#Cauverywater | ಮತ್ತೆ ಮತ್ತೆ ರಾಜ್ಯಕ್ಕೆ ಹೊಡೆತ ಕೊಡುತ್ತಿರುವ CWRC ಶಿಫಾರಸ್ಸು | ಅ.31 ರವರೆಗೆ ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ |

October 11, 2023
8:30 PM
ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ಅಂದ್ರೆ ಅಕ್ಟೋಬರ್ 16ರಿಂದ 31ರ ವರೆಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಭೆ ನಡೆಸಿದ ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತಾ ಶಿಫಾರಸ್ಸು ಮಾಡಿದ್ದಾರೆ‌.

ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ಮತ್ತೆ ರಾಜ್ಯಕ್ಕೆ ಮೇಲಿಂದ ಮೇಲೆ ಹೊಡೆತ ಕೊಡುತ್ತಿದೆ. ರಾಜ್ಯದ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೆ ಅಕ್ಟೋಬರ್ 16 ರಿಂದ 31ರ ವರೆಗೆ ತಮಿಳುನಾಡಿಗೆ#Tamilnadu ಪ್ರತಿ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ  ಕರ್ನಾಟಕ ಸರ್ಕಾರಕ್ಕೆ CWRC ಸೂಚನೆ ನೀಡಿದೆ.

Advertisement
ಕಾವೇರಿ ನದಿ ನೀರು #Cauvery River Water ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ಸಭೆ ನಡೆಸಿದ ಸಮಿತಿಯು ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ಅಂದ್ರೆ ಅಕ್ಟೋಬರ್ 16ರಿಂದ 31ರ ವರೆಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಭೆ ನಡೆಸಿದ ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತಾ ಶಿಫಾರಸ್ಸು ಮಾಡಿದ್ದಾರೆ‌. ಇದೇ ಸೆಪ್ಟೆಂಬರ್‌ 29 ರಂದು 15 ದಿನಗಳವರೆಗೆ ಪ್ರತಿ ನಿತ್ಯ 3,000 ಕ್ಯೂಸೆಕ್‌ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ #CWMA ಆದೇಶಿಸಿತ್ತು. ಆದೇಶ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸಿತು.
ಸಭೆಯಲ್ಲಿ ತಮಿಳುನಾಡು ಪರ ಭಾಗಿಯಾಗಿದ್ದ ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಮಣಿಯನ್, ಮುಖ್ಯ ಎಂಜಿನಿಯರ್ ಸುಬ್ರಮಣಿಯನ್ ಮತ್ತು ಪಟ್ಟಬ್ರಮಣ್ ನಿತ್ಯ 16000 ಕ್ಯೂಸೆಕ್ ನಂತೆ ಹದಿನೈದು ದಿನಗಳ ಕಾಲ 20.75 ಟಿಎಂಸಿ ನೀರು ಹರಿಸಲು ಒತ್ತಡ ಹೇರಿತು. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಅಧಿಕಾರಿಗಳು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 50% ಮಳೆಯ ಕೊರತೆ ಇದೆ. ಮುಂದಿನ ದಿನಗಳ ಮಳೆಯಾಗುವ ಯಾವುದೇ ಭರವಸೆಗಳಿಲ್ಲ ಹೀಗಾಗೀ ನೀರು ಹರಿಸಲು ಸಾಧ್ಯವಿಲ್ಲ ಎಂದರು. ಎರಡು ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆಯಲು ಸಮಿತಿಯೂ ಹಳೆ ಆದೇಶವನ್ನು ಅಕ್ಟೋಬರ್ 31 ವರೆಗೂ ಮುಂದುವರಿಸಲು ಶಿಫಾರಸ್ಸು ಮಾಡಿತು. ಮುಂದಿನ ಒಂದೇರಡು ದಿನಗಳಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದ್ದು ಈ ಆದೇಶ ಪ್ರಶ್ನಿಸಬಹುದಾಗಿದೆ.

– ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪಡಿತರ ಚೀಟಿದಾರರ ಇ-ಕೆವೈಸಿ ಮರುಸಂಗ್ರಹಿಸುವ ಕೊನೆಯ ಅವಕಾಶ
April 25, 2025
9:30 PM
by: ದ ರೂರಲ್ ಮಿರರ್.ಕಾಂ
ರಬ್ಬರ್ ತೋಟಗಳ ಮಾಹಿತಿ ಸಂಗ್ರಹ | ರಬ್ಬರ್ ತೋಟಗಳ ಜಿಯೋ-ಮ್ಯಾಪಿಂಗ್
April 25, 2025
9:15 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 25-04-2025 | ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆ |
April 25, 2025
2:04 PM
by: ಸಾಯಿಶೇಖರ್ ಕರಿಕಳ
ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ
April 25, 2025
7:47 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group