Advertisement
MIRROR FOCUS

#RuralRoad | ಕೊಲ್ಲಮೊಗ್ರದಲ್ಲಿ 5.5 ಕೋಟಿ ರೂಪಾಯಿಯ ರಸ್ತೆ ಕಾಮಗಾರಿ | ಗ್ರಾಮೀಣ ರಸ್ತೆಯ ಗುಣಮಟ್ಟವಿಲ್ಲದ ಕಾಮಗಾರಿ | ಸಾರ್ವಜನಿಕರ ಅಸಮಾಧಾನ-ಅಧಿಕಾರಿಗಳ ಭೇಟಿ |

Share

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನಗಳು ಬರುವುದೇ ಅಪರೂಪ. ಬಂದ ಅನುದಾನಗಳು ಸರಿಯಾಗಿ ಬಳಕೆಯಾಗಬೇಕು, ಗುಣಮಟ್ಟದಿಂದ ಕೂಡಿರಬೇಕು ಎನ್ನುವುದು ಗ್ರಾಮೀಣ ಜನರೆಲ್ಲರ ಒತ್ತಾಯ. ಆದರೆ ಅನೇಕರು ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟವಿಲ್ಲದ ಕಾಮಗಾರಿ ಮಾಡಿದರೆ ಯಾರಿಗೂ ತಿಳಿಯದು ಅಂದುಕೊಳ್ಳುತ್ತಾರೆ. ಅಂತಹವರಿಗೆ ಕೊಲ್ಲಮೊಗ್ರದ ಈ ಘಟನೆ ಎಚ್ಚರಿಕೆಯಾಗಬೇಕು. 

ಕಾಂಕ್ರೀಟ್‌ ರಸ್ತೆಯ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಆಕ್ಷೇಪ

ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಕಟ್ಟ-ಕರಂಗಲ್ಲು-ಕೊಲ್ಲಮೊಗ್ರ ಸಂಪರ್ಕ ರಸ್ತೆಗೆ ಸುಮಾರು 5.5ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ “ನಮ್ಮ ಗ್ರಾಮ-ನಮ್ಮ ರಸ್ತೆ”ಯ ಮೂಲಕ ಅನುದಾನ ಬಿಡುಗಡೆಗೊಂಡಿತ್ತು. ಈ ಕಾಮಗಾರಿ ಕಳೆದ ಎರಡು ತಿಂಗಳ ಹಿಂದೆ ಪೂರ್ತಿಗೊಂಡು ಸಂಚಾರಕ್ಕೆ ಯೋಗ್ಯವಾಗಿತ್ತು. ಆದರೆ ಕಾಮಗಾರಿ ನಡೆಯುವ ಸಮಯದಲ್ಲಿ ಊರಿನ ಜನರು ಪದೇ ಪದೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾಕಷ್ಟು ಬಾರಿ ದೂರು ಇಂಜಿನಿಯರ್ ಅವರಿಗೆ ನೀಡಿದ್ದರು. ಹಾಗಿದ್ದರೂ ಕ್ರಮಕೈಗೊಂಡಿಲ್ಲ ಎಂಬ ಆರೋಪ ಬಂದಿತ್ತು.ಈ ಕಾಮಗಾರಿ ಕುಂದಾಪುರದ ಮೂಲದ ಗುತ್ತಿಗೆದಾರರು ಪಡೆದುಕೊಂಡಿದ್ದರು.

ಕಾಂಕ್ರೀಟ್‌ ರಸ್ತೆ ಬಿರುಕು ಬಿಟ್ಟಿರುವುದು

ಮಳೆ ಪ್ರಾರಂಭವಾಗಿ ಮೊದಲ ವಾರದಲ್ಲಿ ಕಾಮಗಾರಿ ಹಲವು ಕಡೆಗಳಲ್ಲಿ ಗುಂಡಿ‌ ಹಾಗೂ ಕಾಂಕ್ರೀಟು ಸಂಪೂರ್ಣವಾಗಿ ಬಿರುಕು ಕಾಣಿಸಿಕೊಂಡು ಬಹುಕಾಲದ ಬೇಡಿಕೆಯ ರಸ್ತೆ ಜನರಿಗೆ ನಿರಾಸೆ ಮೂಡಿಸಿ ಆಕ್ರೋಶಕ್ಕೆ ಕಾರಣವಾಗಿತ್ತು.ಮೊದಲ ಮಳೆಗೆ ತಡೆಗೋಡೆ ಒಂದು ಕುಸಿದು ಹೋಗಿತ್ತು.ಈ ಸಂಬಂಧ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಸ್ಥಳೀಯರು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದ ತಕ್ಷಣ ಸ್ಪಂದಿಸಿದ ಅಧಿಕಾರಿಗಳು  ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದಾಗ ಕಾಮಗಾರಿಯ ಗುಣಮಟ್ಟ ಕೆಳದರ್ಜೆಯಲ್ಲಿರುವುದು ಕಂಡುಬಂದಿದೆ.ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಊರಿನವರು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳಿಂದ ಪರಿಶೀಲನೆ

