Advertisement
ಸುದ್ದಿಗಳು

ಈ ಕೋಳಿ ಮೊಟ್ಟೆ ಒಂದರ ಬೆಲೆ ಬರೋಬ್ಬರಿ 100 ರೂಪಾಯಿ! ಕೋಳಿ ಸಾಕಾಣಿಕೆ ಮಾಡೋರಿಗೆ ಬಂಪರ್

Share

ಭಾರತದಲ್ಲಿ ಜನರು ಕೋಳಿ ಮತ್ತು ಮೊಟ್ಟೆಗಳನ್ನು ಹೆಚ್ಚು ತಿನ್ನುತ್ತಾರೆ. ಕೋಳಿ ವ್ಯಾಪಾರದಲ್ಲಿ ತೊಡಗಿರುವ ಜನರು ಯಾವಾಗಲೂ ಚೆನ್ನಾಗಿ ಆದಾಯ  ಗಳಿಸುತ್ತಾರೆ. ಪಶುಸಂಗೋಪನೆಯಂತೆ, ಕೋಳಿ ಸಾಕಣೆಯಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ.

ವಾಸ್ತವವಾಗಿ,  ಸಾಮಾನ್ಯ ಕೋಳಿಗಳು ವರ್ಷದಲ್ಲಿ 60 ರಿಂದ 70 ಮೊಟ್ಟೆಗಳನ್ನು ಇಡುತ್ತವೆ. ಹಾಗೆ ನಾವು ತಿನ್ನುವ ಮಾಮೂಲು ಮೊಟ್ಟೆಗಳ ಬೆಲೆ 5-6 ರೂಪಾಯಿ ಇರುತ್ತದೆ. ಆದರೆ ಇಲ್ಲೊಂದು ಕೋಳಿ ತಳಿಯ ಒಂದು ಮೊಟ್ಟೆಗೆ ಬರೊಬ್ಬರಿ 100 ರೂಪಾಯಿ. ಇದೇನು ಚಿನ್ನದ ಮೊಟ್ಟೆಯೇ ಎಂದು ನೀವು ಆಶ್ಚರ್ಯ ಪಟ್ಟರು ಅಚ್ಚರಿಯೇನಿಲ್ಲ.  ಈ ಕೋಳಿಗಳನ್ನು ಸಾಕಿದರೆ ನಿಜಕ್ಕೂ ಅವು ಚಿನ್ನದ ಬೆಲೆಯ ಮೊಟ್ಟೆಯನ್ನು ನೀಡುತ್ತವೆ. ಈ ಕೋಳಿ ತಳಿಯ ಹೆಸರು ಅಸಿಲ್ ಕೋಳಿ.  ಈ ಕೋಳಿ ನೀವು ಸಾಕಿದ್ದಲ್ಲಿ ಕೇವಲ ಒಂದು ಕೋಳಿಯಿಂದ ವರ್ಷದಲ್ಲಿ 60 ರಿಂದ 70 ಸಾವಿರ ರೂಪಾಯಿ ಗಳಿಸಬಹುದು.

ನೀವು 5 ರಿಂದ 10 ಕೋಳಿಗಳೊಂದಿಗೆ ಕೋಳಿ ವ್ಯಾಪಾರವನ್ನು ಪ್ರಾರಂಭಿಸಬಹುದು. ಕೆಲವು ತಿಂಗಳ ನಂತರ ನೀವು ಕೋಳಿ ಮತ್ತು ಮೊಟ್ಟೆಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಈ ಕೋಳಿಗಳು ಸಾಮಾನ್ಯವಾಗಿ ದೇಶೀಯ ಕೋಳಿಗಳಂತೆ ಅಲ್ಲ. ಇವುಗಳ ಬಾಯಿ ಉದ್ದವಾಗಿದೆ. ಇದು ತುಂಬಾ ಕಡಿಮೆ ತೂಕವನ್ನು ಹೊಂದಿದೆ. ಈ ಕೋಳಿಗಳು ಹೆಚ್ಚೆಂದರೆ 3 ಕೆ.ಜಿ ಮಾತ್ರ ತೂಕ ಬರುತ್ತವೆ.  ಈ ತಳಿಯ ಕೋಳಿಗಳನ್ನು ಹೆಚ್ಚಾಗಿ ಹುಂಜದ ಕಾಳಗಗಳಲ್ಲಿ ಬಳಸಲಾಗುತ್ತದೆ. ಅಸಿಲ್ ತಳಿಯ ಕೋಳಿ ಸಾಕಿದರೆ ರೈತ ಬಂಧುಗಳು ಮೊಟ್ಟೆ ಮಾರಾಟ ಮಾಡಿ ಶ್ರೀಮಂತರಾಗಬಹುದು.

ಈ ಅಸಿಲ್ ತಳಿಯ ಕೋಳಿ ಹೆಚ್ಚಾಗಿ ತಮಿಳುನಾಡು, ಆಂದ್ರಪ್ರದೇಶ, ಒಡಿಸ್ಸಾದಲ್ಲಿ ಕಂಡು ಬರುತ್ತದೆ. ವಿದೇಶಗಳಿಗೆ ಇದನ್ನು ಹೆಚ್ಚಾಗಿ ರಫ್ತು ಮಾಡಲಾಗುತ್ತದೆ.

ಕೃಷಿಯ ಹೊರತಾಗಿ, ಭಾರತದಲ್ಲಿ ರೈತರು ಪಶುಪಾಲನೆ ಮತ್ತು ಕೋಳಿ ಸಾಕಣೆಯನ್ನು ಅಧಿಕ ಪ್ರಮಾಣದಲ್ಲಿ ಮಾಡುತ್ತಾರೆ. ಇದರಿಂದ ರೈತರಿಗೆ ಉತ್ತಮ ಆದಾಯ ದೊರೆಯುತ್ತದೆ. ರಾಜ್ಯ ಸರ್ಕಾರ ಕೂಡ ಪಶುಸಂಗೋಪನೆ ಮತ್ತು ಕೋಳಿ ಸಾಕಾಣೆಯನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಅನುದಾನ ನೀಡುತ್ತವೆ. ರೈತರ ಆದಾಯ ಹೆಚ್ಚಾಗಲಿ ಎಂಬುದು ಸರ್ಕಾರದ ಆಶಯ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಮಾರುಕಟ್ಟೆ- ಸದ್ಯ ಮಾರುಕಟ್ಟೆ ಸ್ಥಿರ | ರಬ್ಬರ್‌ ಧಾರಣೆ ಇಳಿಕೆಯ ಹಾದಿ

ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…

3 hours ago

ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ

ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…

4 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ

ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…

6 hours ago

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…

10 hours ago

ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…

11 hours ago

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು

ರಾಜ್ಯ ಬಜೆಟ್‌ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…

22 hours ago