ಸದ್ಯ ಮುಂಗಾರು ಮಳೆ ಆಶಾವಾದ | ಮುಂದಿರುವ ಸವಾಲುಗಳಲ್ಲಿ ತಾಪಮಾನವೇ ಪ್ರಮುಖ |

April 18, 2025
6:57 AM
ಈ ಬಾರಿ ಮುಂಗಾರು ಮಳೆಯಲ್ಲಿ ಸರಾಸರಿ  105% ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ ಮುಂದಿನ ತಾಪಮಾನ, ಬಿಸಿಗಾಳಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬದಲಾವಣೆ ಸಾಧ್ಯತೆ ಇದೆ. ಹೆಚ್ಚುತ್ತಿರುವ ಶಾಖದ ಅಲೆಗಳು  ಗಂಭೀರ ಸವಾಲುಗಳನ್ನು ಒಡ್ಡುತ್ತಿವೆ.

ಈ ಬಾರಿ ಮುಂಗಾರು ಮಳೆಯಲ್ಲಿ ಸರಾಸರಿ  105% ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ ಮುಂದಿನ ತಾಪಮಾನ, ಬಿಸಿಗಾಳಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬದಲಾವಣೆ ಸಾಧ್ಯತೆ ಇದೆ. ಹೆಚ್ಚುತ್ತಿರುವ ಶಾಖದ ಅಲೆಗಳು  ಗಂಭೀರ ಸವಾಲುಗಳನ್ನು ಒಡ್ಡುತ್ತಿವೆ. ಹೀಗಾಗಿ ಭಾರತವು ವಿಪರೀತ – ಶಾಖ ಮತ್ತು ಭಾರೀ ಮಳೆ  ಎರಡಕ್ಕೂ ಸಿದ್ಧವಾಗಬೇಕಾಗಿದೆ. ಹವಾಮಾನ ತಜ್ಞರು ಸರಿಯಾದ ನೀರಿನ ನಿರ್ವಹಣೆ, ವಿಪತ್ತು ಸಿದ್ಧತೆ ಮತ್ತು ಹವಾಮಾನ ನಿರೋಧಕ ಮೂಲಸೌಕರ್ಯದ ಅಗತ್ಯವಾಗಿ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ.…..ಮುಂದೆ ಓದಿ….

Advertisement

ಭಾರತವು ಈ ಬಾರಿ ಈಗಿನ ಮುನ್ಸೂಚನೆಯಂತೆ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮುಂಗಾರು ಮಳೆಗೆ ಸಜ್ಜಾಗಿದ್ದು, ರೈತರು ಹಾಗೂ ಮಳೆಯ ಮೇಲೆ ಅವಲಂಬಿತವಾಗಿರುವ ಪ್ರಮುಖ ವಲಯಗಳಿಗೆ ಸದ್ಯ ಆಶಾದಾಯಕ ವಾತಾವರಣ ಇದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ದೀರ್ಘಾವಧಿಯ ಸರಾಸರಿ ಮಳೆಯ 105% ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಐಎಂಡಿ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ, ಎಲ್ ನಿನೊ ಪರಿಸ್ಥಿತಿಗಳು ಈ ವರ್ಷ ತಟಸ್ಥವಾಗಿ ಉಳಿಯುವ ನಿರೀಕ್ಷೆಯಿದೆ ,  ಈಗಾಗಲೇ ದಾಖಲೆಯ ಶಾಖದ ಅಲೆಗಳನ್ನು ಎದುರಿಸುತ್ತಿರುವ ದೇಶಕ್ಕೆ ಇದು ಒಳ್ಳೆಯ ಸುದ್ದಿ.ಹೀಗಾಗಿ ಈ ವರ್ಷದ ಮುಂಗಾರು ಆಶಾದಾಯಕವಾಗಿ ಕಾಣುತ್ತಿದೆ  ಎಂದು  ಮೊಹಾಪಾತ್ರ ಹೇಳಿದ್ದಾರೆ.

“ದ ರೂರಲ್‌ ಮಿರರ್.ಕಾಂ” WhatsApp ಚಾನೆಲ್‌ ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

ಭಾರತದ ಕೃಷಿ ವಲಯಕ್ಕೆ ಮುಂಗಾರು ಮಳೆಯೇ ಆಧಾರವಾಗಿದೆ. ಉತ್ತಮ ಮಳೆಯ  ಮುನ್ಸೂಚನೆಯ ಹೊರತಾಗಿಯೂ, ಏಪ್ರಿಲ್-ಜೂನ್ ಅವಧಿಯಲ್ಲಿ ತೀವ್ರ ಶಾಖದ ದಿನಗಳು ಕಂಡುಬರಬಹುದು , ಇದು ಮುಂದಿನ ಮಳೆಯ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.

Advertisement

ಎಲ್ ನಿನೊ ಮತ್ತು ಲಾ ನಿನಾ ಪ್ರಮುಖ ಜಾಗತಿಕ ಹವಾಮಾನ ಪ್ರಭಾವಿಗಳು. ಎಲ್ ನಿನೊ ಪೆಸಿಫಿಕ್ ಮಹಾಸಾಗರವನ್ನು ಬೆಚ್ಚಗಾಗಿಸುತ್ತದೆ ಮತ್ತು ಭಾರತದಲ್ಲಿನ ಮಳೆಯ ಮೇಲೆ ಪರಿಣಾಂ ಬೀರುತ್ತದೆ. ಲಾ ನಿನಾ ಅದನ್ನು ತಂಪಾಗಿಸುತ್ತದೆ, ಹಾಗೂ ಮಾನ್ಸೂನ್‌ ಗೆ ಸಹಾಯ ಮಾಡುತ್ತದೆ.ಹೀಗಾಗಿ ಜೂನ್‌ ವೇಳೆಗೆ ಭಾರತವು ವಿಪರೀತ ಶಾಖ ಮತ್ತು ಉತ್ತಮ ಮಳೆ  ಎರಡಕ್ಕೂ ಸಿದ್ಧವಾಗಬೇಕಾಗಬಹುದು ಎನ್ನುವುದು ಈಗಿನ ನಿರೀಕ್ಷೆ.

“ದ ರೂರಲ್‌ ಮಿರರ್.ಕಾಂ” WhatsApp ಚಾನೆಲ್‌ ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

India is set for an above-normal monsoon season, bringing much-needed relief to farmers and key sectors dependent on rainfall. The India Meteorological Department (IMD) forecast 105% of the long-period average rainfall from June to September.

As India braces for both extremes—heat and heavy rain—climate experts stress the need for better water management, disaster preparedness, and climate-resilient infrastructure.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ
ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ
July 4, 2025
9:45 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಬುಧ ಮತ್ತು ಶನಿ ಕಾಟದಿಂದ ಈ ರಾಶಿಯವರು ಸ್ವಲ್ಪ ಜೋಪಾನವಾಗಿರಬೇಕು
July 4, 2025
7:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group