ರೈಲಿನ ಮೂಲಕ ಅಕ್ರಮವಾಗಿ ಬರ್ಮಾ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ರೈಲ್ವೇ ಪೊಲೀಸರು ಪತ್ತೆ ಮಾಡಿದ್ದಾರೆ. ಸದ್ಯ 24 ಚೀಲ ಅಡಿಕೆಯನ್ನು ವಶಪಡಿಸಿಕೊಂಡಿದ್ದು, ಅಪಾರ ಪ್ರಮಾಣದಲ್ಲಿ ಬರ್ಮಾ ಅಡಿಕೆ ದೇಶದ ವಿವಿಧ ಕಡೆಗಳಿಗೆ ಸಾಗಾಟ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರೈಲ್ವೇ ಪೊಲೀಸರು ಅವಧ್ ಅಸ್ಸಾಂ ಎಕ್ಸ್‌ಪ್ರೆಸ್ ಮತ್ತು ತಿನ್ಸುಕಿಯಾ-ಲುಮ್ಡಿಂಗ್ ಪ್ಯಾಸೆಂಜರ್ ರೈಲುಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ರೈಲುಗಳ ಸಾಮಾನ್ಯ ವರ್ಗದ ಬೋಗಿಗಳಲ್ಲಿ ಬರ್ಮಾ ಅಡಿಕೆ ಪತ್ತೆಯಾಗಿವೆ.
ಅಸ್ಸಾಂ ಮತ್ತು ಈಶಾನ್ಯ ಭಾರತದ ಇತರ ರಾಜ್ಯಗಳಲ್ಲಿ ಅಕ್ರಮವಾಗಿ ಬರ್ಮಾದ ಅಡಿಕೆ ವ್ಯಾಪಾರವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಅಡಿಕೆಗಳನ್ನು ನೆರೆಯ ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ.ಈ ಅಡಿಕೆಯನ್ನು ಈಶಾನ್ಯ ಭಾರತದ ಮೂಲಕ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel