ಅರಣ್ಯ ಭೂಮಿ ಒತ್ತುವರಿ ಮಾಡಿದರೆ ತೆರವು ಮಾಡಬೇಕಾಗುತ್ತದೆ. ಬೇಲಿ ಹಾಕುವುದರಿಂದ ಅರಣ್ಯ ಭೂಮಿ ಸಂರಕ್ಷಿತವಾಗಿರುತ್ತದೆ. ಮುಂದಿನ ಪೀಳಿಗೆಗಾಗಿ, ಪ್ರಾಣಿ ಪಕ್ಷಿಗಳ ಸಂಕುಲಗಳನ್ನು ಉಳಿಸಿ ಬೆಳೆಸಲು ಅರಣ್ಯ ಪ್ರದೇಶದ ಬೆಳವಣಿಗೆ ಅನಿವಾರ್ಯವಾಗಿದೆ. ಧರ್ಮೋ ರಕ್ಷತಿ ರಕ್ಷಿತಾಃ ಎಂಬಂತೆ ಮರ ರಕ್ಷತಿ ರಕ್ಷಿತಾಃ ಎಂಬ ಕೆಲಸ ಆಗಬೇಕಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ಬೆಲಸಿಂದ ಪ್ರಕೃತಿ ವನವು ವಿಶಾಲವಾದ ಪಾರಗೋಲ, ನೇಚರ್ ವಾಕ್, ಸೈಕ್ಲಿಂಗ್, ಕೆರೆಯಲ್ಲಿ ದೋಣಿ ವಿಹಾರ, ಪಕ್ಷಿಗಳ ವೀಕ್ಷಣೆ, ಹಸಿರು ಗ್ರಂಥಾಲಯ, ಅರಣ್ಯ ವೀಕ್ಷಣೆಗೆ ವಾಚ್ ಟವರ್, ಬಯಲು ರಂಗಮಂದಿರ ಹಾಗೂ ಮಕ್ಕಳಿಗಾಗಿ ಸುಸಜ್ಜಿತ ಆಟದ ವ್ಯವಸ್ಥೆ ಒಳಗೊಂಡಿದೆ ಎಂದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

