Advertisement
ಸುದ್ದಿಗಳು

ಕರಾಯ ಲಕ್ಷ್ಮಣ ಶೆಟ್ಟಿಯವರಿಗೆ ಬಾರ್ಯ ನೂರಿತ್ತಾಯ ಪ್ರತಿಷ್ಠಾನದ ಪ್ರಶಸ್ತಿ

Share

ಪುತ್ತೂರಿನ ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನವು ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಸಾಧಕ ಕರಾಯ ಲಕ್ಷ್ಮಣ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. 2023 ಎಪ್ರಿಲ್ 12ರಂದು ಪರ್ಲಡ್ಕ ‘ಅಗಸ್ತ್ಯ’ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಭಾಸ್ಕರ ಬಾರ್ಯ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೀಲ್ತ್ಯಾರು ಮನೆಯ ಲಕ್ಷ್ಮಣ ಶೆಟ್ಟರು ಧಾರ್ಮಿಕ, ಸಾಮಾಜಿಕ ಕಾರ್ಯಕರ್ತರು. ತಾಳಮದ್ದಳೆ ಅರ್ಥದಾರಿ. ಕರಾಯ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾಗಿದ್ದಾಗ ಭಜನಾ ಕಮ್ಮಟ ಮಾಡಿದ ನೆಗಳ್ತೆ ಇವರದು. ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯತೆ. ಈಗವರಿಗೆ ಎಂಭತ್ತೆಂಟರ ಹರೆಯ. ಬದ್ಧತೆಯ ಬದುಕಿನ ಲಕ್ಷ್ಮಣ ಶೆಟ್ಟರ ಸಾಮಾಜಿಕ ಕಾಳಜಿಗೆ ಬಾರ್ಯ ಪ್ರತಿಷ್ಠಾನದ ಈ ವರುಷದ ಗೌರವ.

ಪ್ರತಿಷ್ಠಾನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರತಿವರುಷ ಗೌರವಿಸುವ ಪರಿಪಾಠ ಇಟ್ಟುಕೊಂಡಿದೆ. ಇದುವರೆಗೆ – ಬ್ರಹ್ಮಶ್ರೀ ದಿ.ಕೆಮ್ಮಿಂಜೆ ಕೇಶವ ತಂತ್ರಿ, ದಿ.ಡಾ.ಶೇಣಿ ಗೋಪಾಲಕೃಷ್ಣ ಭಟ್, ದಿ.ರಾಮದಾಸ ಸಾಮಗ, ದಿ.ಬಾರ್ಯ ಜಯಕೀರ್ತಿ ಬುಣ್ಣು, ದಿ.ಚಂದು ಮೇಸ್ತ್ರಿ, ದಿ.ನಾಟಿವೈದ್ಯೆ ಅಕ್ಕು ಹೆಂಗ್ಸು, ಪಾಕಶಾಸ್ತ್ರಜ್ಞ ದಿ.ಶ್ರೀನಿವಾಸ ಭಟ್, ಸರಾಫ್ ರಾಮಚಂದ್ರ ಆಚಾರ್ಯ, ಸಂಗೀತ ಸಾಧಕ ಕುದ್ಮಾರು ವೆಂಕಟ್ರಮಣ ಭಟ್, ಅಧ್ಯಾಪಕ ವಾಸುದೇವ ಮಯ್ಯ, ವೈದ್ಯ ಡಾ.ಜೆ.ಸಿ.ಅಡಿಗ, ಬರೆಪ್ಪಾಡಿ ಅನಂತಕೃಷ್ಣ ಭಟ್, ಉಮೇಶ ಶೆಣೈ, ಸಹಕಾರಿ ನಿರಂಜನ ಕುಮಾರ್, ಪ್ರೊ.ವೇದವ್ಯಾಸ, ಕೆಯ್ಯೂರು ನಾರಾಯಣ ಭಟ್, ಫಿಲೋಮಿನಾ ಇ. ಬ್ರೆಗ್ಸ್, ವೇ.ಮೂ.ಹರೀಶ್ ಉಪಾಧ್ಯಾಯ, ಪೂಕಳ ಲಕ್ಷ್ಮೀನಾರಾಯಣ ಭಟ್ ರಾಮಕೃಷ್ಣ ಮಿತ್ಯಾಂತರು ಹಾಗೂ ಮೂಡಾಯೂರು ಚಂದ್ರಶೇಖರ ದೇವಾಡಿಗ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ಸಮಿತಿಯ ಭಾಸ್ಕರ ಬಾರ್ಯ ತಿಳಿಸಿದ್ದಾರೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

1 day ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

1 day ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

1 day ago

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

2 days ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

2 days ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

2 days ago