ಗದಗ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ ಹೊರಡಿಸಲಾಗಿದೆ. ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗೆ ವಿಮೆ ಕಂತು ಪಾವತಿಗೆ ಇದೇ 31 ರಂದು ಕೊನೆಯ ದಿನವಾಗಿವೆ. ಮಳೆಯಾಶ್ರಿತ ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗೆ ವಿಮೆ ಕಂತು ಪಾವತಿಗೆ ಆಗಸ್ಟ್ 16 ರಂದು ಕೊನೆಯ ದಿನವಾಗಿದೆ. ಆಸಕ್ತ ರೈತರು ವಿಮೆಗೆ ನೋಂದಾಯಿಸಿಕೊಳ್ಳಲು ಹತ್ತಿರದ ರಾಷ್ಟ್ರಿಕೃತ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಗದಗ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel