#TomatoChallenge | ಟೊಮೆಟೋ ದರ ನಿಭಾಯಿಸಲು ಕೇಂದ್ರದಿಂದ ಹೊಸ ತಂತ್ರ | ಜನರಿಗೆ ‘ಟೊಮ್ಯಾಟೊ ಗ್ರ್ಯಾಂಡ್ ಚಾಲೆಂಜ್’

July 1, 2023
7:35 PM

ಟೊಮ್ಯಾಟೋ ಬೆಲೆ ಏರಿಕೆ ದೇಶದಾದ್ಯಂತ ತಲೆ ನೋವಾಗಿ ಪರಿಣಮಿಸಿದೆ.  ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಕ್ಕೇರಿದೆ. ಈ ಬೆಲೆ ಏರಿಕೆಯನ್ನು ಕಡಿಮೆ ಮಾಡುವುದು ಹೇಗೆ? ಅನ್ನೋ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಬೆಲೆ ಏರಿಕೆ ಸರ್ಕಾರಕ್ಕೆ ದೊಡ್ಡ ತಲೆನೋವವಾಗಿದೆ. ಜನರು ಟೊಮೆಟೊ ಖರೀದಿಗೆ ಹಿಂದೆ -ಮುಂದೆ ನೋಡುತ್ತಿದ್ದಾರೆ. ಅದರೂ ಖರೀದಿ ಅನಿವಾರ್ಯ.

Advertisement
Advertisement
Advertisement

ಇದೀಗ ಕೇಂದ್ರ ಸರ್ಕಾರ ಟೊಮೆಟೊ ಬೆಲೆ ಕಡಿಮೆ ಮಾಡುವುದು ಹೇಗೆ ಇದಕ್ಕೆ ಪರಿಹಾರ ಏನು ಅನ್ನೋದನ್ನು ಜನರಿಂದಲೇ ತಿಳಿದುಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಟೊಮೆಟೊ ಬೆಲೆ ಏರಿಕೆ ಮತ್ತು ಇಳಿಕೆಯನ್ನು ತಡೆಗಟ್ಟಲು “ಟೊಮೆಟೋ ಗ್ರಾಂಡ್ ಚಾಲೆಂಜ್” ​ನ್ನು ತಂದಿದೆ. ಇದರಿಂದ ಜನರಿಂದ ಟೊಮೆಟೋ ಉತ್ಪಾದನೆಯ ಹೆಚ್ಚಳ, ಸಂಸ್ಕರಣೆ, ಸಂಗ್ರಹಣೆ ಹೇಗೆ ಎಂಬುದು ಅಭಿಪ್ರಾಯನ್ನು ಹಂಚಿಕೊಳ್ಳಲು ಈ ಕ್ರಮವನ್ನು ತರಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Advertisement

ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿರುವಂತೆ ಈ ವಾರದಿಂದ ಜನರ ಅಭಿಪ್ರಾಯಕ್ಕೆ ಮುಕ್ತ ಅವಕಾಶ ನೀಡಲು ಟೊಮೆಟೋ ಗ್ರಾಂಡ್ ಚಾಲೆಂಜ್ ಎಂಬುದನ್ನು ಜನರ ಮುಂದೆ ಪ್ರಸ್ತುತಿ ಪಡಿಸಲಾಗುತ್ತಿದೆ. ನಿಮ್ಮ ಸಲಹೆ ನಮಗೆ ಬೇಕು. ನಿಮ್ಮ ಅಭಿಪ್ರಾಯದಿಂದ ಇವುಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. ಈ ಹಿಂದೆ ಈರುಳ್ಳಿ ಬೆಲೆ ಹೆಚ್ಚಾದ ಸಮಯದಲ್ಲೂ ಇಂತಹ ಕಾರ್ಯತಂತ್ರವನ್ನು ಮಾಡಿದ್ದೇವೆ, ಆಗ 600 ಜನರ ಅಭಿಪ್ರಾಯ ಸಂಗ್ರಹ ಮಾಡಿ, ಅದರಲ್ಲಿ 13 ಜನರ ಅಭಿಪ್ರಾಯಕ್ಕೆ ಅನುಗುಣವಾಗಿ ತಜ್ಞರ ಜತೆಗೆ ಚರ್ಚಿಸಿದ್ದೇವೆ ಎಂದು ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪ್ರಾಥಮಿಕ ಸಂಸ್ಕರಣೆ, ನಂತರದ ಕೊಯ್ಲು, ಸಂಗ್ರಹಣೆ ಮತ್ತು ಟೊಮೆಟೊ ಮೌಲ್ಯೀಕರಣ ಮಾಡಲಾಗುವುದು ಎಂದು ಅವರು ಹೇಳಿದರು. ಟೊಮೆಟೋದ ಮೌಲ್ಯವರ್ಧನೆಯನ್ನು ನೀಡುವಾಗ ನಷ್ಟವನ್ನು ಕಡಿಮೆ ಮಾಡಲು ಸಮಗ್ರ ಕಾರ್ಯತಂತ್ರದ ಪರಿಹಾರವನ್ನು ಹೊರತರುವುದು ಇದರ ಉದ್ದೇಶವಾಗಿದೆ. ಇದನ್ನು ನಾಲ್ಕು ಹಂತಗಳಲ್ಲಿ ಅಭಿಪ್ರಾಯ ಸಂಗ್ರಹ ರೂಪಗಳನ್ನು ಮಾಡಲಾಗುತ್ತದೆ.

Advertisement

1. ಟೊಮೆಟೊ ಪ್ರಬೇದಗಳು, ಉತ್ಪಾದನಾ ತಂತ್ರಜ್ಞಾನ, ಹವಾಮಾನ ಪರಿಸ್ಥಿತಿಗಳು, ಸಂಸ್ಕರಣೆ.

2. ಬೆಳೆ ಯೋಜನೆ, ರೈತರಿಗೆ ಮಾರುಕಟ್ಟೆ ಬುದ್ಧಿವಂತಿಕೆ, ರೈತರು/ನರ್ಸರಿಗಳು/ವ್ಯಾಪಾರಿಗಳು/ಗ್ರಾಹಕ ಇಂಟರ್‌ಫೇಸ್‌.

Advertisement

3. ಕೊಯ್ಲು, ನಿರ್ವಹಣೆ ಮತ್ತು ಸಾರಿಗೆ ಸಮಯ.

4. ನವೀನ ಶೇಖರಣಾ ತಂತ್ರಜ್ಞಾನಗಳು ಮತ್ತು ದೀರ್ಘಾವಧಿಯ ಸಂರಕ್ಷಣೆಗಾಗಿ ಪರಿಹಾರಗಳು ಮತ್ತು ಹಾಳಾಗುವಿಕೆಯಿಂದಾಗಿ ಪ್ಯಾನಿಕ್ ಮಾರಾಟವನ್ನು ಕಡಿಮೆ ಮಾಡುವುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror