ಪ್ರಯಾಣಿಕರು, ಆಟೋ ಚಾಲಕರಿಂದ ಸುಲಿಗೆ ಮಾಡುತಿದ್ದ ಓಲಾ, ಊಬರ್ ಗೆ ಸರಕಾರ ಸ್ವಲ್ಪ ಬಿಸಿ ಮುಟ್ಟಿಸಿದೆ. ಓಲಾ, ಊಬರ್ ಆಟೋ ಓಡಾಟ ಬಂದ್ ಇರಲಿದೆ. ಓಲಾ, ಊಬರ್ ಆಧಾರಿತ ಆಟೋಗಳು ರಸ್ತೆಗಿಳಿದರೆ ಭಾರೀ ಮೊತ್ತದ ದಂಡ ಬೀಳಲಿದೆ. ಆದರೆ ದಂಡದ ಹೊರೆ ಆಪ್ ಕಂಪನಿಗಳ ಮೇಲಿರಲಿದೆ.
ಆಪ್ ಆಧಾರಿತ ಆಟೋಗಳು ಕಂಡರೆ ಕಂಪನಿಗೆ 5 ಸಾವಿರ ದಂಡ ಬೀಳಲಿದೆ. ಆಟೋ ಚಾಲಕರ ಮೇಲೆ ಯಾವುದೇ ಕಾರಣಕ್ಕೂ ದಂಡ ವಿಧಿಸಲ್ಲ. ಇದಕ್ಕಂತನೇ ಸಹಾಯವಾಣಿ ಕೂಡ ತೆರೆಯಲಾಗಿದೆ. 2021ರಲ್ಲೇ ಲೈಸನ್ಸ್ ರದ್ದಾಗಿದ್ದರೂ ಓಲಾ, ಊಬರ್ ರೂಲ್ಸ್ ಬ್ರೇಕ್ ಮಾಡಿರುವುದು ಸಾರಿಗೆ ಇಲಾಖೆ ಕಣ್ಣು ಕೆಂಪಾಗಿಸಿದೆ.
ಕೊನೆಗೂ ಆಟೋಗಳಿಗೆ ದರ ನಿಗದಿ ಮಾಡಿದ್ದು, 2 ಕಿ.ಮೀ 30 ರೂ. ದರ ನಿಗದಿ ಮಾಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಕ್ರಮ ಅಂತ ಸಾರಿಗೆ ಇಲಾಖೆ ಎಚ್ಚರಿಸಿದೆ. ಅಲ್ಲದೆ ಜಿಎಸ್ಟಿ ದರ ಕೂಡ ಸೇರಲಿದೆ.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…