ಭೂತಾನ್ 2022 ರಲ್ಲಿ ಸುಮಾರು 11,106 ಮೆಟ್ರಿಕ್ ಟನ್ ಅಡಿಕೆ ಉತ್ಪಾದಿಸಿತ್ತು. ಈ ಬಾರಿ ಶೇ.52 ರಷ್ಟು ಕಡಿಮೆ ಇಳುವರಿಯಾಗಿದೆ. ಭಾರತಕ್ಕೆ ಭೂತಾನ್ ಅಡಿಕೆ ಈಗ ಸಮಸ್ಯೆಯಾಗುತ್ತಿಲ್ಲ. ಆದರೆ ಮ್ಯಾನ್ಮಾರ್ ಮೂಲಕ ಭಾರತದೊಳಕ್ಕೆ ಬರುವ ಅಡಿಕೆ ಈಗ ಸಮಸ್ಯೆಯಾಗುತ್ತಿದೆ. ಇದೀಗ ಮತ್ತೆ 442 ಚೀಲ ಅಡಿಕೆ ಕಳ್ಳಸಾಗಾಣಿಕೆಯನ್ನು ಅಸ್ಸಾಂ ರೈಪಲ್ಸ್ ಪಡೆ ವಶಕ್ಕೆ ಪಡೆದುಕೊಂಡಿದೆ.
ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 442 ಚೀಲ ಅಡಿಕೆ ಸಹಿತ ಮೂವರನ್ನು ಗಡಿ ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿದೆ.ಮಣಿಪುರದ ಕಾಮ್‌ಜಾಂಗ್ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಗಡಿಯಾಚೆಗಿನ ಅಡಿಕೆ ಕಳ್ಳಸಾಗಣೆಯನ್ನು ತಡೆದಿದೆ. 442 ಚೀಲ ಅಡಿಕೆಗಳನ್ನು ವಶಪಡಿಸಿಕೊಂಡಿದೆ. ಗಡಿ ಭದ್ರತಾ ಪಡೆಯು ಸೆ.29 ರಿಂದ ಕಾರ್ಯಾಚರಣೆ ಆರಂಭಿಸಿತ್ತು.ಒಟ್ಟು ಕಾರ್ಯಾಚರಣೆಯಲ್ಲಿ 442 ಚೀಲ ಅಡಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ತಲಾ 100 ಕೆಜಿಯ 50 ಚೀಲಗಳು ಮತ್ತು ತಲಾ 80 ಕೆಜಿಯಂತೆ 392 ಚೀಲಗಳು ಸೇರಿವೆ ಎಂದು ಅಸ್ಸಾಂ ಗಡಿಭದ್ರತಾ ಪಡೆ ಮಾಹಿತಿ ನೀಡಿದೆ.
ಭೂತಾನ್‌ನಲ್ಲಿ ಕಡಿಮೆಯಾದ ಅಡಿಕೆ ಇಳುವರಿ : ಭೂತಾನ್ 2022 ರಲ್ಲಿ ಸುಮಾರು 11,106 ಮೆಟ್ರಿಕ್ ಟನ್ ಅಡಿಕೆಗಳನ್ನು ಉತ್ಪಾದಿಸಿತ್ತು. ಹಿಂದಿನ ವರ್ಷಕ್ಕಿಂತ 52 ಪ್ರತಿಶತ ಕಡಿಮೆಯಾಗಿದೆ. ಭೂತಾನ್ ತನ್ನ ದೇಶದಲ್ಲಿ ಅಡಿಕೆ ಹೆಚ್ಚು ಉತ್ಪಾದಿಸಿದ ಸಂದರ್ಭ ಭಾರತಕ್ಕೆ ಅಡಿಕೆಯನ್ನು ರಫ್ತು ಮಾಡುತ್ತದೆ ಮತ್ತು ಕಡಿಮೆ ಋತುವಿನಲ್ಲಿ ಭಾರತದಿಂದ ಆಮದು ಮಾಡಿಕೊಳ್ಳುತ್ತದೆ.2022 ರಲ್ಲಿ ಉತ್ಪಾದನೆಯು 10,271 ಮೆಟ್ರಿಕ್ ಟನ್ ರಷ್ಟು ಕಡಿಮೆಯಾಗಿದೆ ಎಂದು ಭೂತಾನ್ ಕೃಷಿ ಮಾರುಕಟ್ಟೆ ಮತ್ತು ಸಹಕಾರಿ ಇಲಾಖೆಯ ದಾಖಲೆಗಳು ಹೇಳಿವೆ.