ಪುತ್ತೂರಿನ ಒಳಿತು ಮಾಡು ಮನುಷ್ಯ ತಂಡದ ಕಾರ್ಯಕ್ರಮ

Advertisement
Advertisement

ಪುತ್ತೂರು ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಸಕ್ಷಮ ಪುತ್ತೂರು ಘಟಕದ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 18ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮವು ಪುತ್ತೂರಿನ ‘ರೋಟರಿ ಟ್ರಸ್ಟ್ ಹಾಲ್’ನಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸ್ಥಾಪಕರಾದ ದಂಬೆಕ್ಕನ ಸದಾಶಿವ ರೈ ಮಾತನಾಡಿ ಈ ಕಾರ್ಯಕ್ರಮದಲ್ಲಿ ಮಾನವೀಯತೆ ಮತ್ತು ಮನುಷ್ಯತ್ವ ಕಂಡುಬರುತ್ತಿದೆ.ಯಾರು ಕಷ್ಟದಲ್ಲಿ ಇದ್ದಾರೋ ಯಾರು ಕಣ್ಣೀ ರಲ್ಲಿ ಇದ್ದಾರೋ ಯಾರು ದುಃಖ ದಲ್ಲಿ ಇದ್ದಾರೋ ಅವರಿಗೆ ಒಂದು ಸಹಾಯ ಹಸ್ತ ಇಲ್ಲಿ ಎದ್ದು ಕಾಣುತಿದೆ. ಇವರ ತಂಡ ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ.ಅವರೊಟ್ಟಿಗೆ ಯಾರು ಶಕ್ತಿವಂತರಿದ್ದರೋ ಅವರು ಈ ಕಾರ್ಯಕ್ರಮವನ್ನು ಮುಂದುವರಿಸುವುದು ತುಂಬಾ ಅವಶ್ಯಕತೆ ಇದೆ ಎಂದರು.

Advertisement
Advertisement

ಮುಖ್ಯ ಅತಿಥಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ ಮಾತನಾಡಿ ನಾವು ಸಮಾಜದಲ್ಲಿ ಒಳ್ಳೆ ಕೆಲಸ ಮಾಡುತ್ತಿದ್ದೇವೆ ಎಂದರೆ ಅದು ದೈವನಿಮಿತ್ತ.ಯಾವುದೇ ಫಲಾಪೇಕ್ಷೆಯಿಲ್ಲದೆ ಸ್ವಾರ್ಥ ವಿಲ್ಲದೆ,ಪ್ರಚಾರವಿಲ್ಲದೆ ಒಬ್ಬ ಮನುಷ್ಯ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಅದರಿಂದ ಸಿಗುವ ಆತ್ಮ ತೃಪ್ತಿಯೇ ದೇವರ ವರವಾಗಿರುತ್ತದೆ ಎಂದು ಹೇಳಿದರು.

ಇ ಮುಖ್ಯ ಅತಿಥಿಗಳಾದ ಪೆರ್ಲಂಪಾಡಿಯ  ಹರಿಪ್ರಸಾದ್ ಮಾತನಾಡಿದರು. ಕಾರ್ಯಕ್ರಮದಲ್ಲಿ 52,000 ಸಾವಿರ ಮೊತ್ತದ 52ಆಹಾರ ಕಿಟ್ ವಿತರಣೆ ಮಾಡಲಾಯಿತು.ಹಾಗೂ 40 ಜನರಿಗೆ ಬಿಪಿ, ಶುಗರ್ ತಪಾಸಣೆ ಹಾಗೂ 2 ಜನರು ರಕ್ತದಾನ ಮಾಡಿದರು.

Advertisement
Advertisement
ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳದ ಕಲಾವಿದ ಕೃಷ್ಣಪ್ಪ ಶಿವನಗರ, ಚೇತನ್ ಕುಮಾರ್ ಪುತ್ತೂರು,  ಶೋಭಾ ಮಡಿವಾಳ ಹಾಗೂ ಸದಸ್ಯರು ಹಾಜರಿದ್ದರು. ಶೀಲಾ ಸ್ವಾಗತಿಸಿ ಮಮತಾ ವಂದಿಸಿದರು. ಕು.ಸೌಜನ್ಯಾ ಅರ್ಲಪದವು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಪುತ್ತೂರಿನ ಒಳಿತು ಮಾಡು ಮನುಷ್ಯ ತಂಡದ ಕಾರ್ಯಕ್ರಮ"

Leave a comment

Your email address will not be published.


*