ಟ್ಯಾಂಕರ್ ಮೂಲಕ ಅಡಿಕೆ ಸಾಗಾಟ…!‌ | ಅಸ್ಸಾಂ ಗಡಿಯಲ್ಲಿ ಟ್ಯಾಂಕರ್‌ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಪತ್ತೆ…..! |

Advertisement
Advertisement

ಅಡಿಕೆ ಕಳ್ಳಸಾಗಾಣಿಕೆಗೆಯ ಜಾಲವನ್ನು ಅಸ್ಸಾಂ ಪೊಲೀಸರು ಪತ್ತೆ ಮಾಡಿದ್ದಾರೆ. ಮ್ಯಾನ್ಮಾರ್‌ನಿಂದ ಮಿಜೋರಾಂಗೆ ಟ್ಯಾಂಕರ್‌ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಇದೀಗ ಈ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.

Advertisement

ಅಸ್ಸಾಂ-ಮಿಜೋರಾಂ ಗಡಿಯಲ್ಲಿನ ಕಚಾರ್ ಜಿಲ್ಲೆಯಿಂದ ಎರಡು ತೈಲ ಟ್ಯಾಂಕರ್‌ಗಳನ್ನು ಬುಧವಾರ ವಶಪಡಿಸಿಕೊಳ್ಳಲಾಗಿದೆ.  ಟ್ಯಾಂಕರ್‌ಗಳ ಇಬ್ಬರು ಚಾಲಕರು  ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮಿಜೋರಾಂಗೆ ಇಂಧನವನ್ನು ಸಾಗಿಸುವ ತೈಲ ಟ್ಯಾಂಕರ್‌ಗಳು ಅಸ್ಸಾಂಗೆ ಹಿಂದಿರುಗುವ ವೇಳೆ  ಮ್ಯಾನ್ಮಾರ್ ಮೂಲದ ಅಡಿಕೆಯನ್ನು ಕಳ್ಳಸಾಗಣೆ ಮಾಡುತ್ತಿದ್ದವು ಎಂದು ಅಸ್ಸಾಂ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

ಸಾಮಾನ್ಯವಾಗಿ ಮ್ಯಾನ್ಮಾರ್‌ನಿಂದ ಮಿಜೋರಾಂಗೆ ಲಾರಿಗಳ ಮೂಲಕ  ಅಡಿಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಇದನ್ನು ನಿರಂತರವಾಗಿ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗುತ್ತಿತ್ತು. ಈಗ ಪೊಲೀಸ್ ಕಾವಲು ಹೆಚ್ಚಿದ್ದರಿಂದ ಕಳ್ಳಸಾಗಾಣಿಕೆದಾರರು ತಮ್ಮ ಕಾರ್ಯತಂತ್ರವನ್ನು ಬದಲಿಸಿ ತೈಲ ಟ್ಯಾಂಕರ್‌ಗಳನ್ನು ಬಳಸುತ್ತಿದ್ದಾರೆ. ಕಳೆದ ಕೆಲವು ಸಮಯಗಳಿಂದ ಈ ಜಾಲ ಸಕ್ರಿಯವಾಗಿತ್ತು. ಇದೀಗ ಎರಡು ಟ್ಯಾಂಕರ್‌ ಮೂಲಕ ಕಳ್ಳಸಾಗಾಣಿಕೆ ಪತ್ತೆಯಾಗಿದೆ. ಎರಡು ಟ್ಯಾಂಕರ್‌ಗಳಿಂದ ಸುಮಾರು 170 ಚೀಲ ಅಡಿಕೆಯನ್ನು ಸುಮಾರು 10 ಟನ್ ಬರ್ಮಾ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.

Advertisement
Advertisement

ಈ ಹಿಂದೆ ಟ್ಯಾಂಕರ್‌ಗಳಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡಲಾಗುತ್ತಿತ್ತು. ತೈಲ ಟ್ಯಾಂಕರ್‌ಗಳಲ್ಲಿ ಅಡಿಕೆ ಕಳ್ಳಸಾಗಣೆ ಪತ್ತೆಯಾಗಿರುವುದು ಇದೇ ಮೊದಲು. ಇದೀಗ ಅಡಿಕೆ ಧಾರಣೆ ಏರಿಕೆಯಾಗಿರುವುದರಿಂದ ತೈಲ ಸಾಗಾಟದ ಟ್ಯಾಂಕರ್‌ಗಳಿಗೆ ಹೆಚ್ಚಿನ ದರ ನೀಡುವ ಆಮಿಷವೊಡ್ಡಿ ಟ್ಯಾಂಕರ್‌ಗಳಲ್ಲಿ ಅಡಿಕೆ ಸಾಗಾಣಿಗೆ ಮಾಡಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಟ್ಯಾಂಕರ್ ಮೂಲಕ ಅಡಿಕೆ ಸಾಗಾಟ…!‌ | ಅಸ್ಸಾಂ ಗಡಿಯಲ್ಲಿ ಟ್ಯಾಂಕರ್‌ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಪತ್ತೆ…..! |"

Leave a comment

Your email address will not be published.


*