ಖಾದ್ಯ ತೈಲಗಳಲ್ಲಿ ಭಾರತವು ಸ್ವಾವಲಂಬನೆಯಾಗಬೇಕು ಎನ್ನುವ ಗುರಿಯೊಂದಿಗೆ ಈಗ ತಾಳೆ ಕೃಷಿಯನ್ನು ಉತ್ತೇಜಿಸಲಾಗುತ್ತಿದೆ. ಮೆಗಾ ಆಯಿಲ್ ಪಾಮ್ ಪ್ಲಾಂಟೇಶನ್ ಡ್ರೈವ್ 2024 ಎನ್ನುವ ಅಭಿಯಾನದಲ್ಲಿ ಕೆಲಸ ನಡೆಯುತ್ತಿದೆ. ದೇಶದ ವಿವಿಧ ಕಡೆಗಳಲ್ಲಿ ತಾಳೆ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ಈ ಬಾರಿ 12,000 ಹೆಕ್ಟೇರ್‌ಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಎಣ್ಣೆ ತಾಳೆ ಸಸಿಗಳನ್ನು ನೆಡಲಾಗಿದೆ. ಸುಮಾರು 10000 ಕೃಷಿಕರು ತಾಳೆ ಕೃಷಿಯಲ್ಲಿ ಹೊಸದಾಗಿ ತೊಡಗಿಸಿಕೊಂಡಿದ್ದಾರೆ.
ಖಾದ್ಯ ತೈಲದ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನವು 15 ರಾಜ್ಯಗಳಾದ್ಯಂತ 10,000 ಕ್ಕೂ ಹೆಚ್ಚು ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡಿದೆ. ಇದು ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ತೈಲ ತಾಳೆ ಸಂಸ್ಕರಣಾ ಕಂಪನಿಗಳ ಸಾಮೂಹಿಕ ಪ್ರಯತ್ನಗಳ ಮೂಲಕ ಕೆಲಸ ನಡೆಯುತ್ತಿದೆ.
2024 ಜುಲೈ 15 ರಂದು ಪ್ರಾರಂಭವಾದ ಈ ಡ್ರೈವ್ ಆಯಿಲ್ ಪಾಮ್ ಕೃಷಿ ಅಭಿಯಾನವು ದೇಶದಲ್ಲಿ ಕಚ್ಚಾ ಪಾಮ್ ಆಯಿಲ್ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆಂಧ್ರಪ್ರದೇಶ, ಛತ್ತೀಸ್‌ಗಢ, ಗೋವಾ, ಗುಜರಾತ್, ಕರ್ನಾಟಕ, ಕೇರಳ, ಒಡಿಶಾ, ತಮಿಳುನಾಡು, ತೆಲಂಗಾಣ ಮತ್ತು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಸೇರಿದಂತೆ ರಾಜ್ಯಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ.
ಪತಂಜಲಿಯಂತಹ ಪ್ರಮುಖ ಕಂಪನಿಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಇದರ ಜೊತೆಗೆ ಗೋದ್ರೇಜ್, 3F ಆಯಿಲ್ ಮೊದಲಾದ ಕಂಪನಿಗಳ ಸಹಯೋಗವೂ ಇದೆ. ಜಾಗೃತಿ ಕಾರ್ಯಾಗಾರಗಳು, ಬೆಳೆ ಅಭಿಯಾನಗಳು ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಕೂಡಾ ಈ ಕಂಪನಿಗಳ ಸಹಕಾರ ನೀಡಿದೆ, ತಾಳೆ ಕೃಷಿಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಿವೆ.
ಖಾದ್ಯ ತೈಲಗಳ ಬೆಳೆಯನ್ನು ಬೆಳೆಯುವುದರಿಂದ ದೇಶಕ್ಕೂ ಪ್ರಯೋಜನವಾಗಿದೆ. ಖಾದ್ಯ ತೈಲ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶ. ಇದರ ಜೊತೆಗೆ ರೈತರ ಆದಾಯವನ್ನೂ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಾಳೆ ಕೃಷಿ ಆರಂಭವಾಗಿದೆ.
In a major step towards self-reliance in edible oils, more than 17 lakh oil palm saplings have been planted across 12,000 hectares under the Mega Oil Palm Plantation Drive 2024. Conducted under the National Mission on Edible Oil-Oil Palm (NMEO-OP), the initiative has directly benefited over 10,000 farmers across 15 states, demonstrating the collective efforts of the Government of India, state governments, and oil palm processing companies.