ಇಂಜಿನಿಯರ್ ಅವರಿಗೆ ಕಳಪೆ ಕಾಮಗಾರಿ ಬಗ್ಗೆ ನಿರಂತರ ದೂರು ನೀಡುತ್ತಿದ್ದ ಉದಯ ಶಿವಾಲ ಅವರ  ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿರುವ ಬಗ್ಗೆ ಉದಯ ಶಿವಾಲ ಪ್ರಶ್ನಿಸಿದರು.ಸಮಸ್ಯೆಗಳನ್ನು ಪ್ರಶ್ನಿಸುವವರಿಂದ ತಪ್ಪಿಸಿಕೊಳ್ಳುವ ಬಗ್ಗೆ ಸಾರ್ವಜನಿಕರು ಹೇಳಿದರು.

ನಾವು ಕಳಪೆ ಕಾಮಗಾರಿ ಎಂದು ತಿಳಿಸಿದ ತಕ್ಷಣ ಇಂಜಿನಿಯರ್ ಜವಾಬ್ದಾರಿಯಿಂದ‌ ಕೆಲಸ ಮಾಡಿದರೆ  ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಕೆಲಸ‌ ಇರಲಿಲ್ಲ.ಮೇಲಾಧಿಕಾರಿಗಳು ಸ್ಪಂದಿಸುವ ರೀತಿ ಇಂಜಿನಿಯರ್ ಸ್ಪಂದಿಸಿದರೆ  ರಸ್ತೆಯೂ ಕಳಪೆಯಾಗುತ್ತಿರಲಿಲ್ಲ
ಉದಯ ಶಿವಾಲ , ಗ್ರಾಮಸ್ಥ
Advertisement

ತಕ್ಷಣವೇ ಕಳಪೆಯಾದ ಕಾಮಗಾರಿಯನ್ನು ಸಂಪೂರ್ಣವಾಗಿ‌ ತೆಗೆದು ಹೊಸ ಕಾಮಗಾರಿ ನಡೆಸಿಕೊಡುವಂತೆ ಎಕ್ಸ್ ಕ್ಯೂಟಿವ್ ಇಂಜಿನಿಯರ್ ಸೂಚಿಸಿದರು. ಸಾರ್ವಜನಿಕರೊಂದಿಗೆ ನಾನು ಖಂಡಿತ ಇರುತ್ತೇನೆ ನೀವು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ನಾವು ಕಾಮಗಾರಿ ನಡೆಯುವ ವೇಳೆ ಗುತ್ತಿಗೆದಾರಿಗೆ ನಮ್ಮಿಂದ ಆದಷ್ಟು ಸಾಹಯ ಮಾಡಿ ಮನವಿಯತೆಯನ್ನು ತೋರಿಸಿದ್ದೇವೆ.ಆದರೂ ಇಂತಹ ಕಳಪೆ ರಸ್ತೆ ನಿರ್ಮಿಸಿಕೊಟ್ಟು ಹೋದ ಗುತ್ತಿಗೆದಾರರು ಆಮೇಲೆ ಕರೆಯನ್ನು ಸ್ವೀಕರಿಸಲಿಲ್ಲ
ನವೀನ್ ಕೊಪ್ಪಡ್ಕ, ಗ್ರಾಮಸ್ಥ

ಕಾಮಗಾರಿ ಪೂರ್ತಿಗೊಂಡ ಬಳಿಕ ಇನ್ನೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಕಳಪೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು  ಎಂದು ಹಿರಿಯ ಇಂಜಿನಿಯರ್‌ ವೇಣುಗೋಪಾಲ್‌ ಭರವಸೆ ನೀಡಿದರು.

ಕಾಮಗಾರಿ ಪರಿಶೀಲನೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

16 hours ago

ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ

ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ…

22 hours ago

ಚಳಿಗಾಲದಲ್ಲಿ ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ಬೇಡ- ಎಚ್ಚರಿಕೆ ಇರಲಿ

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ…

22 hours ago

ಮಹಿಳೆಯರಿಗಾಗಿ ಉಚಿತ ಆರಿ ವರ್ಕ್ಸ್ ತರಬೇತಿ

ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್…

22 hours ago

ಮೊಟ್ಟೆಯಲ್ಲಿ ಅಪಾಯಕಾರಿ ಕ್ಯಾನ್ಸರ್ ಅಂಶ ಪತ್ತೆ ಎಂಬ ಊಹಪೋಹಗಳಿಗೆ ಬ್ರೇಕ್

ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ವಾಗಿದ್ದು, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡುತ್ತಿದ್ದರು.…

22 hours ago

ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ಕಡಿಮೆ ಬಡ್ಡಿಯಲಿ ಸಾಲ ಪಡೆಯಿರಿ

ಹಣದ ಅವಶ್ಯಕತೆಯಿರುವ ಎಲ್ಲರೂ ಬ್ಯಾಂಕ್ ಗಳಲ್ಲಿ ಸಾಲಕ್ಕೆ ಮೊರೆ ಹೋಗಿ ಅಧಿಕ ಬಡ್ಡಿಯನ್ನು…

22 hours ago