಿದಂತೆ ಇತರ ಹೋರಾಟಗಳಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಬಿಟ್ಟರೆ ಕರ್ನಾಟಕದ ಬೇರೆ ಭಾಗದಿಂದ ಹೇಳಿಕೊಳ್ಳುವಂತಹ ಮಟ್ಟಿಗೆ ಬೆಂಬಲ ವ್ಯಕ್ತವಾದ ಉದಾಹರಣೆ ಇಲ್ಲ.  ಇದೀಗ ಈ ಬಾರಿಯ ಕಾವೇರಿ ಪರ ಹೋರಾಟದಲ್ಲೂ ಕರಾವಳಿಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಬಂದ್ ದಿನ ಎಲ್ಲವೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿರುವ ಖಾಸಗಿ ಬಸ್ ಮಾಲಕರ ಸಂಘದ ಮುಖಂಡ ದಿಲ್ ರಾಜ್ ಆಳ್ವ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ, ಜಿಲ್ಲೆಯಲ್ಲಿ ಅಂದು ಎಲ್ಲವೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ಹೇಳಿದ್ದಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ವಿಧಾತ್ರಿ ಎಂ, ಮೈಸೂರು
July 10, 2025
10:42 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನೈನಿಕಾ ಬಿ ಸಿ
July 10, 2025
10:27 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನಯೋನಿಕಾ.ಬಿ.ಸಿ.
July 10, 2025
10:11 PM
by: ದ ರೂರಲ್ ಮಿರರ್.ಕಾಂ
ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ
July 10, 2025
8:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group