4 ದಶಕಗಳ ಹಿಂದೆ ಕಳುವಾಗಿದ್ದ ಭಾರತದ ಪ್ರಾಚೀನ ಶಿಲ್ಪ ಬೆಲ್ಜಿಯಂನಲ್ಲಿ ಪತ್ತೆ

March 23, 2022
10:44 PM

ಆಂಧ್ರಪ್ರದೇಶದ ವಸ್ತು ಸಂಗ್ರಹಾಲಯದಿಂದ ಕಳುವಾಗಿದ್ದ ಪ್ರಾಚೀನ ಶಿಲ್ಪವೊಂದು ನಾಲ್ಕು ದಶಕಗಳ ಬಳಿಕ ಮರಳಿ ಸ್ವದೇಶಕ್ಕೆ ಬರುತ್ತಿದೆ. 1990ರ ದಶಕದಲ್ಲಿ ಆಂಧ್ರಪ್ರದೇಶದ ನಾಗಾರ್ಜುನಕೊಂಡದಲ್ಲಿರುವ ಅಪರೂಪದ ಶಿಲ್ಪ ಕಳ್ಳತನವಾಗಿತ್ತು. ಇದೀಗ ಬೆಲ್ಜಿಯಂನಲ್ಲಿ ಆ ಶಿಲ್ಪ ಸಿಕ್ಕಿದ್ದು, ಬ್ರಸೆಲ್ಸ್​ನಲ್ಲಿರುವ ಭಾರತೀಯ ಹೈಕಮಿಷನರ್​ ಸಂತೋಷ ಜಾ ಅವರಿಗೆ ಹಸ್ತಾಂತರಿಸಲಾಗಿದೆ.

ಗೌತಮ ಬುದ್ಧನ ಜೀವನದಲ್ಲಿ ನಡೆದ ಘಟನೆಗಳನ್ನು ವಿವರಿಸುವ ಶಿಲ್ಪವಿದು. ಆಸ್ಥಾನದಲ್ಲಿನ ವಿಚಾರಣೆಯ ಸಂದರ್ಭವನ್ನು ಇದರಲ್ಲಿ ಬಿಂಬಿಸಲಾಗಿದೆ. ರಾಜ ದಂಪತಿ ಸಿಂಹಾಸನದಲ್ಲಿ ಕುಳಿತಿರುವ ಮತ್ತು ಸೇವಕರು ನಿಂತಿರುವಂತೆ  ಚಿತ್ರಿಸಲಾಗಿದೆ. ಇದರ ಜತೆಗೆ, ಓರ್ವ ಮಹಿಳೆ ಮತ್ತು ಮಗು ಕಲಾಕೃತಿಯಲ್ಲಿ ಕಾಣಿಸುತ್ತಾರೆ.

1995ರಲ್ಲಿ ಈ ಕಲಾಕೃತಿಯ ಚಿತ್ರವನ್ನು ಕೊನೆಯ ಬಾರಿಗೆ ಇತಿಹಾಸಕಾರರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ನಂತರ 2018ರಲ್ಲಿ ಈ ಕಲಾಕೃತಿಯನ್ನು ಬೆಲ್ಜಿಯಂ ಏಷ್ಯನ್ ಆರ್ಟ್ ಟ್ರೇಡ್ ಮಾರಾಟಕ್ಕೆ ಇಟ್ಟಿತ್ತು. ಅಲ್ಲಿಂದ ಎರಡು ವರ್ಷಗಳ ಕಾಲ ಸತತ ಪ್ರಯತ್ನದ ಬಳಿಕ ಈ ಶಿಲ್ಪವನ್ನು ಮರಳಿ ಪಡೆಯಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror