ವೈಗೈ ತೋಲ್ಲಿಯಾಲ್ ಪನ್ಪಟ್ಟು ಕಳಗಂ ತಂಡದವರು ಕಳೆದ ಕಳೆದ ವಾರ ಪರಿಶೋಧನೆ ನಡೆಸುತ್ತಿದ್ದಾಗ ಕುಂಬಂ ಪ್ರದೇಶದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ 2,500 ವರ್ಷಗಳಷ್ಟು ಹಳೆಯದಾದ ಅವಶೇಷವೊಂದು ಪತ್ತೆಯಾಗಿದೆ.
ಪರಿಶೋಧನೆಯ ನೇತೃತ್ವ ವಹಿಸಿದ್ದ ಪಾವೆಲ್ ಭಾರತಿ ಅವರು ಪ್ರಕಾರ, ಕಳೆದ ವಾರದ ಆರಂಭದಲ್ಲಿ ನಡೆಸಿದ ಪರಿಶೋಧನೆ ಸಮಯದಲ್ಲಿ ಕುಂಬಮ್‌ನ ಯೆಕಲೈ ಊತು ಪ್ರದೇಶದಲ್ಲಿ ಹುಣಸೆ ತೋಡಿನಿಂದ ಮೂರು ವೃತ್ತಾಕಾರದ ರಚನೆಗಳು ಕಂಡುಬಂದಿದೆ. ಮೂರು ಅವಶೇಷಗಳಲ್ಲಿ, ಎರಡು ಹಾಸಿಗೊಳಗಾಗಿದ್ದರೆ, ಒಂದರಲ್ಲಿ 3.5 ಅಡಿ ಎತ್ತರದ ಮನ್ಹಿರ್ ಅಂದರೆ ನಿಂತಿರುವ ಕಲ್ಲು ಇತ್ತು. ಸಿಕ್ಕಿರುವ ಕಲ್ಲುಗಳನ್ನು ಪರಿಗಣಿಸಿ ಇದು 2500 ರಿಂದ 3,000 ವರ್ಷಗಳಷ್ಟು ಹಳೆಯದಾಗಿದೆ ಎಂದು ತಿಳಿದುಬಂದಿದೆ. ಮಾತ್ರವಲ್ಲ ಈ ಜಾಗದಲ್ಲಿ ಪೊಗಲ್ ಅನ್ನು ಸಹ ಗ್ರಾಮಸ್ಥರು ಆಚರಿಸುತ್ತಾರೆ ಎಂದು ಹೇಳಿದರು.
ಈ ಮೂರು ಕಲ್ಲುಗಳು ಒಂದೇ ಜಾಗದಲ್ಲಿ ಸಿಗುವುದು ಅಪರೂಪವಾದ್ದರಿಂದ ಕಲ್ಲುಗಳು ಮಹತ್ವವನ್ನು ಪಡೆದುಕೊಂಡಿದೆ. ಇದಲ್ಲದೆ, ಇದು ಪ್ರದೇಶದಲ್ಲಿ ಪ್ರಾಚೀನ ಮಾನವ ವಸಾಹತುಗಳು ಅಸ್ತಿತ್ವವನ್ನು ಸೂಚಿಸುತ್ತದೆ. ವಿಶೇಷವಾಗಿ ಇಲ್ಲಿ ಕಂಡುಬಂದಿರು ಅವಶೇಷಗಳು ವರ್ಷಗಳ ಹಿಂದೆ ಆಸ್ತಿತ್ವದಲ್ಲಿದ್ದ ಕೇರಳದ ತಪ್ಪಲಿನ ಹಾದಿಯ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…