ಸುಮಾರು 5 ಲಕ್ಷ ಆಲಿವ್ ರಿಡ್ಲಿ ಆಮೆಗಳು ಒಡಿಶಾದ ಕೇಂದ್ರಪಾರ ಜಿಲ್ಲೆಯ ಗಹಿರ್ಮತಾ ಸಮುದ್ರ ಅಭಯಾರಣ್ಯದ ಸುಮಾರು 100 ಕಿಲೋಮೀಟರ್ ದೂರದಲ್ಲಿ ರುಶಿಕುಲ್ಯದ ಗೋಖರ್ಕುಡ ಮತ್ತು ಪೊಡಂಪೇಟಾ ದ್ವೀಪಕ್ಕೆ ಆಗಮಿಸಿವೆ. ಮಾರ್ಚ್ 25ರಂದು 2.4 ಲಕ್ಷ ಆಮೆಗಳು, ಮಾರ್ಚ್ 26ರಂದು 1.85 ಲಕ್ಷ ಆಮೆಗಳು, ಮಾರ್ಚ್ 27ರಂದು 65,000 ಆಮೆಗಳು ಮೊಟ್ಟೆಯಿಡಲು ದ್ವೀಪ ಪ್ರದೇಶಕ್ಕೆ ಬಂದಿವೆ.
ಅಳಿವಿನಂಚಿನಲ್ಲಿರುವ ಪ್ರಬೇಧಗಳಲ್ಲಿ ಆಲಿವ್ ರಿಡ್ಲಿ ಆಮೆಗಳನ್ನು ಪಟ್ಟಿ ಮಾಡಲಾಗಿದೆ. ಸುಮಾರು 1 ಸಾವಿರ ಕಿಲೋಮೀಟರ್ ದೂರದಿಂದ ಬರುವ ಆಲಿವ್ ರಿಡ್ಲೆ ಆಮೆಗಳು ಇಲ್ಲಿ ಮೊಟ್ಟೆಯಿಡುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಹಲವು ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
The natures pageant-mass nesting of Olive Ridleys-continues at Odisha coast. The sight unparalleled 💕 pic.twitter.com/JbCVEYzMqq
— Susanta Nanda (@susantananda3) March 28, 2022
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel