ಗೇರು ಕಾಡುಬೆಳೆಯಲ್ಲ. ಅದೊಂದು ತೋಟಗಾರಿಕಾ ಬೆಳೆಯಾಗಿದೆ. ಇತರ ತೋಟಗಾರಿಕಾ ಬೆಳೆಗಳಿಗೆ ಒದಗಿಸುವಂತಹ ಕೃಷಿ ನಿರ್ವಹಣಾ ಕ್ರಮಗಳನ್ನು ಗೇರು ಬೇಸಾಯದಲ್ಲೂ ಅಳವಡಿಸಿಕೊಂಡಲ್ಲಿ ಗೇರು ಉತ್ಪಾದಕತೆಯಲ್ಲಿ ಗಣನೀಯವಾದ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್ ಸಿ ಜಗದೀಶ್ ಹೇಳಿದರು.
ಅವರು ಪುತ್ತೂರು ಮೊಟ್ಟೆತ್ತಡ್ಕದ ಐಸಿಏಆರ್ -ಡಿಸಿಆರ್ ಕೇಂದ್ರದಲ್ಲಿ ಆಯೋಜಿಸಲಾಗಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಪ್ರಾಯೋಜಿತ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಪ್ರಾಮುಖ್ಯತೆಯೊಂದಿಗೆ ಸುಧಾರಿತ ಗೇರು ಉತ್ಪಾದಕತಾ ತಂತ್ರಜ್ಞಾನ ದ ಕುರಿತ ರಾಷ್ಟ್ರಮಟ್ಟದ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಹೆಚ್. ರಾಜಶೇಖರ ವಿಜ್ಞಾನಿ (ಸಸ್ಯ ರೋಗಶಾಸ್ತ್ರ), ತರಬೇತಿ ಮತ್ತು ಅದರ ಉಪಯುಕ್ತತೆಯ ಕುರಿತಂತೆ ವಿವರಿಸಿದರು. ಡಾ. ಟಿ ಎನ್, ರವಿಪ್ರಸಾದ್,ಪ್ರಧಾನ ವಿಜ್ಞಾನಿ (ಕೀಟಶಾಸ್ತ್ರ) ರವರು ತರಬೇತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಸಂಸ್ಥೆಯ ಹಿರಿಯ ವಿಜ್ಞಾನಿ (ಕೀಟಶಾಸ್ತ್ರ) ಡಾ. ಕೆ ವನಿತಾ ಸ್ವಾಗತಿಸಿದರು.
ಐಸಿಏಆರ್ –ಡಿಸಿಆರ್ ಸಂಸ್ಥೆಯ ನಿರ್ದೇಶಕರಾದ ಡಾ. ಜೆ. ದಿನಕರ ಅಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಿಂದ ತರಬೇತಿಗೆ ಸಂಬಂಧಿಸಿದ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಡಾ. ವೀಣಾ ಜಿ ಎಲ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ. ಹೆಚ್ ರಾಜಶೇಖರ್ ವಂದಿಸಿದರು.
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…