MIRROR FOCUS

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ರೈತರ ಸಾವಿನ ಸಂಖ್ಯೆ | 2023ರಲ್ಲಿ ಹೆಚ್ಚಿದ ರೈತರ ಆತ್ಮಹತ್ಯೆ | ವರದಿ ಬಹಿರಂಗ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರತ(India) ದೇಶಕ್ಕೆ ರೈತರೇ(Farmer) ಬೆನ್ನೆಲುಬು. ಕೃಷಿ(Agriculture) ಇಲ್ಲದೆ ನಮ್ಮ ದೇಶವನ್ನು ಊಹಿಸಲೂ ಅಸಾಧ್ಯ. ನಮ್ಮ ದೇಶದಲ್ಲಿ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿತರಾಗಿದ್ದಾರೆ. ಆದರೆ ಕೃಷಿ, ರೈತರಿಗೆ ಸಿಗಬೇಕಾದ ಸೌಲಭ್ಯ, ಗಮನ ತೀರ ಕಡಿಮೆ. ಇದರ ಪರಿಣಾಮವೇ ರೈತರ ಆತ್ಮಹತ್ಯೆ(Farmer Suicide). ಪ್ರತಿ ವರ್ಷ ರೈತರ ಆತ್ಮಹತ್ಯೆ ಸರಣಿ ಮುಂದುವರಿಯುತ್ತಲೇ ಇದೆ. ಇದು ನಿಜಕ್ಕೂ ದುರಾಅದೃಷ್ಟಕರ ಸಂಗತಿ. ಈ ಸಮಸ್ಯೆಯನ್ನು ತಡೆಗಟ್ಟುವಲ್ಲಿ  ಭಾರತ ಸರ್ಕಾರವು(Central Govt) ವಿಫಲವಾಗಿದೆ ಎನ್ನುವುದನ್ನು ಇತ್ತೀಚಿನ ಆತ್ಮಹತ್ಯೆ ಕುರಿತ ಅಂಕಿ-ಅಂಶಗಳು ಬಹಿರಂಗಪಡಿಸುತ್ತದೆ.ಮುಂದೆ ಓದಿ

Advertisement
Advertisement

2023ರಲ್ಲಿ ಮಹಾರಾಷ್ಟ್ರದ ಎಂಟು ಜಿಲ್ಲೆಗಳಲ್ಲಿ 1,088 ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಮರಾಠವಾಡ ವಿಭಾಗೀಯ ಆಯುಕ್ತರ ಕಚೇರಿಯ ವರದಿಯು ಬಹಿರಂಗಪಡಿಸಿದೆ. ಇದು 2022ರಲ್ಲಿ ವರದಿಯಾಗಿದ್ದ ರೈತರ ಸಾವಿಗಳಿಗಿಂತ ಹೆಚ್ಚಳವಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿದೆ. 2023ರಲ್ಲಿ ನಡೆದ 1,088 ಆತ್ಮಹತ್ಯೆಗಳಲ್ಲಿ ಮಹರಾಷ್ಟ್ರದ ಬೀಡ್‌ನಲ್ಲಿ 269 ಸಾವುಗಳು, ಛತ್ರಪತಿ ಸಂಭಾಜಿನಗರದಲ್ಲಿ 182, ನಾಂದೇಡ್‌ನಲ್ಲಿ 175, ಧಾರಶಿವ್‌ನಲ್ಲಿ 171 ಮತ್ತು ಪರ್ಭಾನಿಯಲ್ಲಿ 103 ಸಾವುಗಳು ಸಂಭವಿಸಿದೆ ಎಂದು ಅಂಕಿ-ಅಂಶಗಳು ವರದಿ ಮಾಡಿದೆ.ಮುಂದೆ ಓದಿ

ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಲಾಗಿದೆ. 1,088 ಪ್ರಕರಣಗಳಲ್ಲಿ 151 ಪ್ರಕರಣಗಳು ಪ್ರಸ್ತುತ ವಿಚಾರಣೆಯಲ್ಲಿವೆ ಎಂದು ಪಿಟಿಐ ಹೇಳಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ,  2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ  ದೇಶಾದ್ಯಂತ ದಿನಕ್ಕೆ ಸರಾಸರಿ 30ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಮುಂದೆ ಓದಿ

ಸಾರ್ವಜನಿಕ ಹೂಡಿಕೆಗಳ ಕಡಿತ, ಪ್ರಮುಖ ಕೈಗಾರಿಕೆಗಳ ಖಾಸಗೀಕರಣ, ಬಾಹ್ಯ ವ್ಯಾಪಾರ, ರಾಜ್ಯಗಳ ಸಬ್ಸಿಡಿಗಳ ಕಡಿತ ಮತ್ತು ಕೃಷಿ ಸಾಲದ ಕಡಿತ ಇವೆಲ್ಲವೂ ರೈತರ ದೀರ್ಘ ಕಾಲದ ಸಂಕಷ್ಟಕ್ಕೆ ಕಾರಣವಾಗಿದೆ. ವರದಿಯ ಪ್ರಕಾರ ಛತ್ರಪತಿ ಸಂಭಾಜಿನಗರ, ಜಲ್ನಾ, ಬೀಡ್, ಹಿಂಗೋಲಿ, ಧಾರಶಿವ್, ಲಾತೂರ್, ನಾಂದೇಡ್ ಮತ್ತು ಪರ್ಭಾನಿ ಜಿಲ್ಲೆಗಳನ್ನು ಒಳಗೊಂಡಿರುವ ಮರಾಠವಾಡದಲ್ಲಿ 2022ರಲ್ಲಿ 1,023 ರೈತರ ಆತ್ಮಹತ್ಯೆಗಳು ವರದಿಯಾಗಿತ್ತು. ಈ ವರ್ಷ ಈ ಜಿಲ್ಲೆಗಳಲ್ಲಿ ಆತ್ಮಹತ್ಯೆಗಳ ಅಂಕಿ-ಅಂಶಗಳಲ್ಲಿ ಹೆಚ್ಚಳ ಕಂಡು ಬಂದಿದೆ.ಮುಂದೆ ಓದಿ

