ಪುತ್ತೂರಿನಲ್ಲಿ ಗೇರು ಕೃಷಿ ತರಬೇತಿ ಕಾರ್ಯಕ್ರಮ | ಗೇರು ಕೃಷಿ ತೋಟಗಾರಿಕಾ ಬೆಳೆಯಾಗಿದೆ, ಕೃಷಿಕರು ಗೇರು ಕೃಷಿಯತ್ತ ಗಮನಹರಿಸಿ |

February 13, 2023
9:22 PM

ಗೇರು ಕಾಡುಬೆಳೆಯಲ್ಲ. ಅದೊಂದು ತೋಟಗಾರಿಕಾ ಬೆಳೆಯಾಗಿದೆ. ಇತರ ತೋಟಗಾರಿಕಾ ಬೆಳೆಗಳಿಗೆ ಒದಗಿಸುವಂತಹ ಕೃಷಿ ನಿರ್ವಹಣಾ ಕ್ರಮಗಳನ್ನು ಗೇರು ಬೇಸಾಯದಲ್ಲೂ ಅಳವಡಿಸಿಕೊಂಡಲ್ಲಿ  ಗೇರು ಉತ್ಪಾದಕತೆಯಲ್ಲಿ ಗಣನೀಯವಾದ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್ ಸಿ ಜಗದೀಶ್‌ ಹೇಳಿದರು.

Advertisement
Advertisement
Advertisement

ಅವರು ಪುತ್ತೂರು ಮೊಟ್ಟೆತ್ತಡ್ಕದ ಐಸಿಏಆರ್ -ಡಿಸಿಆರ್ ಕೇಂದ್ರದಲ್ಲಿ ಆಯೋಜಿಸಲಾಗಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಪ್ರಾಯೋಜಿತ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಪ್ರಾಮುಖ್ಯತೆಯೊಂದಿಗೆ ಸುಧಾರಿತ ಗೇರು ಉತ್ಪಾದಕತಾ ತಂತ್ರಜ್ಞಾನ ದ ಕುರಿತ ರಾಷ್ಟ್ರಮಟ್ಟದ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಡಾ. ಹೆಚ್. ರಾಜಶೇಖರ ವಿಜ್ಞಾನಿ (ಸಸ್ಯ ರೋಗಶಾಸ್ತ್ರ), ತರಬೇತಿ ಮತ್ತು ಅದರ ಉಪಯುಕ್ತತೆಯ ಕುರಿತಂತೆ ವಿವರಿಸಿದರು. ಡಾ. ಟಿ ಎನ್, ರವಿಪ್ರಸಾದ್,ಪ್ರಧಾನ ವಿಜ್ಞಾನಿ (ಕೀಟಶಾಸ್ತ್ರ) ರವರು ತರಬೇತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಸಂಸ್ಥೆಯ ಹಿರಿಯ ವಿಜ್ಞಾನಿ (ಕೀಟಶಾಸ್ತ್ರ)  ಡಾ. ಕೆ ವನಿತಾ ಸ್ವಾಗತಿಸಿದರು.

ಐಸಿಏಆರ್ –ಡಿಸಿಆರ್ ಸಂಸ್ಥೆಯ ನಿರ್ದೇಶಕರಾದ ಡಾ. ಜೆ. ದಿನಕರ ಅಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಿಂದ ತರಬೇತಿಗೆ ಸಂಬಂಧಿಸಿದ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.  ಡಾ. ವೀಣಾ ಜಿ ಎಲ್  ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ. ಹೆಚ್ ರಾಜಶೇಖರ್‌ ವಂದಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ
ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು
January 23, 2025
10:59 AM
by: The Rural Mirror ಸುದ್ದಿಜಾಲ
ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ
January 23, 2025
10:50 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |
January 23, 2025
10:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror