ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ತಾಳೆ ಬೆಳೆ ಬೇಸಾಯ ಕುರಿತು ತರಬೇತಿ ಮತ್ತು ಅರಿವು ಕಾರ್ಯಕ್ರಮ ಬಳ್ಳಾರಿಯ ಯರ್ರಗುಡಿ ಗ್ರಾಮದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಂಕರಪ್ಪ, ತಾಳೆ ಬೆಳೆ ಬೆಳೆಯುವುದಕ್ಕೆ ಹೆಚ್ಚು ರಸಗೊಬ್ಬರದ ಅಗತ್ಯವಿರುವುದಿಲ್ಲ, ಕೇಂದ್ರ ಸರ್ಕಾರದಿಂದ ಶೇಕಡ 75, ರಾಜ್ಯ ಸರ್ಕಾರದಿಂದ ಶೇಕಡ 25 ರಷ್ಟು ಸಹಾಯಧನ ದೊರೆಯಲಿದ್ದು ರೈತರು ಆರ್ಥಿಕ ಲಾಭ ಪಡೆಯಬಹುದಾಗಿದೆ ಎಂದರು.
ಹಗರಿ ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ. ಪಾಲಯ್ಯ, ತಾಳೆ ಬೆಳೆಗೆ ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೂ ಯಾವುದೇ ಕೀಟಭಾದೆ ಕಂಡು ಬಂದಿಲ್ಲ. ಹೆಚ್ಚು ಪ್ರಮಾಣದಲ್ಲಿ ಬೆಳೆದಲ್ಲಿ ಎಲೆ ಚುಕ್ಕೆ ರೋಗ ಬರುವ ಸಾಧ್ಯತೆಯಿದ್ದು, ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್ ಸಂಪಂಡಿ, ತಾಳೆ ಬೆಳೆಯೊಂದಿಗೆ ಅಂತರಬೆಳೆ ಬೇಸಾಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯಧನ ನೀಡಲು ಮುಂದಾಗಿದ್ದು ರೈತರಿಗೆ ನೆರವಾಗಲಿದೆ ಎಂದರು.
ಈ ವೇಳೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ, ಹಿರಿಯರ ನಿರ್ದೇಶಕ ಶಂಕರಪ್ಪ, ಹಗರಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ಡಾ. ಪಾಲಯ್ಯ ಹಾಗೂ ಪ್ರಗತಿಪರ ರೈತರು ಭಾಗಿಯಾಗಿದ್ದರು.


