ಅಡಿಕೆ ನೆರಳಿನ ನೆಲ ಬೇವು | ಅಡಿಕೆ ತೋಟದಲ್ಲಿ ಬೇರು ಹುಳುಗಳ ನಿಯಂತ್ರಣ ಮಾಡುತ್ತೆ ಈ ಕಿರಾತಕ |

December 9, 2023
1:22 PM

ಕನ್ನಡದಲ್ಲಿ ನೆಲ ಬೇವು ಅಥವಾ ಕಾಲಮೇಘ ಎಂದು ಕರೆಯಲ್ಪಡುವ ಈ ಸಸ್ಯವನ್ನು ಹಿಂದಿಯಲ್ಲಿ ಕಲ್ಮೇಖಿ, ಸಂಸ್ಕೃತದಲ್ಲಿ ಕಲ್ಕಿ, ಬಿಟರ್ ರಾಜ ಮತ್ತು ಇಂಗ್ಲಿಷ್‌ನಲ್ಲಿ ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲಾಟಾ (Andrographis paniculata) ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಭಾರತೀಯ ಭಾಷೆಗಳಲ್ಲಿ ಕಲ್ಮೇಘ್ ಅಥವಾ ಕಲ್ಕಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ, ಜ್ವರ, ಕೆಮ್ಮು, ನೆಗಡಿ ಮತ್ತು ಇತರ ಹಲವಾರು ರೋಗಗಳ ಚಿಕಿತ್ಸೆಗಾಗಿ (Medicine) ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಇದು ಕೇವಲ ಮನುಷ್ಯನ ಆರೋಗ್ಯ ಸಮಸ್ಯೆಗೆ ಮಾತ್ರವಲ್ಲ. ಕೃಷಿಯಲ್ಲಿ ಕೂಡ ಇದರ ಬಲು ಉಪಯೋಗ ಇದೆ ಅನ್ನೋದನ್ನು ಸ್ವತಃ ಪ್ರಯೋಗ ಮಾಡಿ ನೋಡಿದ್ದಾರೆ ಕೃಷಿಕ, ಪರಿಸರ ತಜ್ಞರಾದಂತ ಶಿವಾನಂದ ಕಳವೆ ಅವರು.

Advertisement
Advertisement

ಸುಮಾರು ಹದಿನೆಂಟು ವರ್ಷಗಳ ಹಿಂದಿನ ಘಟನೆ, ನಮ್ಮ ಅಡಿಕೆ ತೋಟದಲ್ಲಿ(areca nut) ಬೇರು ಹುಳುಗಳ(rootworms) ಸಮಸ್ಯೆ ಇತ್ತು. ಬೇವಿನ ಹಿಂಡಿ(neem) ಹಾಕಿ ನಿಯಂತ್ರಣ ಪ್ರಯತ್ನ ನಡೆದಿತ್ತು. ಆದರೂ ಪರಿಹಾರ ಸಿಕ್ಕಿರಲಿಲ್ಲ. ಒಮ್ಮೆ ನೆಲ ಬೇವಿನ ಎಲೆ ತಿಂದು ಘೋರ ಕಹಿ ಅನುಭವಿಸಿದ ನಂತರ ಇದು ತೋಟದಲ್ಲಿ ನೆಟ್ಟರೆ ಹೇಗೆ ? ಅಡಿಕೆ ತೋಟದ ಬೇರು ಹುಳು ನಿಯಂತ್ರಣವಾದೀತೆಂದು ಊಹೆ. ಮನೆಗೆ ತಂದಿದ್ದ ಗಿಡಗಳು ತೋಟದಲ್ಲಿ ನಾಟಿ ಆದವು.

