ಹಲಸು ಉತ್ಪನ್ನಗಳಿಗೆ ದೇಶದಾದ್ಯಂತ ಬೇಡಿಕೆ ಹೆಚ್ಚಿತ್ತಿದೆ. ಹೀಗಾಗಿ ಕೃಷಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಒಡಿಶಾವು , ತನ್ನ ರಾಜ್ಯದ ಹಲಸು ಉದ್ಯಮವನ್ನು ಹೆಚ್ಚಿಸಲು ಎರಡು ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ.…..ಮುಂದೆ ಓದಿ….
ಈ ಪಾಲುದಾರಿಕೆಯು, ಹಲಸಿನ ಹಣ್ಣಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ರಚಿಸಲು ಅನುವು ಮಾಡಿಕೊಡುವ ಮೂಲಕ ರಾಜ್ಯದ ಹಲಸು ರೈತರನ್ನು ಬೆಂಬಲಿಸುವ ಗುರಿಯನ್ನು ಸರ್ಕಾರ ಹೊಂದಿದೆ. 3.15 ಮಿಲಿಯನ್ ಟನ್‌ಗಳ ವಾರ್ಷಿಕ ಉತ್ಪಾದನೆಯೊಂದಿಗೆ, ಒಡಿಶಾವು ಭಾರತದ ಪ್ರಮುಖ ಹಲಸು ಉತ್ಪಾದಕ ರಾಜ್ಯವಾಗಿ ನಿಂತಿದೆ. ಹೀಗಾಗಿ ಹಲಸು ಒಪ್ಪಂದವು ಸ್ಥಳೀಯ ರೈತರ ಆದಾಯವನ್ನು ಹೆಚ್ಚಿಸಲು ಮಾತ್ರವಲ್ಲದೆ ಭಾರತದೊಳಗೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲಸು ಆಧಾರಿತ ಉತ್ಪನ್ನಗಳ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತದೆ.
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ ಮನದಟ್ಟು ಮಾಡಿ, ಹಲಸಿನ ಉತ್ಪನ್ನಗಳನ್ನು ಸಂಸ್ಕರಿಸಲು ಮತ್ತು ರಫ್ತು ಮಾಡುವ ಕಡೆಗೆ ಗಮಹರಿಸುತ್ತಿದೆ. ಹೀಗಾಗಿ ಈ ಒಪ್ಪಂದವು ಉತ್ತಮ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ, ಕೌಶಲ್ಯ ಅಭಿವೃದ್ಧಿಯನ್ನು ಕೂಡಾ ಉತ್ತೇಜಿಸುತ್ತದೆ , ಒಡಿಶಾದ ಕೃಷಿ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.