ಪದ್ಯಾಣ ಗಣಪತಿ ಭಟ್‌ ಅವರಿಗೆ ವಳಲಂಬೆಯಲ್ಲಿ ನುಡಿನಮನ | ಕಲಾವಿದನಾಗಿಯೂ ಅಭಿಜಾತ ಕಲಾವಿದನಾಗಿಯೂ ಬೆಳೆದವರು ಪದ್ಯಾಣ ಗಣಪತಿ ಭಟ್ – ಗಿರೀಶ್‌ ಭಟ್‌ ಮುಳಿಯಾಲ |

November 1, 2021
8:05 PM
ಗಿರೀಶ್‌ ಭಟ್‌ ಮುಳಿಯಾಲ

ವಿವಿಧ ಶೈಲಿಗಳ ನಡುವೆ ಹೊಸತನದ ಭಾಗವತರ ಕೊಂಡಿಯಾಗಿ ಯಕ್ಷಗಾನ ರಂಗ ಸಾಗಿಸಿದವರು ಪದ್ಯಾಣ ಗಣಪತಿ ಭಟ್‌ ಅವರು ಕಲಾವಿದನಾಗಿಯೂ ಅಭಿಜಾತ ಕಲಾವಿದನಾಗಿಯೂ ಬೆಳೆದವರು. ಅನೇಕರನ್ನು ಬೆಳೆಸಿದವರು ಪದ್ಯಾಣ ಗಣಪತಿ ಭಟ್‌ ಎಂದು ನ್ಯಾಯವಾದಿ ಗಿರೀಶ್‌ ಭಟ್‌ ಮುಳಿಯಾಲ ಹೇಳಿದರು.

Advertisement
Advertisement
Advertisement

ಅವರು ಗುತ್ತಿಗಾರಿನ ವಳಲಂಬೆಯಲ್ಲಿ ಯಕ್ಷಕಲಾಭಿಮಾನಿ ಮಿತ್ರರ ವತಿಯಿಂದ ನಡೆದ ಯಕ್ಷಗಾನ ಗಾನಾರ್ಚನೆ ಕಾರ್ಯಕ್ರಮದಲ್ಲಿ  “ಪದ್ಯಾಣ ಗಣಪತಿ ಭಟ್‌ ”  ಅವರಿಗೆ ನುಡಿನಮನ ಸಲ್ಲಿಸಿದರು. ಪದಯಾನದ ಚಿಗುರು ಹೆಮ್ಮರವಾಗಿ ಬೆಳೆದದ್ದು ಮಾತ್ರವಲ್ಲ ಅನೇಕರನ್ನು ಬೆಳೆಯಿಸಿದ್ದಾರೆ ಕೂಡಾ.  ಪದ್ಯಾಣ ಎಂಬ ಶಬ್ದದಲ್ಲಿಯೇ ಪದ್ಯ ಎನ್ನುವ ಭಾವವೂ ಇದೆ, ಹೀಗಾಗಿ ವಿವಿಧ ಶೈಲಿಗಳ ನಡುವೆ ಹೊಸತನದ ಅಧ್ಯಯನದಲ್ಲಿ  ನಿರತರಾಗಿ ಹೊಸಶೈಲಿಯ ಜೊತೆಗೆ ಪರಿಪಕ್ವವಾದ ಪದಯಾನ ಮಾಡಿದ್ದಾರೆ ಎಂದರು.

Advertisement

ಸೂಕ್ತವಾದ ರಾಗ ಅಳವಡಿಕೆ, ಪಕ್ಕವಾದ್ಯದವರೊಂದಿಗೆ ಕಸರತ್ತು ಇತ್ಯಾದಿಗಳಲ್ಲೂ ಪ್ರೌಢಿಮೆ ಮೆರೆದವರು. ಸಂಘಟನೆ ದೃಷ್ಟಿಯಿಂದಲೂ ಸಹಭಾಗಿತ್ವ ನೀಡುವ ಪದ್ಯಾಣರು , ಒಡನಾಡಿಯಾಗಿ ಕಲಾವಿದರನ್ನು  ಮಾತನಾಡಿಸುವವರಾಗಿದ್ದರು. ಯಕ್ಷಗಾನ ರಂಗದಲ್ಲಿ ಪದ್ಯಾಣರು ಅಭಿಜಾತ ಎನಿಸಿಕೊಂಡವರು, ಕಲೆಯನ್ನು ಧಾರೆ ಎರೆದು ಬೆಳೆಸುವವರು ಆಗಿದ್ದರು, ಅಂತಹ ಮೇರು ವ್ಯಕ್ತಿತ್ವ ಇಲ್ಲವಾಗಿರುವುದು  ಯಕ್ಷರಂಗಕ್ಕೆ ತುಂಬಲಾರದ ನಷ್ಟ, ಆದರೆ ಅದೇ ಪರಂಪರೆ ಮುಂದುವರಿಯಲಿ ಎಂದು ಗಿರೀಶ್‌ ಮುಳಿಯಾಲ ಹೇಳಿದರು.

Advertisement

 

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೊಸ ಬೆಳೆ…. ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ
April 24, 2024
2:57 PM
by: The Rural Mirror ಸುದ್ದಿಜಾಲ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ
ಅಡಿಕೆ ಆಮದು ಒಪ್ಪಂದು ರದ್ದು…! | ಭರವಸೆ ನೀಡಿದ ಕಾಂಗ್ರೆಸ್‌ |
April 24, 2024
2:23 PM
by: ದ ರೂರಲ್ ಮಿರರ್.ಕಾಂ
24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror