ಭಾರತದಲ್ಲಿ ಜನರು ಕೋಳಿ ಮತ್ತು ಮೊಟ್ಟೆಗಳನ್ನು ಹೆಚ್ಚು ತಿನ್ನುತ್ತಾರೆ. ಕೋಳಿ ವ್ಯಾಪಾರದಲ್ಲಿ ತೊಡಗಿರುವ ಜನರು ಯಾವಾಗಲೂ ಚೆನ್ನಾಗಿ ಆದಾಯ ಗಳಿಸುತ್ತಾರೆ. ಪಶುಸಂಗೋಪನೆಯಂತೆ, ಕೋಳಿ ಸಾಕಣೆಯಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ.
ವಾಸ್ತವವಾಗಿ, ಸಾಮಾನ್ಯ ಕೋಳಿಗಳು ವರ್ಷದಲ್ಲಿ 60 ರಿಂದ 70 ಮೊಟ್ಟೆಗಳನ್ನು ಇಡುತ್ತವೆ. ಹಾಗೆ ನಾವು ತಿನ್ನುವ ಮಾಮೂಲು ಮೊಟ್ಟೆಗಳ ಬೆಲೆ 5-6 ರೂಪಾಯಿ ಇರುತ್ತದೆ. ಆದರೆ ಇಲ್ಲೊಂದು ಕೋಳಿ ತಳಿಯ ಒಂದು ಮೊಟ್ಟೆಗೆ ಬರೊಬ್ಬರಿ 100 ರೂಪಾಯಿ. ಇದೇನು ಚಿನ್ನದ ಮೊಟ್ಟೆಯೇ ಎಂದು ನೀವು ಆಶ್ಚರ್ಯ ಪಟ್ಟರು ಅಚ್ಚರಿಯೇನಿಲ್ಲ. ಈ ಕೋಳಿಗಳನ್ನು ಸಾಕಿದರೆ ನಿಜಕ್ಕೂ ಅವು ಚಿನ್ನದ ಬೆಲೆಯ ಮೊಟ್ಟೆಯನ್ನು ನೀಡುತ್ತವೆ. ಈ ಕೋಳಿ ತಳಿಯ ಹೆಸರು ಅಸಿಲ್ ಕೋಳಿ. ಈ ಕೋಳಿ ನೀವು ಸಾಕಿದ್ದಲ್ಲಿ ಕೇವಲ ಒಂದು ಕೋಳಿಯಿಂದ ವರ್ಷದಲ್ಲಿ 60 ರಿಂದ 70 ಸಾವಿರ ರೂಪಾಯಿ ಗಳಿಸಬಹುದು.
ನೀವು 5 ರಿಂದ 10 ಕೋಳಿಗಳೊಂದಿಗೆ ಕೋಳಿ ವ್ಯಾಪಾರವನ್ನು ಪ್ರಾರಂಭಿಸಬಹುದು. ಕೆಲವು ತಿಂಗಳ ನಂತರ ನೀವು ಕೋಳಿ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಈ ಕೋಳಿಗಳು ಸಾಮಾನ್ಯವಾಗಿ ದೇಶೀಯ ಕೋಳಿಗಳಂತೆ ಅಲ್ಲ. ಇವುಗಳ ಬಾಯಿ ಉದ್ದವಾಗಿದೆ. ಇದು ತುಂಬಾ ಕಡಿಮೆ ತೂಕವನ್ನು ಹೊಂದಿದೆ. ಈ ಕೋಳಿಗಳು ಹೆಚ್ಚೆಂದರೆ 3 ಕೆ.ಜಿ ಮಾತ್ರ ತೂಕ ಬರುತ್ತವೆ. ಈ ತಳಿಯ ಕೋಳಿಗಳನ್ನು ಹೆಚ್ಚಾಗಿ ಹುಂಜದ ಕಾಳಗಗಳಲ್ಲಿ ಬಳಸಲಾಗುತ್ತದೆ. ಅಸಿಲ್ ತಳಿಯ ಕೋಳಿ ಸಾಕಿದರೆ ರೈತ ಬಂಧುಗಳು ಮೊಟ್ಟೆ ಮಾರಾಟ ಮಾಡಿ ಶ್ರೀಮಂತರಾಗಬಹುದು.
ಈ ಅಸಿಲ್ ತಳಿಯ ಕೋಳಿ ಹೆಚ್ಚಾಗಿ ತಮಿಳುನಾಡು, ಆಂದ್ರಪ್ರದೇಶ, ಒಡಿಸ್ಸಾದಲ್ಲಿ ಕಂಡು ಬರುತ್ತದೆ. ವಿದೇಶಗಳಿಗೆ ಇದನ್ನು ಹೆಚ್ಚಾಗಿ ರಫ್ತು ಮಾಡಲಾಗುತ್ತದೆ.
ಕೃಷಿಯ ಹೊರತಾಗಿ, ಭಾರತದಲ್ಲಿ ರೈತರು ಪಶುಪಾಲನೆ ಮತ್ತು ಕೋಳಿ ಸಾಕಣೆಯನ್ನು ಅಧಿಕ ಪ್ರಮಾಣದಲ್ಲಿ ಮಾಡುತ್ತಾರೆ. ಇದರಿಂದ ರೈತರಿಗೆ ಉತ್ತಮ ಆದಾಯ ದೊರೆಯುತ್ತದೆ. ರಾಜ್ಯ ಸರ್ಕಾರ ಕೂಡ ಪಶುಸಂಗೋಪನೆ ಮತ್ತು ಕೋಳಿ ಸಾಕಾಣೆಯನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಅನುದಾನ ನೀಡುತ್ತವೆ. ರೈತರ ಆದಾಯ ಹೆಚ್ಚಾಗಲಿ ಎಂಬುದು ಸರ್ಕಾರದ ಆಶಯ.