ರೈತರ ಆತ್ಮಹತ್ಯೆಗೆ ಕಾರಣಗಳೇನು?  : ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆ ಏಕೆ ನಡೆಯುತ್ತಿದೆ ಎಂಬುದನ್ನು ನೋಡಿದಾಗ ಸಾಕಷ್ಟು ಕಾರಣಗಳು ನಮ್ಮ ಮುಂದೆ ಕಂಡು ಬರುತ್ತದೆ. ಮಳೆಯ ಕೊರತೆಯಿಂದಾಗಿ ಬೆಳೆಗಳ ನಾಶವಾಗುತ್ತದೆ. ರೈತರು ತಾವು ಹೂಡಿಕೆ ಮಾಡಿದ ಹಣ ವ್ಯರ್ಥವಾಗಿ ಸಾಲದ ಸುಳಿಯಲ್ಲಿ ಸಿಲುಕಿ ನಷ್ಟ ಅನುಭವಿಸುತ್ತಾರೆ. ಪದೇ ಪದೇ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಎಂಬುವುದು ಗಮನಾರ್ಹ. ಅದೇ ರೀತಿ ಪ್ರವಾಹಗಳು ಕೂಡ ಬರಗಾಲದಷ್ಟೇ ಅಪಾಯಕಾರಿ. ರೈತರ ಬೆಳೆಗಳು ಕೊಚ್ಚಿ ಹೋಗುತ್ತವೆ ಮತ್ತು ಆ ಬೆಳೆಗಳಿಂದ ಅವರಿಗೆ ಯಾವುದೇ ಉತ್ಪನ್ನ ಸಿಗುವುದಿಲ್ಲ. ಬೆಳೆ ಬೆಳೆಯಲು ಭಾರೀ ಸಾಲ ಪಡೆದು ನಷ್ಟವುಂಟಾಗಿ ಅದನ್ನು ತೀರಿಸಲು ಹಣವಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಡವಾಳೀಕರಣ ಮತ್ತು ಖಾಸಗೀಕರಣವು ಕೂಡ ಆತ್ಮಹತ್ಯೆಗೆ ಕಾರಣವಾಗಿದ್ದು,  ಹೆಚ್ಚಿನ ಸಾಲಗಳು ಮತ್ತು ಕುಟುಂಬದ ಒತ್ತಡವೂ ರೈತರನ್ನು ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಸಾಮೂಹಿಕ ಪ್ರಯತ್ನದಿಂದ ರೈತರ ಆತ್ಮಹತ್ಯೆ ತಡೆಯಬಹುದು. ಸರಕಾರ ರೈತರಿಗೆ ಆಧುನಿಕ ತಂತ್ರಜ್ಞಾನ ಕಲಿಸಬೇಕು. ಇದಲ್ಲದೆ ಅವರಿಗೆ ಸರಿಯಾದ ನೀರಾವರಿ ಸೌಲಭ್ಯಗಳನ್ನು ನೀಡಬೇಕು. ರೈತರ ನಷ್ಟವನ್ನು ಸರಿದೂಗಿಸುವ ನಿಜವಾದ ಬೆಳೆ ವಿಮಾ ಪಾಲಿಸಿಗಳನ್ನು ಜಾರಿಗೆ ತರಬೇಕಿದೆ.

Advertisement

Source: ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ

ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…

2 hours ago

ರಾಜ್ಯದಲ್ಲಿ ಅರಣ್ಯ ಇಲಾಖೆಯಿಂದ 11.50 ಕೋಟಿ ಸಸಿ ನೆಡುವ ಗುರಿ

ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…

2 hours ago

ರಾಮನ ಆದರ್ಶ ಸರ್ವಕಾಲಿಕ : ರಾಘವೇಶ್ವರ ಶ್ರೀ

ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…

3 hours ago

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

ಕ್ಯಾನ್ಸರ್‌ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ…

4 hours ago

ರಾಜ್ಯದಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಅಗತ್ಯ ಕ್ರಮ

ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ…

4 hours ago

2025ರ ನಾಗರಪಂಚಮಿಯಲ್ಲಿ ಈ ರಾಶಿಗಳಿಗೆ ಅದೃಷ್ಟ! :ನಾಗದೇವರ ಕೃಪೆಗಾಗಿ ಹೀಗೆ ಮಾಡಿ…

ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.…

9 hours ago