Advertisement

ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ, ವಿಶೇಷವಾಗಿ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಭೂತಾನ್, ಮ್ಯಾನ್ಮಾರ್, ಥೈಲ್ಯಾಂಡ್, ಕಾಂಬೋಡಿಯಾ, ಲಾವೋಸ್, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ್, ಫಿಲಿಪೈನ್ಸ್, ಚೀನಾ, ಜಪಾನ್ ದೇಶಗಳಲ್ಲಿ ಕಂಡುಬರುತ್ತದೆ. ಆಯುರ್ವೇದ ಗ್ರಂಥಗಳ ಪ್ರಕಾರ, ಕಾಲ ಮೇಘವು “ಆಂಡ್ರೋಗ್ರಾಫೋಲೈಡ್” ಎಂಬ ಆಲ್ಕಲಾಯ್ಡ್ ಸಂಯುಕ್ತವನ್ನು ಹೊಂದಿದೆ. ಈ ವಸ್ತುವು ಅದರ ಔಷಧೀಯ ಗುಣಗಳಿಗೆ ಕಾರಣವಾಗಿದೆ. “ಕಾಲ” ಎಂದರೆ ಕಪ್ಪು ಮತ್ತು “ಮೇಘ” ಎಂದರೆ ನೀರು. ಹೀಗಾಗಿ, “ಕಾಲಮೇಘಗಳು” ಅಕ್ಷರಶಃ “ಕಪ್ಪು ನೀರು” ಎಂದು ನಾವು ಹೇಳಬಹುದು.

ಈಗ ನಮ್ಮ ತೋಟದಲ್ಲಿ ಅಂದು ನೆಟ್ಟ ನೆಲ ಬೇವು ನಗುತ್ತಿವೆ, ಇವನ್ನು ವರ್ಷಕ್ಕೆ ಒಮ್ಮೆ ಕಡಿದು ಮರದ ಬುಡಕ್ಕೆ ಹಾಕ್ತಾ ಇರುವುದರಿಂದ ಬೇರು ಹುಳು ಕಡಿಮೆ ಆಗಿವೆ. ತೋಟದ ನೆರಳಿನಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ. ಒಮ್ಮೆ ನೆಟ್ಟರೆ ಪ್ರತಿ ವರ್ಷ ಮಳೆಯಲ್ಲಿ ಚಿಗುರುತ್ತದೆ. ಚಳಿಗಾಲದ ಹೊತ್ತು ಸವರಿ ಮುಚ್ಚಿದರೆ ಕಹಿ ಎಲೆಗಳು ಮಣ್ಣಲ್ಲಿ ಕರಗಿ ಬೇರು ಹುಳುಗಳ ನಿಯಂತ್ರಣಕ್ಕೆ ನೆರವಾಗುತ್ತವೆ , ಹುಳುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ ಮಾಡುವ ತಾಕತ್ತು ಇದರ ಕಹಿತನಕ್ಕೆ ಇದೆ. ಕಳೆದ ಹತ್ತಾರು ವರ್ಷಗಳಿಂದ ಇದನ್ನು ಗಮನಿಸಿ ಹಲವರಿಗೆ ಹೇಳಲಾಗಿದೆ, ಆಸಕ್ತ ಕೆಲವರು ನೆಟ್ಟಿದ್ದಾರೆ.

Advertisement

About eighteen years ago, we had a problem with rootworms in our areca nut.. There was an attempt to control neem by herding. However, there was no solution. After eating a neem leaf and experiencing severe bitterness, how can it be planted in the garden? It is assumed that it is a root worm control in the groundnut garden. The plants brought home were planted in the garden.

ಬರಹ :
ಶಿವಾನಂದ ಕಳವೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಬ್ಬರ್‌ ಕೃಷಿ | ಕೃಷಿಯಲ್ಲಿ ಮಾರ್ಪಾಡು – ಹೆಚ್ಚು ಇಳುವರಿ ಪಡೆಯುತ್ತಿರುವ ಕೃಷಿಕ |
September 26, 2024
10:30 PM
by: ಮಹೇಶ್ ಪುಚ್ಚಪ್ಪಾಡಿ
 ಕ್ಯಾನ್ಸರ್ ನಿಯಂತ್ರಿಸುವಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ | ಬಸವರಾಜ ಬೊಮ್ಮಾಯಿ
September 26, 2024
8:21 PM
by: ದ ರೂರಲ್ ಮಿರರ್.ಕಾಂ
ಸಾಮಾಜಿಕ ಬಹಿಷ್ಕಾರ ಪದ್ದತಿಯನ್ನು ಬೇರು ಸಮೇತ ಕೀಳಬೇಕು | ಶ್ಯಾಂ ಭಟ್
September 26, 2024
8:15 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆ ವಿಸ್ತರಣೆ ಚರ್ಚೆ | ಭಾರತದಲ್ಲಿ ಅಡಿಕೆ ಗಿಡ ನಾಟಿ ನಿಷೇಧ ಹೇಳಿಕೆಗೆ ಮಿಜೋರಾಂನಲ್ಲಿ ವಿರೋಧ |
September 26, 2024
6:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror