Advertisement
ಪ್ರಮುಖ

ಹವಾಮಾನ ವರದಿ | 10-09-2025 | ಸದ್ಯ ಬಿಸಿಲು-ಮೋಡ-ಮಳೆ | ಮುಂದೆ ಮಳೆ ಇದೆ.. ಯಾವಾಗ…?

Share

11.09.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಸಂಜೆ, ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಗುಡುಗು ಸಾಧ್ಯತೆಯೂ ಇದೆ.
ಈಗಿನಂತೆ ಸೆಪ್ಟೆಂಬರ್ 12 ರಿಂದ ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯಲಿದ್ದು, ಸೆಪ್ಟೆಂಬರ್ 14 ರಿಂದ ವಾಯುಭಾರ ಕುಸಿತದ ಪರಿಣಾಮದಿಂದ ಮುಂಗಾರು ಚುರುಕುಗೊಂಡು ಮಳೆಯ ಮುನ್ಸೂಚನೆ ಇದೆ.

ಮಲೆನಾಡು : ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕೆಲವು ಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆಯೂ ಇದೆ. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದೆ. ಈಗಿನಂತೆ ಸೆಪ್ಟೆಂಬರ್ 12 ರಿಂದ ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

ಒಳನಾಡು : ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಂಜೆ ಅಥವಾ ರಾತ್ರಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದೆ.  ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ಉತ್ತಮ ಮಳೆಯ ಮುನ್ಸೂಚೆನೆ ಇದ್ದು, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆಗಳಿವೆ. ಉಳಿದ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಸೆಪ್ಟೆಂಬರ್ 11 ರಿಂದ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆ ಮುಂದುವರಿಯುವ ಸೂಚನೆಗಳಿವೆ.

ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಸುಮಾರು ಸೆಪ್ಟೆಂಬರ್ 15 ರಂದು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರಮೂಲಕ ಸಾಗಿ ಮಹಾರಾಷ್ಟ್ರದ ರತ್ನಗಿರಿ, ಮುಂಬೈ ಮಧ್ಯ ಅರಬ್ಬಿ ಸಮುದ್ರ ಸೇರುವ ನಿರೀಕ್ಷೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ನ್ಯಾನೊ ರಸಗೊಬ್ಬರ ಬಳಕೆಯಿಂದ ಮಣ್ಣು, ಅಂತರ್ಜಲ ರಕ್ಷಣೆ

ಸಾಂಪ್ರದಾಯಿಕ ರಸಗೊಬ್ಬರಗಳ ಅಸಮರ್ಪಕ ಬಳಕೆಯಿಂದ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲದ ಗುಣಮಟ್ಟದ ಮೇಲೆ…

12 hours ago

ಬರಪೀಡಿತ ರೈತರಿಗೆ ತಲಾ ₹5 ಸಾವಿರ ಪರಿಹಾರ – ಯಾದಗಿರಿಯ 1.06 ಲಕ್ಷ ರೈತರಿಗೆ ಮೊದಲ ಕಂತು ಬಿಡುಗಡೆ

ಬರಪೀಡಿತ ರೈತರಿಗೆ ತಲಾ ₹5,000 ಪರಿಹಾರ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಯಾದಗಿರಿ…

12 hours ago

ಅಡಿಕೆಯ ಸಂಶೋಧನೆ –  ಕನಸಿಗೂ ಕಾರ್ಯಸಾಧ್ಯತೆಗೂ ನಡುವೆ ಉಳಿದ ಅಂತರ

2008–09ರಲ್ಲಿ ಅಡಿಕೆಯ ಪರ್ಯಾಯ ಬಳಕೆಗಳ ಸಂಶೋಧನೆಗಾಗಿ ಮಂಗಳೂರಿನ ARDF ಸಂಸ್ಥೆಗೆ ₹1 ಕೋಟಿ…

20 hours ago

ಹವಾಮಾನ ವರದಿ | 05-11-2026 | ನ.10ರ ಬಳಿಕ ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ಬೆಳವಣಿಗೆ? ಮತ್ತೆ ಮಳೆ ಬರಬಹುದೇ?

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ನವೆಂಬರ್ 8ರವರೆಗೆ…

1 day ago

ಮುರಸು ಚಂಡಮಾರುತ – ದಕ್ಷಿಣ ಭಾರತದಲ್ಲಿ ಭಾರಿ ಮಳೆ ಮುನ್ಸೂಚನೆ

ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಭಾಗದಲ್ಲಿ ಪ್ರಭಾವ ಬೀರಿದ್ದ ಮುರಸು ಚಂಡಮಾರುತ ಉತ್ತರ ವಾಯವ್ಯ…

2 days ago

ನಾಗಪುರದ ಅಡಿಕೆ ವ್ಯಾಪಾರಿ ಡಿಆರ್‌ಐ ವಶಕ್ಕೆ – ₹35 ಕೋಟಿ ಅಕ್ರಮ ಆಮದು ಪ್ರಕರಣದ ತನಿಖೆ ಚುರುಕು

₹35 ಕೋಟಿ ಮೌಲ್ಯದ ಅಡಿಕೆ ಅಕ್ರಮ ಆಮದು ಮತ್ತು ಕಸ್ಟಮ್ಸ್ ಸುಂಕ ವಂಚನೆ…

2 days ago