ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ಆಯೋಜಿಸಲಾಗುತ್ತಿರುವ ಆಜಾದಿಕಾ ಅಮೃತ ಮಹೋತ್ಸವ ಅಭಿಯಾನದ ಭಾಗವಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವನ್ನು ಏಪ್ರಿಲ್2 5- 30 ವರೆಗೆ ದೇಶದಾದ್ಯಂತ ಆಯೋಜಿಸಲಾಗಿದೆ. ಇದರ ಅಂಗವಾಗಿ ಪುತ್ತೂರಿನಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯ ರೈತರಿಗಾಗಿ “ಜೈವಿಕ ಸಾರವರ್ಧನೆಯ ಮೂಲಕ ಪೌಷ್ಟಿಕಾಂಶ ಭದ್ರತೆ”ಎಂಬ ವಿಷಯದ ಕುರಿತು ವೆಬಿನಾರ್ ಆಯೋಜನೆ ಮಾಡಿತು.
ದೇಶದ ರೈತ ಸಮುದಾಯವನ್ನು ಬೆಂಬಲಿಸಲು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಸರಣಿ ಚಟುವಟಿಕೆಗಳನ್ನು ಕೈಗೊಂಡಿವೆ. ಇದರ ಅಂಗವಾಗಿ ವಿವಿಧ ರೈತ ಸ್ನೇಹಿ ಕಾರ್ಯಕ್ರಮಗಳು ಆಯೋಜನೆಯಾಗುತ್ತಿವೆ. ಜೈವಿಕ ಸಾರವರ್ಧನೆಯ ಮೂಲಕ ಪೌಷ್ಟಿಕಾಂಶ ಭದ್ರತೆ” ವೆಬಿನಾರ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಭಾರ ನಿರ್ದೇಶಕರಾದ ಡಾ. ಟಿಎನ್ ವಿ ಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಐಸಿಎಆರ್-ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ.ರಾಜ ಕುಮಾರ್ , ಅವರು ಜೈವಿಕ ಸಾರವರ್ಧನೆಯ ಅಗತ್ಯತೆ, ಅದನ್ನು ಸಾಧಿಸುವವಿ ಧಾನಗಳು, ಆಹಾರ ಭದ್ರತೆ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂದು ಮಾಹಿತಿಪೂರ್ಣ ವಿವರಣೆ ನೀಡಿದರು ಮತ್ತು ಕೆಲವು ಯಶೋಗಾಥೆಗಳನ್ನು ಹಂಚಿಕೊಂಡರು. ಆ
ವಿಜ್ಞಾನಿ ಡಾ.ಅಶ್ವತಿಚಂದ್ರಕುಮಾರ್ ವಂದಿಸಿದರು.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…